ವಿಜೇಂದರ್‌ಗೆ ಹುಟ್ಟೂರಲ್ಲಿ 'ಹೀರೋ' ಸ್ವಾಗತಕ್ಕೆ ಸಿದ್ದತೆ

ಭಿವಾನಿ, ಶುಕ್ರವಾರ, 22 ಆಗಸ್ಟ್ 2008 (17:49 IST)

Widgets Magazine

ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಶುಕ್ರವಾರ ಬಾಕ್ಸಿಂಗ್ ಹಣಾಹಣಿಯ ಸೆಮಿ ಫೈನಲ್‌ನಲ್ಲಿ ಕಂಚಿನ ಪದಕ ಜಯಿಸಿರುವ ವಿಜೇಂದರ್ ಹುಟ್ಟೂರಾದ ಹರ್ಯಾಣದ ಭಿವಾನಿ ನಗರದಲ್ಲಿ ಸ್ಥಳೀಯರು,ಸಂಬಂಧಿಗಳು ಸಿಹಿ ಹಂಚಿ ಸಂಭ್ರಮವನ್ನು ಆಚರಿಸಿದರು.

ಒಲಿಂಪಿಕ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ದೇಶಕ್ಕೆ ಗೌರವ ತಂದುಕೊಟ್ಟ ವಿಜೇಂದರ್‌ಗೆ ಊರಿನಲ್ಲಿ 'ಹೀರೋ'ಸ್ವಾಗತ ನೀಡಲಾಗುವುದು.ಅಲ್ಲದೇ ಆತ ಕಾಮನ್‌ ವೆಲ್ತ್ ಗೇಮ್ಸ್‌ನಲ್ಲಿ ಖಂಡಿತವಾಗಿಯೂ ಚಿನ್ನದ ಪದಕವನ್ನು ಗೆಲ್ಲಲಿದ್ದಾನೆ ಎಂದು ವಿಜೇಂದರ್ ತಾಯಿ ಕೃಷ್ಣ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಆದರೂ ಸೆಮಿ ಫೈನಲ್‌ನಲ್ಲಿ ವಿಜೇಂದರ್ ಸೋತಿರುವುದು ತಮಗೆ ನಿರಾಸೆಯಾಗಿರುವುದಾಗಿಯೂ ಅವರು ಈ ಸಂದರ್ಭದಲ್ಲಿ ಹೇಳಿದರು.

ಮುಂದಿನ ಗೇಮ್ಸ್‌ನಲ್ಲಿ ಮತ್ತಷ್ಟು ಬಲಿಷ್ಠನಾಗುವಂತೆ ನಾನು ಆತನನ್ನು ತಯಾರಿಸುವುದಾಗಿ ಹೇಳಿರುವ ಕೃಷ್ಣ,ಆತನಿಗಾಗಿ ಖೀರ್ ಮತ್ತು ಕೂರ್ಮವನ್ನು ನೀಡುವ ಮೂಲಕ ದೈಹಿಕವಾಗಿ ಗಟ್ಟಿಯಾಗುವಂತೆ ಮಾಡುತ್ತೇನೆ ಎಂದು ಹೇಳಿದರು.

ಭಿವಾನಿಯ ಕಾಲೂವಾ ಹಳ್ಳಿಯಲ್ಲಿರುವ ಮನೆಯ ಹೊರಗೆ ವಿಜೇಂದರ್ ಬಾಕ್ಸಿಂಗ್ ಹಣಾಹಣಿಯ ವೀಕ್ಷಣೆಗಾಗಿ ವಿಶೇಷ ಪ್ರೊಜೆಕ್ಷನ್ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿತ್ತು.ಈ ಗ್ರಾಮದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಶಾಲೆಗೆ ಚಕ್ಕರ್ ಹೊಡೆದು,ವಿಜೇಂದರ್ ಹೋರಾಟವನ್ನು ವೀಕ್ಷಿಸಲು ಭಾಗವಹಿಸಿದ್ದರಂತೆ.

ವಿಜೇಂದರ್ ನಮ್ಮ ಹೀರೋ, ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ದೊರೆತ ಮೊದಲ ಪದಕ ಇದಾಗಿದೆ.ಆ ನಿಟ್ಟಿನಲ್ಲಿ ನಾವು ಆತನನ್ನ ಅಭಿನಂದಿಸುವುದಾಗಿ ವಿಜೇಂದರ್ ಸಹೋದರಿಯ ರಾದ ಸಂಗೀತಾ ಮತ್ತು ಪೂನಮ್ ಅಭಿಪ್ರಾಯ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

ಭಾರತೀಯ ಹಾಕಿ ತಂಡ ಯೂರೋಪ್‌‌ಗೆ ತೆರಳಲು ಸಜ್ಜಾಗಿದೆ

ನವದೆಹಲಿ :ಮುಂದಿ ದಿನಗಳಲ್ಲಿ ನಡೆಯಲಿರುವ ಹಾಕಿ ವಿಶ್ವ ಕಪ್‌‌ಗಾಗಿ ಸಿದ್ದತೆ ನಡೆಸುತ್ತಿರುವ ಇಂಡಿಯನ್‌ ...

ಧೋನಿ ಹೇಳಿಕೆ ಪರಿಶೀಲಿಸಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಅರ್ಜಿ

ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುದ್ಗಲ್ ಸಮಿತಿಯ ಮುಂದೆ ...

ಟೆನಿಸ್‌‌‌ ಶ್ರೇಯಾಂಕ: ಭಾರತೀಯರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ : ಭಾರತದ ಡೆವಿಸ್‌‌‌‌ಕಪ್‌ನಲ್ಲಿ ಸೋಮದೇವ್ ದೇವವರ್ಮನ್ ಕೊರಿಯಾ ವಿರುದ್ದ ಗೆಲುವನ್ನು ಸಾಧಿಸುವುದರ ...

ಯುವಿಯನ್ನು ಸಮರ್ಥಿಸಿಕೊಂಡು ಸಚಿನ್ ಬ್ಯಾಟಿಂಗ್

ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ...

Widgets Magazine