ವಿಜೇಂದರ್‌‌ಗೆ ಸಚಿವ ಗಿಲ್ ಶಹಬ್ಬಾಸ್ ‌‌ಗಿರಿ

ನವದೆಹಲಿ, ಶುಕ್ರವಾರ, 22 ಆಗಸ್ಟ್ 2008 (16:48 IST)

ಬೀಜಿಂಗ್ ಒಲಿಂಪಿಕ್ ಗೇಮ್ಸ್‌ನಲ್ಲಿ ಭಾರತದ ಕುಸ್ತಿಪಟು ವಿಜೇಂದರ್ ಕುಮಾರ್ ಅವರು ಫೈನಲ್ ತಲುಪುವ ಅವಕಾಶವನ್ನು ಕಳೆದುಕೊಂಡಿದ್ದರು ಕೂಡ,ಅತ್ಯಂತ ಚಾಕಚಕ್ಯತೆ ಯಿಂದ ಸೆಮಿಫೈನಲ್‌ವರೆಗೆ ಸೆಣಸಿ ಕಂಚಿನ ಪದಕ ತಂದುಕೊಟ್ಟ ವಿಜೇಂದರ್ ಸಾಧನೆ ಶ್ಲಾಘನೀಯವಾದದ್ದು ಎಂದು ಕ್ರೀಡಾಸಚಿವ ಎಂ.ಎಸ್.ಗಿಲ್ ಅವರು ಶಹಬ್ಬಾಸ್ ಗಿರಿ ನೀಡಿದ್ದಾರೆ.

ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟ ಮುಗಿದ ಬಳಿಕ ಆಗೋಸ್ಟ್ 25ಕ್ಕೆ ವಿಜೇಂದರ್ ತಾಯ್ನಾಡಿಗೆ ಹಿಂತಿರುಗುತ್ತಿರುವುದನ್ನೇ ಎದುರು ನೋಡುತ್ತಿರುವುದಾಗಿ ಅವರು ಹೇಳಿದರು.

ವಿಜೇಂದರ್ ಫೈನಲ್ ತಲುಪಲಾಗದ್ದಕ್ಕೆ ಬೇಸರ ಇದೆ,ಆದರೆ ಎದುರಾಳಿ ವಿರುದ್ಧ ವಿಜೇಂದರ್ ಅವರು ಶಾಂತ ಮನಸ್ಥಿತಿಯಿಂದ, ಚಾಕಚಕ್ಯತೆಯಿಂದ ಸಣಸಾಡಿರುವುದಕ್ಕೆ ಅಭಿನಂದಿಸುತ್ತಿರುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಒಲಿಂಪಿಕ್ ಕ್ರೀಡಾಕೂಟದಲ್ಲಿ ಶುಕ್ರವಾರ ನಡೆದ ಬಾಕ್ಸಿಂಗ್ ಸೆಮಿಫೈನಲ್ ಹಣಾಹಣಿಯಲ್ಲಿ ವಿಜೇಂದರ್ ಕುಮಾರ್ ಅವರು ಕ್ಯೂಬಾದ ಎಮೋಲಿ ಕೊರ್ರೆಯಾ ವಿರುದ್ಧ ಪರಾಜಯ ಗೊಳ್ಳುವ ಮೂಲಕ ಫೈನಲ್ ಪ್ರವೇಶದ ಕನಸು ಭಗ್ನಗೊಂಡಿತ್ತು. ಆದರೆ ವಿಜೇಂದರ್ ಅವರು ಕಂಚಿನ ಪದಕದೊಂದಿಗೆ ತಾಯ್ನಾಡಿಗೆ ಮರಳುತ್ತಿರುವುದು ಕ್ರೀಡಾಭಿಮಾನಿಗಳಲ್ಲಿ ಸಂತೋಷದ ಹೊನಲು ತರಿಸಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

ಭಾರತೀಯ ಹಾಕಿ ತಂಡ ಯೂರೋಪ್‌‌ಗೆ ತೆರಳಲು ಸಜ್ಜಾಗಿದೆ

ನವದೆಹಲಿ :ಮುಂದಿ ದಿನಗಳಲ್ಲಿ ನಡೆಯಲಿರುವ ಹಾಕಿ ವಿಶ್ವ ಕಪ್‌‌ಗಾಗಿ ಸಿದ್ದತೆ ನಡೆಸುತ್ತಿರುವ ಇಂಡಿಯನ್‌ ...

ಧೋನಿ ಹೇಳಿಕೆ ಪರಿಶೀಲಿಸಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಅರ್ಜಿ

ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುದ್ಗಲ್ ಸಮಿತಿಯ ಮುಂದೆ ...

ಟೆನಿಸ್‌‌‌ ಶ್ರೇಯಾಂಕ: ಭಾರತೀಯರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ : ಭಾರತದ ಡೆವಿಸ್‌‌‌‌ಕಪ್‌ನಲ್ಲಿ ಸೋಮದೇವ್ ದೇವವರ್ಮನ್ ಕೊರಿಯಾ ವಿರುದ್ದ ಗೆಲುವನ್ನು ಸಾಧಿಸುವುದರ ...

ಯುವಿಯನ್ನು ಸಮರ್ಥಿಸಿಕೊಂಡು ಸಚಿನ್ ಬ್ಯಾಟಿಂಗ್

ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ...

Widgets Magazine
Widgets Magazine