ಟೀಂ ಇಂಡಿಯಾ ಸೋತರೇನಂತೆ? ಧೋನಿ ಮಾಡಿದ ದಾಖಲೆಯಿದು

Kanpur, ಶುಕ್ರವಾರ, 27 ಜನವರಿ 2017 (10:14 IST)

ಕಾನ್ಪುರ:  ಇಂಗ್ಲೆಂಡ್ ವಿರುದ್ಧ ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳಿಂದ ಸೋತಿರಬಹುದು. ಆದರೆ ಧೋನಿ, ಸುರೇಶ್ ರೈನಾ ಸೋಲಿನ ಪಂದ್ಯದಲ್ಲೂ ದಾಖಲೆ ಮಾಡಿ ಮಿಂಚಿದರು.
 

ಈ ಪಂದ್ಯದಲ್ಲಿ ಗರಿಷ್ಠ ಸ್ಕೋರರ್ ಆಗಿದ್ದ ಮಹೇಂದ್ರ ಸಿಂಗ್ ಧೋನಿ ಇಂಗ್ಲೆಂಡ್ ವಿರುದ್ದ ಟಿ-ಟ್ವೆಂಟಿ ಪಂದ್ಯದಲ್ಲಿ ಗರಿಷ್ಠ ಸರಾಸರಿ (50 ಪ್ಲಸ್) ಹೊಂದಿದ ಮೊದಲ ಆಟಗಾರ ಎನಿಸಿಕೊಂಡರು. ವಿಶ್ವದ ಇತರ ಬ್ಯಾಟ್ಸ್ ಮನ್ ಗಳ ಪೈಕಿ ಇಂಗ್ಲೆಂಡ್ ವಿರುದ್ಧ ಗರಿಷ್ಠ ಸರಾಸರಿ ಹೊಂದಿದ ಐದನೇ ಬ್ಯಾಟ್ಸ್ ಮನ್ ಎನ್ನುವ ಗೌರವಕ್ಕೆ ಧೋನಿ ಪಾತ್ರರಾದರು.
 
ಸುರೇಶ್ ರೈನಾ ಟಿ-ಟ್ವೆಂಟಿ ಪಂದ್ಯಗಳಲ್ಲಿ ತಮ್ಮ ಎರಡನೇ ಗರಿಷ್ಠ ರನ್ (34) ಸ್ಕೋರ್ ಮಾಡಿದರು. ಇದಕ್ಕೂ ಮೊದಲು ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಅವರು 49 ರನ್ ಗಳಿಸಿದ್ದೇ ಗರಿಷ್ಠ ರನ್ ಆಗಿದೆ. ಯುವ ಬೌಲರ್ ಯಜುವೇಂದ್ರ ಚಾಹಲ್ ಟಿ-ಟ್ವೆಂಟಿ ಮಾದರಿಯಲ್ಲಿ ಜೀವನ ಶ್ರೇಷ್ಠ ಸಾಧನೆ ಮಾಡಿದರು.  ಈ ಪಂದ್ಯದಲ್ಲಿ 27 ರನ್ ಕೊಟ್ಟು 2 ವಿಕೆಟ್ ಕಿತ್ತಿದ್ದಾರೆ.
 
ಮೊಯಿನ್ ಆಲಿ ಇದು ಮೂರನೇ ಬಾರಿ ಕಿರು ಮಾದರಿಯಲ್ಲಿ ಭಾರತದ  ವಿರುದ್ಧ ಪಂದ್ಯ ಶ್ರೇಷ್ಠ ಪಡೆದ ದಾಖಲೆ ಮಾಡುತ್ತಿರುವುದು. ಇನ್ನು ಇಂಗ್ಲೆಂಡ್ ಭಾರತದ ವಿರುದ್ಧ ಕಿರು ಮಾದರಿಯಲ್ಲಿ ಗರಿಷ್ಠ ಅಂತರದಿಂದ ಗೆದ್ದ ಸಾಧನೆ ಮಾಡಿತು. ಇದರೊಂದಿಗೆ ಇಂಗ್ಲೆಂಡ್ ಭಾರತದ ವಿರುದ್ಧ ಆಡಿದ 9 ಟಿ-ಟ್ವೆಂಟಿ ಪಂದ್ಯಗಳ ಪೈಕಿ 6 ನ್ನು ಗೆದ್ದು ಬೀಗಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಮೊದಲ ಚುಂಬನದಲ್ಲೇ ದಂತಭಗ್ನವಾಗಿದ್ದಕ್ಕೆ ವಿರಾಟ್ ಕೊಹ್ಲಿಗೆ ಬೇಸರ

ಮೊದಲ ಬಾರಿಗೆ ಟೆಸ್ಟ್ ಪಂದ್ಯದಲ್ಲಿ, ಮೊದಲ ಬಾರಿಗೆ ಏಕದಿನ ಪಂದ್ಯದಲ್ಲಿ ನಾಯಕರಾಗಿ ಟೀಂ ಇಂಡಿಯಾವನ್ನು ...

news

ನ್ಯೂಜಿಲೆಂಡ್ ನ ಮ್ಯಾಚ್ ರೆಫರಿ ಜೆಫ್ ಕ್ರೊವ್ ಮಾಡಿದ ವಿಶಿಷ್ಟ ದಾಖಲೆಯಿದು

ಕ್ರಿಕೆಟ್ ಮೈದಾನದಲ್ಲಿ ಆಡುವ ಆಟಗಾರರು ದಾಖಲೆ ನಿರ್ಮಿಸುವುದು ಸಹಜ. ಆದರೆ ನ್ಯೂಜಿಲೆಂಡ್ ಮೂಲದ ಜೆಫ್ ...

news

‘ಪದ್ಮ ಪ್ರಶಸ್ತಿ ಪಡೆಯಲು ಇನ್ನೂ ಏನು ಸಾಧನೆ ಮಾಡಬೇಕು?’

16 ವಿಶ್ವಕಪ್, 2 ಏಷ್ಯನ್ ಗೇಮ್ಸ್ ಚಿನ್ನ ಗೆದ್ದಿದ್ದೇನೆ. ದೇಶದ ಉನ್ನತ ನಾಗರಿಕ ಪ್ರಶಸ್ತಿ ಪದ್ಮ ...

news

ಮೊದಲ ಟಿ-ಟ್ವೆಂಟಿ ಪಂದ್ಯದಲ್ಲೇ ಟೀಂ ಇಂಡಿಯಾಕ್ಕೆ ಸೋಲು

ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕೇವಲ 147 ರನ್ ಗಳಿಸಿದಾಗಲೇ ಸೋಲಿನ ವಾಸನೆ ಹಿಡಿದಿತ್ತು. ಜೋ ರೂಟ್, ಇಯಾನ್ ...

Widgets Magazine