ಮುಂಬೈ ರಸ್ತೆಯಲ್ಲಿ ಯುವಕರಿಗೆ ಹೆಲ್ಮೆಟ್ ಪಾಠ ಹೇಳಿದ ಸಚಿನ್

ಮುಂಬೈ, ಭಾನುವಾರ, 9 ಏಪ್ರಿಲ್ 2017 (17:41 IST)

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನಿವೃತ್ತಿ ಬಳಿಕ ಹಳ್ಳಿಗಳನ್ನ ದತ್ತು ಪಡೆದು ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿದ್ದನ್ನ ಕೇಳಿದ್ದೇವೆ. ಇಂದು ಮುಂಬೈನಲ್ಲಿ ಯುವಕರಿಗೆ ಹೆಲ್ಮೆಟ್ ಪಾಠ ಹೇಳುವ ಮೂಲಕ ಸಚಿನ್ ಗಮನ ಸೆಳೆದಿದ್ದಾರೆ.


ಸಚಿನ್ ಕಾರಿನಲ್ಲಿ ತೆರಳುತ್ತಿದ್ದಾಗ ಸಿಗ್ನಲ್ ಬಳಿ ಕಾರಿನ ಪಕ್ಕದಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ಚಾಲಿಸುತ್ತಿದ್ದ ಯುವಕರನ್ನ ಗಮನಿಸಿ ಮಾತನಾಡಿಸಿದ್ದಾರೆ. ರಸ್ತೆ ಸುರಕ್ಷತೆ ನಮ್ಮ ಅತ್ಯಂತ ಪ್ರಾಧಾನ್ಯ ವಿಷಯವಾಗಬೇಕು. ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಬೇಡಿ, ಜೀವ ತುಂಬಾ ಅಮೂಲ್ಯವಾದದ್ದು, ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಅಪಾಯಕಾರಿ ಎಂದು ಸಲಹೆ ನೀಡಿದ ಸಚಿನ್, ಮತ್ತೊಮ್ಮೆ ಬೈಕ್ ಓಡಿಸುವಾಗ ಹೆಲ್ಮೆಟ್ ಹಾಕಿರುವಂತೆ ಪ್ರಮಾಣ ಮಾಡಿಸಿಕೊಂಡಿದ್ದಾರೆ.

ಸಚಿನ್ ಈ ವಿಡಿಯೋವನ್ನ ಟ್ವಿಟ್ಟರ್`ನಲ್ಲಿ ಶೇರ್ ಮಾಡಿದ್ದು ವೈರಲ್ ಆಗಿದೆ. ಸಮಾಜದ ಹಲವು ಪ್ರಖ್ಯಾತರು ತಮ್ಮ ಖ್ಯಾತಿ ಈ ರೀತಿ ಬಳಸಿದರೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬಹುದಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟಿ-20 ಕ್ರಿಕೆಟ್ ನಲ್ಲಿ ಧೋನಿ ವಿಶಿಷ್ಟ ದಾಖಲೆ!

ಪುಣೆ: ಟಿ-ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ವಿಶಿಷ್ಟ ದಾಖಲೆ ಮಾಡಿದ್ದಾರೆ. ...

news

ವಿರಾಟ್ ಕೊಹ್ಲಿಗಾಗಿ ಕಾಯುತ್ತಿರುವ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್!

ಬೆಂಗಳೂರು: ವಿರಾಟ್ ಕೊಹ್ಲಿ ಯಾವಾಗ ಬರುತ್ತಾರೆ ಎಂದು ಕಾಯುತ್ತಿರುವ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳು ಈ ...

news

ಕೊಹ್ಲಿ, ಡಿವಿಲಿಯರ್ಸ್ ಇಲ್ಲದಿದ್ದರೂ ಗೆದ್ದು ತೋರಿಸಿದ ಆರ್`ಸಿಬಿ

ವಿರಾಟ್ ಕೊಹ್ಲಿ, ಡಿವಿಲಿಯರ್ಸ್ ಇಲ್ಲದಿದ್ದರೂ ಬೆಂಗಳೂರಿನಲ್ಲಿ ನಡೆದ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ...

news

ಮ್ಯಾಕ್ಸ್`ವೆಲ್ ಹೊಡೆತಕ್ಕೆ ಮಕಾಡೆ ಮಲಗಿದ ಪುಣೆ: ಪಂಜಾಬ್`ಗೆ 6 ವಿಕೆಟ್`ಗಳ ಭರ್ಜರಿ ಜಯ

ಇಂಧೋರ್`ನಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ ನಡುವಿನ ಐಪಿಎಲ್ ...

Widgets Magazine
Widgets Magazine