ತಮ್ಮ ವಿರುದ್ಧದ ಆರೋಪವನ್ನು ತಳ್ಳಿ ಹಾಕಿದ ಸರ್ದಾರ್ ಸಿಂಗ್

ಲೂಧಿಯಾನಾ‌, ಬುಧವಾರ, 3 ಫೆಬ್ರವರಿ 2016 (09:33 IST)

Widgets Magazine

ತಮ್ಮ ಬಹುಕಾಲದ ಗೆಳತಿ, ಇಂಗ್ಲೆಂಡ್ ಹಾಕಿ ತಂಡದ ಆಟಗಾರ್ತಿ ಮಾಡಿರುವ ಲೈಂಗಿಕ ದೌರ್ಜನ್ಯದ ಆರೋಪವನ್ನು ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ತಳ್ಳಿ ಹಾಕಿದ್ದಾರೆ. 

ನವದೆಹಲಿಯಲ್ಲಿ ಪತ್ರಿಕಾ ವರದಿಗಾರರ ಜತೆ ಮಾತನಾಡುತ್ತಿದ್ದ ಅವರು, ನಿನ್ನೆ ರಾತ್ರಿಯಷ್ಟೇ ಒಂದು ಹಾಕಿ ಪಂದ್ಯವನ್ನು ಆಡಿದ್ದೇನೆ(ಹೆಚ್ಐಎಲ್), ನಾಳೆ ಒಂದು ಆಡಬೇಕಿದೆ. ಹೀಗಾಗಿ ತಾನು ಪಂದ್ಯ ಮುಗಿದ ಬಳಿಕ ಆರೋಪಗಳಿಗೆ ಸ್ಪಷ್ಟನೆ ನೀಡಲಿದ್ದೇನೆ ಎಂದು ಹೇಳಿದ್ದಾರೆ.
 
ತಮ್ಮ ವಿರುದ್ಧದ ಆರೋಪಗಳು ಬಹಳ ಗಂಭೀರವಾಗಿವೆ ಎಂಬುದನ್ನು ಒಪ್ಪಿಕೊಂಡಿರುವ ಅವರು ಬ್ರಿಟಿಷ್ ಪ್ರಜೆಯ ಜತೆ ನನ್ನ ನಿಶ್ಚಿತಾರ್ಥವಾಗಿರುವುದು ಸುಳ್ಳು ಎಂದಿದ್ದಾರೆ.
 
ಭಾರತ ಹಾಕಿ ತಂಡದ ನಾಯಕ ಸರ್ದಾರ್‌ ಸಿಂಗ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಗಂಭೀರ ಕೇಳಿ ಬಂದಿದ್ದು,  ಲೂಧಿಯಾನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಕಳೆದ ನಾಲ್ಕು ವರ್ಷಗಳ ಹಿಂದೆ 2012 ಲಂಡನ್ ಒಲಿಂಪಿಕ್ಸ್‌‌ನಲ್ಲಿ ನಮ್ಮಿಬ್ಬರ ಪರಿಚಯವಾಗಿತ್ತು.  ಪರಸ್ಪರ ಪ್ರೀತಿಸಿ, ನಿಶ್ಚಿತಾರ್ಥ ಮಾಡಿಕೊಂಡಿದ್ದೆವು. ಕಳೆದ ನಾಲ್ಕು ವರ್ಷಗಳಿಂದ ನಾನು ಆತನ ಜತೆ ವಾಸಿಸುತ್ತಿದ್ದೆ. ಆತ ತನ್ನೊಂದಿಗೆ ದೈಹಿಕ ಸಂಬಂಧವನ್ನು ಕೂಡ ಬೆಳೆಸಿದ್ದಾನೆ ಎಂದು ಲಂಡನ್ ಹಾಕಿ ತಂಡದ ಆಟಗಾರ್ತಿಯಾಗಿರುವ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. 
 
ತಾನು ಗರ್ಭಿಣಿಯಾಗಿರುವುದಾಗಿ ಸರ್ದಾರ್ ಸಿಂಗ್ ಅವರಿಗೆ ಹೇಳಿದಾಗ ಗರ್ಭಪಾತ ಮಾಡಿಸಲು ಹೇಳಿದ್ದಾರೆ. ಅದನ್ನು ನಾನು ತಳ್ಳಿ ಹಾಕಿದಾಗಿನಿಂದಲೂ ಸರ್ದಾರ್‌ ಸಿಂಗ್‌ ತನಗೆ ಮಾನಸಿಕ, ದೈಹಿಕ ಹಾಗೂ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ

ಭಾರತ ಹಾಕಿ ತಂಡದ ನಾಯಕ ಸರ್ದಾರ್‌ ಸಿಂಗ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಕೇಳಿ ಬಂದಿದೆ. ...

news

ಐಪಿಎಲ್ 2016: ಸುರೇಶ್ ರೈನಾ ಗುಜರಾತ್ ಲಯನ್ಸ್ ನಾಯಕ

ಭಾರತದ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರು ರಾಜಕೋಟ್ ತಂಡವಾದ ಗುಜರಾತ್ ಲಯನ್ಸ್‌ಗೆ ನಾಯಕರಾಗಲಿದ್ದಾರೆ. ...

news

ಶ್ರೀಲಂಕಾ ವಿರುದ್ಧ ಟ್ವೆಂಟಿ 20ಯಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ

ಶ್ರೀಲಂಕಾ ವಿರುದ್ಧ ಪುಣೆಯಲ್ಲಿ ಫೆ.9ರಿಂದ ಆರಂಭವಾಗುವ ಮೂರು ಪಂದ್ಯಗಳ ಟ್ವೆಂಟಿ 20 ಅಂತಾರಾಷ್ಟ್ರೀಯ ...

news

ಟಿ 20 ಸರಣಿಯಲ್ಲಿ ಆಸ್ಟ್ರೇಲಿಯಾ ವಾಷ್‌ಔಟ್: 3ನೇ ಪಂದ್ಯವನ್ನೂ ಗೆದ್ದ ಭಾರತ

ಸಿಡ್ನಿ: ಕೊನೆಯ ಓವರಿನಲ್ಲಿ ಭಾರತಕ್ಕೆ 17 ರನ್ ಬೇಕಾಗಿತ್ತು. ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ...

Widgets Magazine