ಮೇ 13ರಂದು ಪೋಲೆಂಡ್ ಆಂಡ್ರೆಜ್ ಸೋಲ್ಡ್ರಾ, ವಿಜೇಂದರ್ ಹಣಾಹಣಿ

ಬೋಲ್ಟನ್, ಶನಿವಾರ, 7 ಮೇ 2016 (16:03 IST)

Widgets Magazine

  ಭಾರತದ  ವೃತ್ತಿಪರ ಬಾಕ್ಸಿಂಗ್ ಸ್ಟಾರ್ ವಿಜೇಂದರ್ ಸಿಂಗ್ ಅವರು ಪೋಲೆಂಡ್ ಆಂಡ್ರೆಜ್ ಸೋಲ್ಡ್ರಾ ಅವರನ್ನು ಮೇ 13ರಂದು ನಡೆಯುವ ವೃತ್ತಿಪರ ಬಾಕ್ಸಿಂಗ್ ಹಣಾಹಣಿಯಲ್ಲಿ ಎದುರಿಸಲಿದ್ದು, ಅದರ ಬೆನ್ನ ಹಿಂದೆಯೇ ಸ್ವದೇಶಿ ಅಖಾಡದಲ್ಲಿ ಜೂನ್ 11ರಂದು ಅತ್ಯಂತ ನಿರೀಕ್ಷಿತ ಡಬ್ಲ್ಯುಬಿಒ ಏಷ್ಯಾ ಟೈಟಲ್ ಹೋರಾಟ ನಡೆಯಲಿದೆ. 
 
ಬೋಲ್ಟನ್ ಪ್ರೀಮಿಯರ್ ಸೂಟ್‌ನ ಮಾಕ್ರಾನ್ ಸ್ಟೇಡಿಯಂನಲ್ಲಿ ವಿಜೇಂದರ್ ಅವರು ಆಂಡ್ರೆಜ್ ಸೋಲ್ಡ್ರಾ ಅವರನ್ನು ಎದುರಿಸಲಿದ್ದಾರೆ.  30 ವರ್ಷ ವಯಸ್ಸಿನ  ಭಾರತೀಯ ಸೂಪರ್ ಮಿಡಲ್ ವೈಟ್ ಬಾಕ್ಸರ್ ಐದು ಹೋರಾಟಗಳಲ್ಲಿ ಐದನ್ನೂ ಗೆದ್ದು ಅಜೇಯರಾಗಿ ಉಳಿದಿದ್ದಾರೆ.  ಸೋಲ್ಡ್ರಾ 16 ಹೋರಾಟಗಳಲ್ಲಿ ದಾಖಲೆಯ 12 ಗೆಲುವು ಮತ್ತು 5 ನಾಕ್‍ಔಟ್‍‌ಗಳೊಂದಿಗೆ ವಿಜೇಂದರ್ ಅವರಿಗೆ ಮುಖಾಮುಖಿಯಾಗಲಿದ್ದಾರೆ. 
 
ಸೋಲ್ಡ್ರಾ ಅವರನ್ನು ವಿಜೇಂದರ್‌ಗೆ ಹೋಲಿಸಿದರೆ ಹೆಚ್ಚು ಅನುಭವಿಯಾಗಿದ್ದು, 81 ಸುತ್ತುಗಳನ್ನು ಆಡಿದ್ದಾರೆ. ಹವ್ಯಾಸಿ ವೃತ್ತಿಜೀವನದಲ್ಲಿ ಮನೋಜ್ಞ ದಾಖಲೆ ಹೊಂದಿರುವ ಸೋಲ್ಡ್ರಾ 98 ಹೋರಾಟಗಳಲ್ಲಿ 82 ಗೆಲುವುಗಳನ್ನು ಗಳಿಸಿದ್ದಾರೆ. 
 
ತಮ್ಮ 6ನೇ ಹೋರಾಟ ಕುರಿತು ಹೇಳಿದ ವಿಜೇಂದರ್, ತಾವು ಸೋಲ್ಡ್ರಾ ಅವರ  ಹೋರಾಟದ ವಿಡಿಯೊಗಳನ್ನು ನೋಡಿದ್ದು, ಅವರು ಉತ್ತಮ ಎದುರಾಳಿಯಾಗಿದ್ದಾರೆ. ಆದರೆ ಅಖಾಡದಲ್ಲಿ ಅವರಿಗೆ ಕಠಿಣ ಹೋರಾಟ ನೀಡಲು ನಾನು ಕಠಿಣ ಅಭ್ಯಾಸ ಮಾಡಿದ್ದೇನೆ.  ಈ ಹೋರಾಟ ತನಗೆ ಅತ್ಯಂತ ನಿರ್ಣಾಯಕವಾಗಿದ್ದು, ನನ್ನ ಅಜೇಯ ದಾಖಲೆ ಮುಂದುವರಿಸಬೇಕಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಧವನ್ 47 ರನ್: ಸನ್‌ರೈಸರ್ಸ್‌ಗೆ ಗುಜರಾತ್ ಲಯನ್ಸ್ ವಿರುದ್ಧ ಜಯ

ಹೈದರಾಬಾದ್: ಶಿಖರ್ ಧವನ್ ಅವರ ಬಿರುಸಿನ 40 ಎಸೆತಗಳಲ್ಲಿ 47 ರನ್ ಮತ್ತು ಮುಸ್ತಫಿಜುರ್ ಮತ್ತು ಭುವನೇಶ್ವರ್ ...

news

ಮೈದಾನದಲ್ಲಿ ಕುಸಿದು ಬಿದ್ದು ಮೃತಪಟ್ಟ ಕ್ಯಾಮರೂನ್ ಫುಟ್ಬಾಲ್ ಆಟಗಾರ

ಕ್ಯಾಮರೂನ್ ಅಂತಾರಾಷ್ಟ್ರೀಯ ಆಟಗಾರ ಪ್ಯಾಟ್ರಿಕ್ ಎಕೆಂಗ್ ಮೊದಲ ಡಿವಿಷನ್ ಪಂದ್ಯವಾಡುವಾಗ ಮೈದಾನದಲ್ಲಿ ...

news

2016ನೇ ಸೀಸನ್‌ನ 5 ನೇ ಪ್ರಶಸ್ತಿಗೆ ಸಮೀಪದಲ್ಲಿ ಸಾನಿಯಾ, ಮಾರ್ಟಿನಾ

ಮ್ಯಾಡ್ರಿಡ್: ಟಾಪ್ ಸೀಡ್‌ಗಳಾದ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಸೆಮಿಫೈನಲ್ ಪಂದ್ಯದಲ್ಲಿ ...

news

ರಹಾನೆ ಮನೋಜ್ಞ ಅರ್ಧಶತಕ: ಡೆಲ್ಲಿ ವಿರುದ್ಧ ಪುಣೆಗೆ ಗೆಲುವು

ಡೆಲ್ಲಿ: ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ನಡುವೆ ನಡೆದ ಐಪಿಎಲ್ ...

Widgets Magazine