Widgets Magazine
Widgets Magazine

ಬೇಬಿ ಕಾರ್ನ್ ಮಂಚೂರಿ

ಬೆಂಗಳೂರು, ಶನಿವಾರ, 27 ಮೇ 2017 (16:35 IST)

Widgets Magazine

ಬೇಕಾಗುವ ಸಾಮಗ್ರಿಗಳು
 
ಚಿಕ್ಕ ಚಿಕ್ಕದಾಗಿ ಕತ್ತರಿಸಿದ ಕಾರ್ನ್ -1 ಕಪ್
ಮೈದಾ ಹಿಟ್ಟು - 1 ಕಪ್
ಬೇಯಿಸಿದ ಟೊಮ್ಯಾಟೊ -4
ಈರುಳ್ಳಿ- 2
ಹಸಿ ಮೆಣಸು -2
ಕತ್ತರಿಸಿಟ್ಟುಕೊಂಡ ದೊಡ್ಡ ಮೆಣಸು-ಸ್ವಲ್ಪ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ -2 ಚಮಚ
ಅಚ್ಚ ಖಾರದ ಪುಡಿ - ಸ್ವಲ್ಪ
ಅರಿಷಿಣ- ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ
 
 ಮಾಡುವ ವಿಧಾನ
* ಮೈದಾಹಿಟ್ಟು, ಅಚ್ಚ ಖಾರದ ಪುಡಿ ಎರಡು ಚಮಚ, ಚಿಟಿಕೆ ಅರಿಷಿಣ, ಉಪ್ಪು ಹಾಕಿ ಕಲಸಿ. ಈಗ ಕತ್ತರಿಸಿದ ಕಾರ್ನ್ ಗಳನ್ನು ಈ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಕರಿದು ಇರಿಸಿಕೊಳ್ಳಿ.
 
ಈಗ ಮಿಕ್ಸಿಗೆ ಬೇಯಿಸಿದ ಟೊಮ್ಯಾಟೊ, ಹಸಿಮೆಣಸು, ಸ್ವಲ್ಪ ಉಪ್ಪು ಸೇರಿಸಿ ರುಬ್ಬಿ. 
 
* ಒಂದು ಪ್ಯಾನ್ ಗೆ ಎರಡು ಚಮಚ ಎಣ್ಣೆ,ಉದ್ದುದ್ದ ಹೆಚ್ಚಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಬ್ಬಿದ ಮಿಶ್ರಣ ಹಾಕಿ ಕುದಿಸಿ. ಈಗ ಇದಕ್ಕೆ ಕರಿದಿಟ್ಟ ಕಾರ್ನ್ ಸೇರಿಸಿ ಚೆನ್ನಾಗಿ ಕಲಸಿ.
 
*ಇದನ್ನು ಒಂದು ಪ್ಲೇಟ್ ಗೆ ಹಾಕಿ ಅದರ ಮೇಲೆ ಕೊತ್ತಂಬರಿ ಸೊಪ್ಪು ಹಾಗೂ ಹೆಚ್ಚಿದ ಈರುಳ್ಳಿಯನ್ನು ಹಾಕಿ ಅಲಂಕರಿಸಿದರೆ  ಬೇಬಿ ಕಾರ್ನ್ ಮಂಚೂರಿ ಸಾಯಂಕಾಲದ ಟೀ-ಕಾಫಿ ಜತೆ ಸವಿಯಲು ಸಿದ್ಧ. 
 


Widgets Magazine

Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಯೋಗಾದಲ್ಲಿ ಶುರುವಾಗಿದೆ ಹೊಸ ಟ್ರೆಂಡ್: ನೀವೂ ಮಾಡಿ ನೋಡಿ ’ಮೇಕೆ ಯೋಗಾ’

ಇತ್ತೀಚಿನ ದಿನಗಳಲ್ಲಿ ಯೋಗಾದಲ್ಲಿ ಒಂದು ಹೊಸ ಟ್ರೆಂಡ್ ಶುರುವಾಗಿದೆ. ಅದೇನೆಂದರೆ ’ಗೋಟ್ ಯೋಗ’(Goat Yoga) ...

news

ನೀವೂ ಕಡಿಮೆ ನಿದ್ದೆ ಮಾಡ್ತೀರಾ..? ತಪ್ಪದೇ ಈ ಸುದ್ದಿ ನೋಡಿ

ಸೂಕ್ತ ಪ್ರಮಾಣದ ನಿದ್ದೆ ಪ್ರತಿಯೊಬ್ಬರಿಗೂ ಅತ್ಯಂತ ಪ್ರಮುಖವಾದದ್ದು, ಇತ್ತೀಚಿನ ಯಾಂತ್ರಿಕ ಜೀವನದಲ್ಲಿ ...

news

ಬೆಳಿಗ್ಗೆ ಬೇಗ ಏಳುವುದರ ಲಾಭವೇನು ಗೊತ್ತಾ?

ಬೆಂಗಳೂರು: ಚುಮು ಚುಮು ಚಳಿಯಿದ್ದರೆ ಸಾಕು, ಬೆಚ್ಚಗೆ ಹೊದ್ದುಕೊಂಡು ಇನ್ನಷ್ಟು ಹೊತ್ತು ...

news

ಮಳೆಗಾಲದಲ್ಲಿ ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳುವುದು ಹೇಗೆ..?

ಮಳೆಗಾಲ ಆರಂಭವಾಯಿತೆಂದರೆ ಶೀತ, ಉಸಿರಾಟದ ತೊಂದರೆ, ಚರ್ಮದ ಸೋಂಕು ಹೆಚ್ಚಾಗುತ್ತದೆ. ಋತುವಿನ ಬದಲಾವಣೆಗೆ ...

Widgets Magazine
Widgets Magazine Widgets Magazine