ಚೆಟ್ಟಿನಾಡ್‌ ಚಿಕನ್‌ ಸಾಂಬಾರ್‌

ಅತಿಥಾ 

ಬೆಂಗಳೂರು, ಗುರುವಾರ, 4 ಜನವರಿ 2018 (15:55 IST)

ಬೇಕಾಗುವ ಸಾಮಾಗ್ರಿಗಳು:
 
ಚಿಕನ್‌ 1/2 ಕೆಜಿ(ಚಿಕ್ಕದಾಗಿ ಕತ್ತರಿಸಿದ್ದು)
ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್‌-1 ಚಮಚ
ಹಸಿ ಮೆಣಸಿನಕಾಯಿ 2-3
ಈರುಳ್ಳಿ 1
ಟೊಮೆಟೊ 2
ಒಂದು ಇಂಚು ಚಕ್ಕೆ
ಲವಂಗ 2
ಕೊತ್ತಂಬರಿ ಪುಡಿ 1 ಚಮಚ
ಖಾರದ ಪುಡಿ 1/2 ಚಮಚ
ಜೀರಿಗೆ 1 ಚಮಚ
ಏಲಕ್ಕಿ 2
ಕರಿಮೆಣಸು 2-3
ಜೀರಿಗೆ 1/2 ಚಮಚ
ಸಾಸಿವೆ 1/2 ಚಮಚ
ಉಪ್ಪು
ಎಣ್ಣೆ 2 ಚಮಚ
ಕರಿ ಬೇವಿನ ಎಲೆ
ತಯಾರಿಸುವ ವಿಧಾನ:
 
ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಸಾಸಿವೆ, ಜೀರಿಗೆ ಹಾಕಿ ಜೀರಿಗೆ ಚಟಾಪಟ ಶಬ್ದ ಬರುವಾಗ ಚಕ್ಕೆ, ಲವಂಗ,ಕರಿ ಬೇವಿನ ಎಲೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌, ಏಲಕ್ಕಿ, ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ನಂತರ ಹಸಿ ಮೆಣಸಿನಕಾಯಿ ಹಾಗೂ ಟೊಮೆಟೊ ಹಾಕಿ ಸೌಟ್‌ನಿಂದ ತಿರುಗಿಸಿ. ಚಿಕನ್‌ ಹಾಕಿ 2 ನಿಮಿಷ ಸೌಟ್‌ನಿಂದ ತಿರುಗಿಸಿ, ಅರಿಶಿಣ ಹಾಗೂ ಸ್ವಲ್ಪ ಖಾರದ ಪುಡಿ, ಕೊತ್ತಂಬರಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಬೇಯಲು ಬೇಕಾಗುವಷ್ಟು ನೀರು ಹಾಕಿ ಬೇಯಿಸಿ. ಆಗಾಗ ಸೌಟ್‌ನಿಂದ ತಿರುಗಿಸುತ್ತಾ ಇರಿ. ಚಿಕನ್‌ ಬೆಂದ ನಂತರ ಉರಿಯಿಂದ ಇಳಿಸಿ, ಅದರ ಮೇಲೆ ಕರಿ ಮೆಣಸಿನ ಪುಡಿ ಉದುರಿಸಿದರೆ ಚೆಟ್ಟಿನಾಡ್‌ ಚಿಕನ್‌ ಸಾಂಬಾರ್‌ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಒಣದ್ರಾಕ್ಷಿ ತಿನ್ನುವುದರಿಂದ ನಿಮ್ಮ ಆರೋಗ್ಯ ಹೇಗಾಗುತ್ತೆ ಗೊತ್ತಾ?

ಒಣದ್ರಾಕ್ಷಿ ಹಲವು ಪೋಷಕಾಂಶಗಳ ಆಗರವಾಗಿದೆ. ಒಣಫಲಗಳ ಪಟ್ಟಿಯಲ್ಲಿ ಒಣದ್ರಾಕ್ಷಿಯೂ ಒಂದು. ಆದರೆ ಬಾದಾಮಿ, ...

news

ಉಳಿದಿರುವ ಚಪಾತಿಯಿಂದ ಚಾಟ್ಸ್ ಮಾಡಿ...!!

ಬೆಳಿಗ್ಗೆ ಅಥವಾ ಹಿಂದಿನ ದಿನ ಮಾಡಿದ ಚಪಾತಿ ಹಾಗೆಯೇ ಉಳಿದಿದ್ದರೆ ಅದನ್ನು ಚೆಲ್ಲುವ ಬದಲು ಸಂಜೆಯ ಸಮಯದಲ್ಲಿ ...

news

ಗೋಮೂತ್ರ ಯಾವ ಯಾವ ರೋಗಗಳಿಗೆ ರಾಮಬಾಣ ಗೊತ್ತಾ?

ವೇದಗಳು, ಮಂತ್ರಗಳು, ಪುರಾಣಗಳಿಗೆ ಭಾರತ ತವರುಮನೆ. ಕೆಲವು ಸಾವಿರ ವರ್ಷಗಳ ಹಿಂದೆ ದೇವತೆಗಳ ನಡೆದಾಡಿದ ಈ ...

news

ಕಣ್ಣಿನ ರೆಪ್ಪೆಗಳ ಮೇಲಿನ ಗುಳ್ಳೆಗಳು ನಿವಾರಣೆಯಾಗಲು ಹೀಗೆ ಮಾಡಿ

ಬೆಂಗಳೂರು : ಅತಿಯಾದ ಮೇಕಪ್ ವಸ್ತುಗಳನ್ನು ಬಳಸುವುದರಿಂದ ಹಾಗು ಅದನ್ನು ಸರಿಯಾಗಿ ಸ್ವಚ್ಚ ಮಾಡದೆ ...

Widgets Magazine