ಡ್ರೈ ಫ್ರೂಟ್ ಕರ್ಜಿಕಾಯಿ

ಬೆಂಗಳೂರು, ಬುಧವಾರ, 10 ಅಕ್ಟೋಬರ್ 2018 (15:05 IST)


ಕಣಕ ತಯಾರಿಸಲು ಬೇಕಾಗುವ ಸಾಮಗ್ರಿಗಳು :
* 1 ಕಪ್ ಮೈದಾ
* 1/4 ಕಪ್ ಚಿರೋಟಿ ರವೆ
* 2 ಚಮಚ ತುಪ್ಪ
* ಸ್ವಲ್ಪ ನೀರು
* ಉಪ್ಪು ರುಚಿಗೆ ತಕ್ಕಷ್ಟು
 
ಹೂರಣ ತಯಾರಿಸಲು ಬೇಕಾಗುವ ಸಾಮಗ್ರಿಗಳು :
 
* 1/2 ಕಪ್ ಹುರಿಗಡಲೆ ಪುಡಿ
* 1 ಕಪ್ ಸಕ್ಕರೆ
* 1 ಟೀ ಚಮಚ ಗಸಗಸೆ 
* 1/4 ಕಪ್ ಕೊಬ್ಬರಿ ತುರಿ
* 3 ಚಮಚ ಗೋಡಂಬಿ
* 3 ಚಮಚ ಬಾದಾಮಿ
* 3 ಚಮಚ ಪಿಸ್ತಾ
* 1/2 ಟೀ ಚಮಚ ಏಲಕ್ಕಿ ಪುಡಿ
 
ತಯಾರಿಸುವ ವಿಧಾನ :
ಮೊದಲು ಮೈದಾ ಹಿಟ್ಟು ಮತ್ತು ಚಿರೋಟಿ ರವೆಯನ್ನು ಬೆರೆಸಬೇಕು. ನಂತರ ಅದಕ್ಕೆ 2 ಚಮಚ ತುಪ್ಪ, ಉಪ್ಪು ಮತ್ತು ಅಗತ್ಯವಿರುವಷ್ಟು ನೀರನ್ನು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಬೇಕು. ಇದನ್ನು ಒದ್ದೆ ಬಟ್ಟೆಯಿಂದ 1 ಗಂಟೆ ಮುಚ್ಟಿಡಬೇಕು. ನಮತರ ಬಾದಾಮಿ, ಗೋಡಂಬಿ, ಪಿಸ್ತಾ ಮತ್ತು ಗಸಗಸೆಗಳನ್ನು ಒಂದು ಬಾಣಲೆಯಲ್ಲಿ 2 ನಿಮಿಷ ಹುರಿಯಬೇಕು. ನಂತರ ಹುರಿದ ಪದಾರ್ಥಗಳನ್ನು ಹುರಿಗಡಲೆಪುಡಿ, ಸಕ್ಕರೆ, ಏಲಕ್ಕಿ ಮತ್ತು ಸಕ್ಕರೆಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ನಂತರ ಮೈದಾ ಹಿಟ್ಟನ್ನು ಚೆನ್ನಾಗಿ ನಾದಬೇಕು.

ನಂತರ ಒಂದು ಹದವಾದ ಗಾತ್ರದಲ್ಲಿ ಉಂಡೆಗಳನ್ನು ಮಾಡಬೇಕು. ಒಂದೊಂದೇ ಉಂಡೆಗಳನ್ನು ತೆಳ್ಳಗೆ ಮತ್ತು ದುಂಡಗೆ ಲಟ್ಟಿಸಬೇಕು. ನಂತರ ಇದರಲ್ಲಿ ಒಂದರಿಂದ 2 ಚಮಚ ಹೂರಣವನ್ನು ಹಾಕಿ ಮಡಚಬೇಕು. ನಂತರ ಹೂರಣ ತುಂಬಿದ ಕರ್ಜಿಕಾಯಿಯನ್ನು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಕರಿಯಬೇಕು. ಇದನ್ನು ಸಣ್ಣ ಉರಿಯಲ್ಲಿ ಬೇಯಿಸಿದರೆ ಗರಿಗರಿಯಾಗಿರುತ್ತದೆ. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ವ್ಯಾಸಲೀನ್‌ನಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ?

ಚಳಿಗಾಲದಲ್ಲಿ ಹೇರಳವಾಗಿ ಬಳಕೆಯಾಗುವ ವಸ್ತು ಎಂದರೆ ವ್ಯಾಸಲೀನ್. ಅದರಿಂದ ತ್ವಚೆಗೆ ಮಾತ್ರ ಪ್ರಯೋಜನವಿದೆ ...

news

ಅನಾನಸ್ ಕೊಬ್ಬರಿ ಮಿಠಾಯಿ

ಒಂದು ದಪ್ಪ ತಳದ ಪಾತ್ರೆಯಲ್ಲಿ ಅನಾನಸ್ ಹಣ್ಣಿನ ರಸ, ಸಕ್ಕರೆ ಮತ್ತು ತೆಂಗಿನಕಾಯಿ ತುರಿಯನ್ನು ಹಾಕಿ ಮಧ್ಯಮ ...

news

ಸವಿಯಾದ ಬಾಳೆಹಣ್ಣಿನ ಹಲ್ವಾ

ಬಾಳೆಹಣ್ಣು ಸಾರ್ವಕಾಲಿಕವಾಗಿ ಸಿಗುವ ಹಣ್ಣು. ಈ ಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತವೆ. ಮತ್ತು ...

news

ಪಿಸ್ತಾ ಸೇವನೆಯಿಂದ ಆರೋಗ್ಯ ವೃದ್ಧಿ

ಒಣ ಹಣ್ಣುಗಳು ( ಡ್ರೈ ಫ್ರೂಟ್ಸ್) ಮನುಷ್ಯನ ಆಹಾರ ಸೇವನೆಯ ವಿಧಾನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ...

Widgets Magazine