ಬೆಂಗಳೂರು: ಪ್ರಿಡ್ಜ್ ಶುಚಿಯಾಗಿಡುವುದೇ ಗೃಹಿಣಿಯರಿಗೆ ದೊಡ್ಡ ತಲೆನೋವಿನ ವಿಷಯ. ಫ್ರಿಡ್ಜ್ ಶುಚಿಯಾಗಿಡಲು ಕೆಲವು ಉಪಾಯಗಳು ಇಲ್ಲಿವೆ. ಶುಚಿಗೊಳಿಸುವಿಕೆ ವಾರಕ್ಕೊಮ್ಮೆಯಾದರೂ ಫ್ರಿಡ್ಜ್ ನಲ್ಲಿರುವ ತರಕಾರಿ, ಹಣ್ಣು ಹಾಗೂ ಇತರ ಸಾಮಾನುಗಳನ್ನು ಹೊರಗೆ ಹಾಕಿ ಶುದ್ಧ ಬಟ್ಟೆ ಬಳಸಿ ಶುಚಿಗೊಳಿಸಿ. ಫ್ರಿಡ್ಜ್ ನಲ್ಲಿ ತೆಗೆಯಬಹುದಾದ ಟ್ರೇಗಳನ್ನು ಹೊರಗೆ ತೆಗೆದಿಟ್ಟು ಸ್ವಲ್ಪ ಹೊತ್ತು ನೀರಿನಲ್ಲಿ ಮುಳುಗಿಸಿ ಶುಚಿಗೊಳಿಸಿ.ಆಹಾರವನ್ನು ಇಡುವ ಕ್ರಮ ಫ್ರಿಡ್ಜ್ ಎಂದರೆ ತಂಗಳ ಪೆಟ್ಟಿಗೆ ಎಂದು ಕೆಲವರು ಅಣಕವಾಡುವದೇನೋ ಸರಿ. ಹಾಗಂತ