ಮಲಬದ್ಧತೆ ಸಮಸ್ಯೆಯೇ? ಹಾಗಿದ್ದರೆ ಈ ಸಿಂಪಲ್ ರೆಸಿಪಿ ಮಾಡಿ ತಿನ್ನಿ!

ಬೆಂಗಳೂರು, ಶನಿವಾರ, 13 ಜನವರಿ 2018 (08:09 IST)

ಬೆಂಗಳೂರು: ಹೆಚ್ಚಿನವರಿಗೆ ಮಲಬದ್ಧತೆ ಸಮಸ್ಯೆ ಕಿರಿ ಕಿರಿಯಾಗಿ ಕಾಡುತ್ತದೆ. ಕೆಲವೊಮ್ಮೆ ಆಹಾರದಿಂದಾಗಿ ಅಥವಾ ವಾತಾವರಣದಿಂದಾಗಿ ಮಲ ವಿಸರ್ಜನೆ ಸರಿಯಾಗಿ ಆಗದೇ ಇರಬಹುದು. ಅದಕ್ಕೆ ಒಂದು ಸಿಂಪಲ್ ರೆಸಿಪಿ ಮಾಡಿ ತಿನ್ನಿ!
 

ಹೆಸರು ಬೇಳೆ ಮತ್ತು ಕಲ್ಲು ಸಕ್ಕರೆ ಇದ್ದರೆ ಈ ಸಮಸ್ಯೆ ನಿವಾರಿಸಬಹುದು. ಹೆಸರು ಬೇಳೆ ದೇಹಕ್ಕೆ ತಂಪು. ಹೀಗಾಗಿ ದೇಹ ಉಷ್ಣತೆಯಿಂದಾಗಿ ಬಹಿರ್ದೆಸೆ ಕಷ್ಟವಾದಾಗ ಇದನ್ನು ಸೇವಿಸಿದರೆ ಸುಗಮವಾಗುತ್ತದೆ.
 
ಮಾಡುವ ವಿಧಾನ
ಹೆಸರು ಬೇಳೆಯನ್ನು ಕೆಂಪಗಾಗುವ ತನಕ ಎಣ್ಣೆ ಹಾಕದೆ ಹುರಿದುಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ಕಲ್ಲು ಸಕ್ಕರೆ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಪುಡಿ ಮಾಡಿಟ್ಟುಕೊಳ್ಳಿ. ಇದನ್ನು ಗಾಳಿಯಾಡದ ಬಾಕ್ಸ್ ನಲ್ಲಿ ಹಾಕಿ ಮುಚ್ಚಿಟ್ಟರೆ ತಿಂಗಳುಗಳ ಕಾಲ ಹಾಳಾಗದಂತೆ ಇಡಬಹುದು. ಇದನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಮಲಬದ್ಧತೆಯಿಂದ ಪರಿಹಾರ ಕಂಡುಕೊಳ್ಳಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಮಲಬದ್ಧತೆ ಅಡುಗೆ ಆರೋಗ್ಯ Constipation Kitchen Health

ಆರೋಗ್ಯ

news

ತಲೆದಿಂಬಿನ ಸಹಾಯವಿಲ್ಲದೇ ನಿದ್ರಿಸುವುದರ ಲಾಭಗಳೇನು ಗೊತ್ತಾ?

ಬೆಂಗಳೂರು: ಸಾಮಾನ್ಯವಾಗಿ ನಾವು ತಲೆದಿಂಬು ಇಟ್ಟುಕೊಂಡು ಮಲಗುತ್ತೇವೆ. ಆದರೆ ತಲೆದಿಂಬು ಇಟ್ಟುಕೊಳ್ಳದೇ ...

news

ಗರ್ಭಿಣಿಯರೇ ಈ ಹಣ್ಣುಗಳನ್ನು ತಿನ್ನುವಾಗ ಎಚ್ಚರವಹಿಸಿ

ಬೆಂಗಳೂರು : ಗರ್ಭಿಣಿಯರು ಆಹಾರವನ್ನು ಸೇವಿಸುವಾಗ ತುಂಬಾ ಎಚ್ಚರದಿಂದಿರಬೇಕು. ಎಲ್ಲಾ ಆಹಾರ ಪದಾರ್ಥಗಳನ್ನು ...

news

ಮನೆಯಲ್ಲಿ ಅನ್ನ ಉಳಿದಿದೆಯೇ...? ಹಾಗಾದ್ರೆ ಸುಲಭವಾಗಿ ಈ ರುಚಿಕರ ವಡೆ ತಯಾರಿಸಿ

ಬೆಂಗಳೂರು : ಮನೆಯಲ್ಲಿ ಮಾಡಿದ ಅನ್ನದಲ್ಲಿ ಕೆಲವೊಮ್ಮೆ ಸ್ವಲ್ಪ ಉಳಿದಿರುತ್ತದೆ. ಆಗ ಅದನ್ನು ಎಸೆಯಲು ...

news

ಗುಪ್ತಾಂಗವನ್ನು ಶುಚಿಯಾಗಿಟ್ಟುಕೊಳ್ಳುವುದು ಹೇಗೆ?

ಬೆಂಗಳೂರು: ಗುಪ್ತಾಂಗದ ಶುಚಿತ್ವ ಎನ್ನುವುದು ತುಂಬಾ ಮುಖ್ಯವಾದ ಅಂಶ. ಇದನ್ನು ಶುಚಿಯಾಗಿಟ್ಟುಕೊಳ್ಳದಿದ್ದರೆ ...

Widgets Magazine