ರುಚಿಕರ ಅವಿಯಲ್ ಮಾಡುವ ವಿಧಾನ

Bangalore, ಮಂಗಳವಾರ, 24 ಜನವರಿ 2017 (11:56 IST)

Widgets Magazine

ಬೆಂಗಳೂರು: ಕೇರಳದ ಫೇವರಿಟ್ ಡಿಶ್ ಗಳಲ್ಲಿ ಅವಿಯಲ್ ಕೂಡಾ ಒಂದು. ಓಣಂ, ವಿಷು ಹಬ್ಬ ಸೇರಿದಂತೆ ವಿಶೇಷ ದಿನಗಳಲ್ಲಿ ಮಲೆಯಾಳಿಗಳಿಗೆ ಇರಲೇಬೇಕಾದ ಪದಾರ್ಥವಿದು. ಇದನ್ನು ಮಾಡುವುದು ಹೇಗೆಂದು ನೋಡಿಕೊಳ್ಳಿ.


 
ಬೇಕಾಗುವ ಸಾಮಗ್ರಿಗಳು


ಬಾಳೆ ಕಾಯಿ
ತೊಂಡೆಕಾಯಿ
ಅಲಸಂಡೆ
ಸುವರ್ಣ ಗಡ್ಡೆ
ಹೀರೇಕಾಯಿ
ನುಗ್ಗೆಕಾಯಿ
ಬಟಾಣಿ ಕಾಳು
ಪಡುವಲ ಕಾಯಿ
ಹಸಿಮೆಣಸು
ಕಾಯಿತುರಿ
ಅರಸಿನಪುಡಿ
ಹುಳಿ
ಮೊಸರು
ಉಪ್ಪು
ಜೀರಿಗೆ
 
ಮಾಡುವ ವಿಧಾನ
 
ಬಾಳೆ ಕಾಯಿಯನ್ನು ಉದ್ದಕೆ ಹೆಚ್ಚಿಕೊಂಡು ಸ್ವಲ್ಪ ನೀರಿನಲ್ಲಿ ಹಾಕಿಡಿ. ನಂತರ ಉಳಿದ ತರಕಾರಿಗಳನ್ನು ಹೆಚ್ಚಿಕೊಳ್ಳಿ. ಬಾಳೆಕಾಯಿ ಹಾಗೂ ಉಳಿದ ತರಕಾರಿಗಳನ್ನು ಅರಸಿನ ಪುಡಿ, ಉಪ್ಪು, ಹಸಿಮೆಣಸು ಹಾಕಿಕೊಂಡು ಬೇಯಿಸಿಕೊಳ್ಳಿ.  ಕಾಯಿತುರಿಗೆ ಜೀರಿಗೆ, ಹಸಿಮೆಣಸು ಹಾಕಿಕೊಂಡು ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಬೇಯಿಸಿದ ತರಕಾರಿಗೆ ಇದನ್ನು ಸೇರಿಸಿ ಕುದಿಸಿ. ಒಂದು ಕುದಿ ಬಂದ ನಂತರ ಸ್ವಲ್ಪ ಮೊಸರು ಹಾಕಿ ಉರಿ ಆರಿಸಿ. ನಂತರ ಸ್ವಲ್ಪ ಕರಿಬೇವು ಸೊಪ್ಪು ಮತ್ತು ಕೊಬ್ಬರಿ ಎಣ್ಣೆಯನ್ನು ಹಾಕಿಕೊಂಡರೆ ಅವಿಯಲ್ ರೆಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹೆರಿಗೆ ನೋವು ಕಡಿಮೆ ಮಾಡುವುದು ಹೇಗೆ?

ಎಲ್ಲಾ ಗರ್ಭಿಣಿಯರಿಗೂ ಹೆರಿಗೆ ನೋವು ಎದುರಿಸುವ ಚಿಂತೆ ಇದ್ದೇ ಇರುತ್ತದೆ. ಆ ಯಮ ಯಾತನೆ ಕಡಿಮೆ ಮಾಡಲು ...

news

ಪೋಷಕರೇ ಎಚ್ಚರ! ಮಕ್ಕಳಿಗೆ ನೀಡುವ ಬಿಸ್ಕೆಟ್ ಕ್ಯಾನ್ಸರ್ ಗೆ ಕಾರಣವಾಗಬಹುದು!

ಸಾಮಾನ್ಯವಾಗಿ ಮಕ್ಕಳು ಬಿಸ್ಕೆಟ್ ಬೇಕು ಎಂದು ಬೇಡಿಕೆ ಇಡುವುದು ಸಾಮಾನ್ಯ. ನಾವೂ ಅಷ್ಟೇ. ಬಗೆ ಬಗೆಯ ...

news

ರುಚಿಯಾದ ಸೊಕ್ಕಿನ ಉಂಡೆ ಸುಕ್ಕುಂಡೆ ಗತ್ತಿನಿಂದ ಮಾಡಿ

ಇದೇನಿದು ಸೊಕ್ಕಿನ ಉಂಡೆ ಎಂದುಕೊಳ್ಳಬೇಡಿ. ಇದು ಕರಾವಳಿ ಸ್ಪೆಷಲ್. ಅರಳು ಹುಡಿಯಿಂದ ಮಾಡುವ ಸಿಹಿ ತಿನಿಸು. ...

news

ಅವಲಕ್ಕಿ ಬಳಸಿ ಸಿಂಪಲ್ ಸಿಹಿ ಮಾಡಿ

ಕಡಲೆ ಹಿಟ್ಟು ಬಳಸಿ ಬೂಂದಿ ಮಾಡುವುದು ಗೊತ್ತಲ್ಲಾ? ಅದೇ ರೀತಿ ಪೇಪರ್ ಅವಲಕ್ಕಿ ಬಳಸಿ ಬೂಂದಿ ಮಾಡಬಹುದು. ...

Widgets Magazine Widgets Magazine