ರುಚಿಕರವಾಗಿ ಗಿರಮಿಟ್ಟು ತಯಾರಿಸುವುದು ಹೇಗೆ?

ಬೆಂಗಳೂರು, ಸೋಮವಾರ, 18 ಮಾರ್ಚ್ 2019 (16:31 IST)

ಸಾಯಂಕಾಲವಾದರೆ ಬಾಯಾಡಿಸಲು ಏನಾದರೂ ತಿನ್ನಲು ಬೇಕು ಎಂದು ಅನ್ನಿಸುವುದು ಸಹಜ. ಹಾಗಾಗಿ ಚಹಾದೊಂದಿಗೆ ರುಚಿಕರವಾಗಿ ಗಿರಮಿಟ್ಟನ್ನು ತಯಾರಿಸಿಕೊಂಡು ಸವಿಯಬಹುದು. 
ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಮಂಡಕ್ಕಿ 1/4 ಕೆಜಿ
* ಟೊಮೆಟೊ 2
* ಈರುಳ್ಳಿ 2
* ಹಸಿಮೆಣಸು 4 
* ಬೆಳ್ಳುಳ್ಳಿ 2 ಎಸಳು
* ಕೊತ್ತಂಬರಿ ಸೊಪ್ಪು 1 ಹಿಡಿ
* ಹುರಿಗಡಲೆ ಪುಡಿ 4 ಚಮಚ
* ಎಣ್ಣೆ 3 ಚಮಚ
* ಕರಿಬೇವು 8 ರಿಂದ 10 ಎಲೆಗಳು
* ಉಪ್ಪು ರುಚಿಗೆ ತಕ್ಕಷ್ಚು
 
   ತಯಾರಿಸುವ ವಿಧಾನ:
    ಮೊದಲು ಟೊಮೆಟೊ, ಈರುಳ್ಳಿ, ಹಸಿಮೆಣಸನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಅದು ಕಾದ ನಂತರ ಕರಿಬೇವು, ಬೆಚ್ಚಿದ ಟೊಮೆಟೊ, ಈರುಳ್ಳಿ, ಹಸಿಮೆಣಸು, ಜಜ್ಜಿಕೊಂಡ ಬೆಳ್ಳುಳ್ಳಿ ಉಪ್ಪನ್ನು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು. ನಂತರ ಮಸಾಲೆಯು ಆರಿದ ಮೇಲೆ ಈ ಮಸಾಲೆಯನ್ನು ಮಂಡಕ್ಕಿ ಜೊತೆಗೆ ಸೇರಿಸಿ ಚೆನ್ನಾಗಿ ತಿರುವಬೇಕು. ಇದನ್ನು ಪ್ಲೇಟ್‌ಗೆ ಹಾಕಿದೆ ಮೇಲೆ ಹುರಿಗಡಲೆ ಪುಡಿ, ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಉದರಿಸಿಕೊಂಡರೆ ರುಚಿಕರವಾದ ಗಿರಮಿಟ್ಟು ಸವಿಯಲು ಸಿದ್ದ. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹೈಪೋಥೈರಾಯಿಡ್: ಹೆಚ್ಚಿರುವ ದೇಹದ ತೂಕವನ್ನು ಹೀಗೆ ಇಳಿಸಿಕೊಳ್ಳಿ.

ಥೈರಾಯಿಡ್ ಗ್ರಂಥಿ ಗಂಟಲಿನ ಭಾಗದಲ್ಲಿ ಒಂದು ಚಿಟ್ಟೆಯ ಆಕಾರದಲ್ಲಿ ಇರುತ್ತದೆ. ಈ ಗ್ರಂಥಿಯು ಪಿಟ್ಯುಟರಿ ...

news

ಬಾಳೆಹಣ್ಣು ಖರ್ಜೂರದ ಮಿಲ್ಕ್‌ಶೇಕ್

ಸಾಮಾನ್ಯವಾಗಿ ಬಾಳೆಹಣ್ಣು ಎಲ್ಲರ ಮನೆಯಲ್ಲಿಯೂ ಸಿಗುವಂತಹ ಹಣ್ಣಾಗಿದೆ. ಬಾಳೆಹಣ್ಣಿನಿಂದ ಮಾಡುವ ಖಾದ್ಯಗಳೂ ...

news

ಕಡಲೆಬೇಳೆ ಹೋಳಿಗೆ

ಹೋಳಿಗೆಯು ಮಹಾರಾಷ್ಟ್ರದ ಸಿಹಿತಿಂಡಿಗಳಲ್ಲಿ ತುಂಬಾ ಪ್ರಸಿದ್ಧಿ ಪಡೆದಿರುವ ತಿನಿಸಾಗಿದೆ. ಕರ್ನಾಟಕವೂ ...

news

ಮಾವಿನ ಹಣ್ಣಿನ ಶಿರಾ (ಕೇಸರಿಬಾತ್)

ಹಣ್ಣುಗಳ ರಾಜನೇ ಆಗಿರುವ ಮಾವಿನ ಹಣ್ಣನ್ನು ನೆನೆಸಿಕೊಂಡರೇ ಬಾಯಲ್ಲಿ ನೀರೂರುತ್ತದೆ. ಇನ್ನು ಮಾವಿನ ಹಣ್ಣಿನ ...

Widgets Magazine