ವೆಜ್ ಪರೋಟ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ ನೋಡಿ….

ಬೆಂಗಳೂರು, ಶನಿವಾರ, 16 ಸೆಪ್ಟಂಬರ್ 2017 (16:26 IST)

Widgets Magazine

ದಿನವೂ ಚಿತ್ರನ್ನ, ಮೊಸರನ್ನ, ಉಪ್ಪಿಟ್ಟು, ಪುಳಿಯೋಗರೆ, ಪೂರಿ ಇತ್ಯಾದಿ ಇತ್ಯಾದಿ ಬಿಟ್ಟು ಸ್ವಲ್ಪ ವೆರೈಟಿ ಫುಡ್ ಯಾಕೆ ಟ್ರೈ ಮಾಡಬಾರದು…. ಅದಕ್ಕಾಗಿಯೇ ಇಲ್ಲಿದೆ ನೋಡಿ ರೆಸಿಪಿ..


ವೆಜ್ ಪರೋಟ

ಬೇಕಾಗುವ ಪದಾರ್ಥಗಳು:


ಮೈದಾ - 3 ಕಪ್
ಗೋಧಿ ಹಿಟ್ಟು – 1 ಕಪ್
ಕ್ಯಾರೆಟ್ – 2
ಬೇಯಿಸಿದ ಆಲೂಗಡ್ಡೆ – 2
ಕ್ಯಾಪ್ಸಿಕಂ  – 1
ಮೆಂತ್ಯಾಸೊಪ್ಪು – 1 ಕಟ್ಟು
ಈರುಳ್ಳಿ – ¼ ಕಪ್
ಮೊಸರು – ಸ್ವಲ್ಪ
ಹಸಿಮೆಣಸಿನಕಾಯಿ – 2
ಅಚ್ಚಖಾರದ ಪುಡಿ – ½ ಚಮಚ
ಗರಂ ಮಸಾಲಾ – ½ ಚಮಚ
ಆಮ್ ಚೂರ್ ಪೌಡರ್ - ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಚೀಸ್ – ‍ಸ್ವಲ್ಪ

ಮಾಡುವ ವಿಧಾನ: ಮೈದಾ, ಗೋಧಿಹಿಟ್ಟು, ಸ್ವಲ್ಪ ಎಣ್ಣೆ, ಸ್ವಲ್ಪ ನೀರು, ಸ್ವಲ್ಪ ಮೊಸರು ಹಾಕಿ ಚಪಾತಿ ಹದಕ್ಕೆ ಕಲಸಿ 10 ನಿಮಿಷ ನೆನೆಯಲು ಬಿಡಬೇಕು. ಪ್ಯಾನ್ ಗೆ ಎಣ್ಣೆ, ಹಸಿಮೆಣಸಿನಕಾಯಿ, ಈರುಳ್ಳಿ, ಮೆಂತ್ಯಾಸೊಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೆ ಕಲಕಬೇಕು. ನಂತರ ಅದಕ್ಕೆ ಹೆಚ್ಚಿಟ್ಟ ಕ್ಯಾರೆಟ್, ಕ್ಯಾಪ್ಸಿಕಂ, ಹಾಕಿ ಬೇಯುವವರೆಗೆ ಬಿಡಬೇಕು. ಇದಕ್ಕೆ ಸ್ಮಾಶ್ ಮಾಡಿದ ಆಲೂಗಡ್ಡೆ, ಅಚ್ಚಖಾರದ ಪುಡಿ, ಗರಂ ಮಸಾಲಾ, ಆಮ್ ಚೂರ್ ಪೌಡರ್, ತುರಿದ ಚೀಸ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚನ್ನಾಗಿ ಮಿಕ್ಸ್ ಮಾಡಬೇಕು. ಇದನ್ನು ನಾದಿಟ್ಟ ಮೈದಾವನ್ನು ಚಿಕ್ಕ ಉಂಡೆ ಮಾಡಿ ಹೋಳಿಗೆಗೆ ಹೂರಣ ಇಟ್ಟಂತೆ ಇಟ್ಟು ಲಟ್ಟಿಸಬೇಕು. ತವಾಗೆ ಎಣ್ಣೆಹಾಕಿ ಪರೋಟವನ್ನು ಎರಡೂ ಕಡೆ ಸರಿಯಾಗಿ ಬೇಯಿಸಬೇಕು. ಪರೋಟ ಸಿದ್ಧವಾಗುತ್ತಿದ್ದಂತೆ ಮೊಸರು ಅಥವಾ ಉಪ್ಪಿನಕಾಯಿಯೊಂದಿಗೆ ಬಿಸಿ ಬಿಸಿ ಸವಿದರೆ ಚಂದ.Widgets Magazine
ಇದರಲ್ಲಿ ಇನ್ನಷ್ಟು ಓದಿ :  
ವೆಜ್ ಪರೋಟ ಪರೋಟ Recipe Paratha Veg

Widgets Magazine

ಆರೋಗ್ಯ

news

ಪಪ್ಪಾಯ ಹೀಗೂ ತೊಂದರೆ ಉಂಟುಮಾಡಬಹುದು!

ಬೆಂಗಳೂರು: ಪಪ್ಪಾಯ ಹಣ್ಣು ನಮ್ಮ ದೇಹಕ್ಕೆ ಒಳ್ಳೆಯದು. ಇದು ನಮ್ಮ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು, ...

news

ಕಿಡ್ನಿಯಲ್ಲಿ ಕಲ್ಲು ಕರಗಿಸಬೇಕಾ… ಹಾಗಿದ್ರೆ ಹೀಗೆ ಮಾಡಿ…

ಕಿಡ್ನಿ ಸ್ಟೋನ್… ಪ್ರಸ್ತುತ ಯಾಂತ್ರಿಕ ಜೀವನದಲ್ಲಿ ಕಿಡ್ನಿ ಸ್ಟೋನ್ ಸಾಮಾನ್ಯ ಸಮಸ್ಯೆಯಾಗಿದೆ. ಶೇ. ...

news

ತೂಕ ಇಳಿಸಬೇಕಾ? ಈ ಉಪಾಹಾರ ಸೇವಿಸಿ!

ಬೆಂಗಳೂರು: ತೂಕವೂ ಇಳಿಸಬೇಕು, ಬೆಳಗಿನ ಉಪಾಹಾರವೂ ಲೈಟಾಗಿರಬೇಕು ಎಂದು ಯೋಚಿಸುತ್ತಿರುವವರಿಗೆ ಇಲ್ಲಿದೆ ...

news

ಒಣ ಹಣ್ಣುಗಳನ್ನು ಸೇವಿಸಲು ಬೆಸ್ಟ್ ಟೈಮ್ ಯಾವುದು?

ಬೆಂಗಳೂರು: ಡ್ರೈ ಫ್ರೂಟ್ಸ್ ನಮ್ಮ ದೇಹಕ್ಕೆ ಹಲವು ರೀತಿಯಿಂದ ಒಳ್ಳೆಯದನ್ನು ಮಾಡುತ್ತದೆ. ಸಾಕಷ್ಟು ...

Widgets Magazine