ಅಲೂಗಡ್ಡೆಯಿಂದ ಉಪ್ಪಿನಕಾಯಿ ಮಾಡೋದು ಹೇಗೆ ಗೊತ್ತಾ?

ಬೆಂಗಳೂರು, ಮಂಗಳವಾರ, 4 ಸೆಪ್ಟಂಬರ್ 2018 (18:26 IST)

ಆಲೂಗಡ್ಡೆಯಿಂದ ಮಾಡಿದ ಪದಾರ್ಥಗಳು ಯಾರಿಗೆ ಇಷ್ಟ ಇಲ್ಲ ಹೇಳಿ!! ಚಿಕ್ಕ ಮಕ್ಕಳಿಂದ ವಯೊವೃದ್ದರೂ ಸಹ ಆಲೂಗಡ್ಡೆಯನ್ನು ಇಷ್ಟಪಡುತ್ತಾರೆ. ಮತ್ತು ಆಲೂಗಡ್ಡೆಯನ್ನು ಬೇರೆ ಯಾವುದೇ ತರಕಾರಿಯ ಜೊತೆ ಸೇರಿಸಿದರೆ ರುಚಿಯೂ ದುಪ್ಪಟ್ಟಾಗುತ್ತದೆ. ಮಕ್ಕಳಿಗೆ ಇಷ್ಟವಾಗುವ ಲೇಸ್ ಕೂಡಾ ಆಲೂಗಡ್ಡೆಯಿಂದಲೇ ತಯಾರಿಸುತ್ತಾರೆ. 
ಆಲೂಗಡ್ಡೆಯಿಂದ ಆಲೂ ಕರಿ, ಆಲೂ ಪಲ್ಯ, ಗ್ರೇವಿ ಹೀಗೆ ತರತರಹದ ಖಾದ್ಯಗಳನ್ನು ತಯಾರಿಸುತ್ತೇವೆ. ಅದರೆ ಅಲೂಗಡ್ಡೆಯಿಂದ ಉಪ್ಪಿನಕಾಯಿಯನ್ನು ತಯಾರಿಸುವ ವಿಧಾನ ಹಲವರಿಗೆ ತಿಳಿದಿರಲಿಕ್ಕಿಲ್ಲ.. ಹಾಗಾದ್ರೆ ಆಲೂಗಡ್ಡೆ ಉಪ್ಪಿನಕಾಯಿ ಮಾಡೋದು ಹೇಗೆ ಎಂದು ಹೇಳುತ್ತೀವಿ.. ಒಮ್ಮೆ ಟ್ರೈ ಮಾಡಿ ನೋಡಿ.....
 
ಬೇಕಾಗುವ ಸಾಮ್ರಗಿಗಳು:   
 
* 1/2 ಕೆಜಿ ಆಲೂಗಡ್ಡೆ
* 15 ರಿಂದ 20 ಕೆಂಪು ಮೆಣಸಿನಕಾಯಿ (ಹುರಿದ ಒಣ ಕೆಂಪು ಮೆಣಸು)
* ಕೊತ್ತಂಬರಿ ಬೀಜ
* 2 ಚಮಚ ಮೆಂತೆ
* ಚಿಕ್ಕ ಬೌಲ್‌ನಲ್ಲಿ ಹುಣಸೆ ಹುಳಿ
* 3 ಚಮಚ ಸಾಸಿವೆ ಎಣ್ಣೆ
* ಒಂದು ಚಿಟಿಕೆ ಇಂಗು
* ರುಚಿಗೆ ತಕ್ಕಷ್ಟು ಉಪ್ಪು
* ಎಣ್ಣೆ
ಮಾಡುವ ವಿಧಾನ :
 
ಮೊದಲು ಆಲೂಗಡ್ಡೆಯನ್ನು ಕತ್ತರಿಸಿ ಅದರ ಮೇಲೆ ಉಪ್ಪು ಹಾಕಿ ಬದಿಯಲ್ಲಿ ಇಡಬೇಕು. ನಂತರ ಮೆಂತೆ, ಸಾಸಿವೆ ಮತ್ತು ಒಣಮೆಣಸಿನಕಾಯಿ ಹುರಿದು ಅದರ ಜೊತೆ ಹುಣಸೆ ಹುಳಿಯನ್ನು ಸೇರಿಸಿ ಪೇಸ್ಟ್ ರೀತಿ ಮಾಡಬೇಕು. ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದಾಗ ಆಲೂಗಡ್ಡೆ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಚಿಕ್ಕ ಬಾಣಲೆಯಲ್ಲಿ 4 ರಿಂದ 5 ಚಮಚ ಎಣ್ಣೆ ಹಾಕಿ ಅದಕ್ಕೆ ಸ್ವಲ್ಪ ಇಂಗು ಮತ್ತು ಮೆಂತೆ, ಸಾಸಿವೆ ಹುರಿದು ಹುಣಸೆ ಹುಳಿಯನ್ನು ಸೇರಿಸಿ ಮಾಡಿದ ಪೇಸ್ಟ್ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಹಾಕಬೇಕು. ಈ ಮಿಶ್ರಣಕ್ಕೆ ಆಲೂಗಡ್ಡೆಯನ್ನು ಹಾಕಿ 5 ರಿಂದ 6 ನಿಮಿಷ ಹುರಿಯಬೇಕು. ನಂತರ ಗ್ಯಾಸ್ ಆಫ್ ಮಾಡಿ ಅದು ತಣ್ಣಗಾಗಲು ಬಿಡಬೇಕು. ಆಗ ರುಚಿಕರವಾದ ಆಲೂಗಡ್ಡೆ ಉಪ್ಪಿನಕಾಯಿ ತಿನ್ನಲು ಸಿದ್ಧ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ.. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸಿಹಿ ಗೆಣಸಿನ ಆರೋಗ್ಯಕರ ಲಾಭಗಳು

ಸಿಹಿ ಗೆಣಸು ರುಚಿಕರ ಮತ್ತು ಪುಷ್ಟಿದಾಯಕ ಆಹಾರವಾಗಿದೆ. ಇದು ದೇಹಕ್ಕೆ ಬೇಕಾದ ವಿಟಮಿನ್ ಬಿ6, ಕ್ಯಾಲ್ಸಿಯಂ, ...

news

ಬಿಸಿ ಬಿಸಿಯಾದ ರುಚಿಯಾದ ಟೊಮೆಟೊ ರಸಂ

ಸಾಮಾನ್ಯವಾಗಿ ನಮ್ಮ ಮಹಿಳೆಯರಿಗೆ ಅಡುಗೆ ಮನೆಯಲ್ಲಿ ಬೇರೆ ಯಾವುದೇ ತರಕಾರಿ ಇದ್ದರೂ ಟೊಮೆಟೊ ಇದ್ದ ಹಾಗೆ ...

news

ರುಚಿ ರುಚಿಯಾದ ಬಾಳೆಹಣ್ಣಿನ ಕೇಕ್

ಸಾಮಾನ್ಯವಾಗಿ ದಿನನಿತ್ಯದ ಬಳಕೆಯಲ್ಲಿ ಬಳಕೆಯಾಗುವ ಹಣ್ಣು ಬಾಳೆಹಣ್ಣು ಎಂದರೆ ತಪ್ಪಾಗಲಾರದು. ಈ ಹಣ್ಣನ್ನು ...

news

ರುಚಿಯಾದ ತಾಳಿಪಟ್ಟು ಮಾಡಿ ಸವಿಯಿರಿ..

ಬೆಳಗಿನ ತಿಂಡಿಗೆ ಶೀಘ್ರವಾಗಿ ರೆಡಿ ಮಾಡಬಹುದಾದ ತಿಂಡಿಗಳಲ್ಲಿ ತಾಳಿಪಟ್ಟು ಸಹ ಒಂದು. ಕೇವಲ ಕೆಲವೇ ...

Widgets Magazine