ಬ್ರೆಡ್ ಜಾಮೂನ್ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು, ಸೋಮವಾರ, 12 ಫೆಬ್ರವರಿ 2018 (21:26 IST)

ಬೆಂಗಳೂರು : ಜಾಮೂನ್ ಎಂದರೆ ಹೆಚ್ಚಿನವರು ಇಷ್ಟಪಡುತ್ತಾರೆ. ಜಾಮೂನು ತಯಾರಿಸಲು ರೆಡಿಮೆಡ್ ಜಾಮೂನ್ ಮಿಕ್ಸ್ಗಳು ಮಾರುಕಟ್ಟೆಯಲ್ಲಿ  ಸಿಗುತ್ತದೆ. ಹಾಗೇ ಮನೆಯಲ್ಲೇ ಬ್ರೆಡ್ ನಿಂದಲೂ ಜಾಮೂನು ತಯಾರಿಸಬಹುದು.
ಬೇಕಾಗುವ ಸಾಮಾಗ್ರಿಗಳು:
  • ಬ್ರೆಡ್ ಪೀಸ್ ಗಳು - 6-8
  • ಮೈದಾ ಹಿಟ್ಟು - 4 ಚಮಚ
  • ತುಪ್ಪ- 1 ಚಮಚ
  • ಎಣ್ಣೆ - ಕರಿಯಲು ಅಗತ್ಯವಿದ್ದಷ್ಟು
  • ಸಕ್ಕರೆ - 2 ಲೋಟ
  • ಏಲಕ್ಕಿ ಪುಡಿ - ಚಿಟಿಕೆಯಷ್ಟು
 
ಮಾಡುವ ವಿಧಾನ:
  • ಮೊದಲು ಬ್ರೆಡ್ ನ ಬಿಳಿಭಾಗವನ್ನು ಮಾತ್ರ ಕತ್ತರಿಸಿಕೊಂಡು ಅದನ್ನು ನೀರಿನಲ್ಲಿ ಮುಳುಗಿಸಿ ನೀರು ತೆಗೆದು ಮಿಕ್ಸಿಂಗ್ ಬೌಲ್ ಗೆ ಹಾಕಬೇಕು. 
  • ನಂತರ ಇದಕ್ಕೆ ಉಂಡೆಯ ಹದಕ್ಕೆ ಬರುವಷ್ಟು ಮೈದಾ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. 
  • ನಂತರ ಹಾಕಿ ಪುನಃ ಚೆನ್ನಾಗಿ ನಾದಿಕೊಂಡು ಬೇಕಾದ ಆಕಾರಕ್ಕೆ ಜಾಮೂನ್ ಮಾಡಿ ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಕರಿದುಕೊಳ್ಳಬೇಕು. 
  • ನಂತರ ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ನೀರು, ಸಕ್ಕರೆ ಹಾಗೂ ಏಲಕ್ಕಿ ಪುಡಿ ಹಾಕಿ ಪಾಕ ತಯಾರು ಮಾಡಿಕೊಳ್ಳಬೇಕು. ಪಾಕ ತಣ್ಣಗಾದ ಬಳಿಕ ಕರಿದುಕೊಂಡ ಜಾಮೂನ್ ಗಳನ್ನು ಇದಕ್ಕೆ ಹಾಕಿ ನೆನೆಯಲು ಬಿಟ್ಟರೆ ರುಚಿಕರವಾದ ಬ್ರೆಡ್ ಜಾಮೂನ್ ಸವಿಯಲು ಸಿದ್ಧ. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಈ ಆಹಾರಗಳನ್ನು ಹಸಿಯಾಗಿ ತಿನ್ನಲೇಬೇಡಿ!

ಬೆಂಗಳೂರು: ಕೆಲವು ಆಹಾರ ವಸ್ತುಗಳನ್ನು ಬೇಯಿಸಿ ತಿಂದರೆ ಅದರ ಸತ್ವ ಹೊರಟು ಹೋಗುತ್ತದೆ ಎಂಬ ನಂಬಿಕೆಯಿದೆ. ...

news

ಸೆಕ್ಸ್ ಬಗ್ಗೆ ನಿಮ್ಮಲ್ಲೂ ಅನುಮಾನಗಳಿರಬಹುದು!

ಬೆಂಗಳೂರು: ಸೆಕ್ಸ್ ಬಗ್ಗೆ ಹದಿಹರೆಯದಲ್ಲಿ ಸಾಕಷ್ಟು ಕಲ್ಪನೆಗಳಿರುತ್ತವೆ. ಇದರಲ್ಲಿ ಹೆಚ್ಚಿನವು ತಪ್ಪು ...

news

ಚೈನೀಸ್ ಫುಡ್ ಸೇವಿಸುವಾಗ ಹೀಗೆ ಮಾಡಲೇಬೇಡಿ!

ಬೆಂಗಳೂರು: ಚೈನೀಸ್ ನೂಡಲ್ಸ್ ಗಳಿಂದ ಹಿಡಿದು, ಸೂಪ್ ವರೆಗೆ ಯಾರಿಗಿಷ್ಟವಿಲ್ಲ ಹೇಳಿ? ಹೀಗೆ ಚೈನೀಸ್ ಫುಡ್ ...

news

ಪುರುಷರೇ ಗಾಯಗಳಾಗದಂತೆ ಶೇವಿಂಗ್ ಮಾಡಬೇಕೆ...? ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು : ಪುರುಷರು ಶೇವಿಂಗ್ ಮಾಡುವಾಗ ಕುತ್ತಿಗೆ ಭಾಗದಲ್ಲಿ ರೇಜರ್‌ನಿಂದ ಕೆಲವು ಗಾಯಗಳಾಗುತ್ತವೆ ಹಾಗೆ ...

Widgets Magazine