ಸಿಹಿಯಾದ ಬೆಂಡೆಕಾಯಿ ಕಾಯಿರಸ ಮಾಡುವ ವಿಧಾನ

Bangalore, ಬುಧವಾರ, 1 ಫೆಬ್ರವರಿ 2017 (09:16 IST)

Widgets Magazine

ಬೆಂಗಳೂರು: ಬೆಂಡೆಕಾಯಿ ಬಳಸಿ ತರಹೇವಾರಿ ಐಟಂ ಮಾಡಬಹುದು. ಅದರಲ್ಲಿ ಸ್ವಲ್ಪ ಸಿಹಿ ಮಿಶ್ರಿತ ಸಾಂಬಾರ್ ನನ್ನೇ ಹೋಲುವ ಕಾಯಿರಸ ಕೂಡಾ ಒಂದು. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.


 
ಬೇಕಾಗುವ ಸಾಮಗ್ರಿಗಳು


ಬೆಂಡೆಕಾಯಿ
ಕಾಯಿ ತುರಿ
ಒಣ ಮೆಣಸು
ಅರಸಿನ ಪುಡಿ
ಹುಳಿ
ಬೆಲ್ಲ
ಉದ್ದಿನ ಬೇಳೆ
ಇಂಗು
ಒಗ್ಗರಣೆ ಸಾಮಾನು
 
ಮಾಡುವ ವಿಧಾನ

ಬೆಂಡೆಕಾಯಿಯನ್ನು ಸಾಂಬಾರ್ ಗೆ ಬೇಕಾದ ಹಾಗೆ ಕತ್ತರಿಸಿಕೊಳ್ಳಿ. ಇದನ್ನು ಹುಣಸೆ ಹುಳಿ ರಸ, ಅರಸಿನ ಪುಡಿ, ಉಪ್ಪು, ಬೆಲ್ಲ ಹಾಕಿ ಬೇಯಿಸಿಕೊಳ್ಳಿ. ಬೆಲ್ಲ ಸ್ವಲ್ಪ ಜಾಸ್ತಿಯೇ ಇರಲಿ. ಬಾಣಲೆಯಲ್ಲಿ ಉದ್ದಿನ ಬೇಳೆ, ಕೆಂಪು ಮೆಣಸು, ಇಂಗು ಹಾಕಿಕೊಂಡು ಎಣ್ಣೆ ಹಾಕಿ ಹುರಿದುಕೊಳ್ಳಿ. ಇದನ್ನು ಕಾಯಿ ತುರಿಯೊಂದಿಗೆ ಹಾಕಿ ನುಣ್ಣಗೆ ರುಬ್ಬಿ. ಈ ಮಸಾಲೆಯನ್ನು ಬೆಂದ ಬೆಂಡೆಕಾಯಿ ಹೋಳಿನ ಜತೆಗೆ ಸೇರಿಸಿ ಚೆನ್ನಾಗಿ ಕುದಿಸಿ. ಇದು ಸಾಂಬಾರ್ ನಷ್ಟು ತೆಳ್ಳಗಾಗುವುದು ಬೇಡ. ನಂತರ ಒಗ್ಗರಣೆ ಹಾಕಿದರೆ ಬೆಂಡೆಕಾಯಿ ಕಾಯಿರಸ ರೆಡಿ. ಇದು ಅನ್ನ, ದೋಸೆಯ ಜತೆಗೆ ತಿನ್ನಲು ರುಚಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಶ್… ! ಮಗು ಮಲಗಿದೆ.. ಸದ್ದು ಮಾಡಬೇಡಿ!

ಮನೆಗೊಂದು ಪುಟ್ಟ ಪಾಪು ಬಂದ ಮೇಲೆ ಅದನ್ನು ಎತ್ತಿ ಆಡಿಸೋದಕ್ಕೆ ಪೈಪೋಟಿ. ಅದರ ನಗು, ಅಳು ನೋಡಲು ಚೆಂದ. ...

news

ನಗು ನಗುತಾ ನಲಿ ಏನೇ ಆಗಲಿ.. ನಗುವಿನಲ್ಲಿದೆ ಆರೋಗ್ಯದ ಗುಟ್ಟು

ಏನಿಲ್ಲದಿದ್ದರೂ ಮುಖದಲ್ಲೊಂದು ನಗುವಿದ್ದರೆ ಜಗತ್ತನ್ನೇ ಗೆಲ್ಲಬಹುದಂತೆ. ಅಷ್ಟೊಂದು ಪವರ್ ಫುಲ್ ನಗು ...

news

ಕಾಶಿಯಿಂದ ಬಂದದ್ದಲ್ಲ ಬರೀ ಕಾಶಿ ಹಲ್ವಾ

ಹಲ್ವಾ ಮಾಡಲು ಸಾಕಷ್ಟು ವಿಧಾನಗಳಿವೆ. ಬೂದುಗುಂಬಳ ಬಳಸಿ ಮಜ್ಜಿಗೆ ಹುಳಿ, ಪಲ್ಯ ಏನೇನೋ ಮಾಡಬಹುದು. ಅದೇ ...

news

ನಿದ್ದೆ ಮಾಡಲೂ ಸಮಯವಿಲ್ಲವೇ? ರೋಗ ನಿರೋಧಕ ಶಕ್ತಿ ಕುಂಠಿತವಾಗಬಹುದು ಜೋಕೆ!

ಕೆಲಸ, ಟೆನ್ ಷನ್ ಇನ್ನೇನೋ ಕಾರಣ.. ಸರಿಯಾಗಿ ನಿದ್ರೆ ಮಾಡಲಾಗುತ್ತಿಲ್ಲವೇ? ಹಾಗಿದ್ದರೆ ಹುಷಾರಾಗಿರಿ. ...

Widgets Magazine Widgets Magazine