ಮಿಕ್ಸ್‌ಡ್ ವೆಜಿಟೇಬಲ್ ಕುರ್ಮಾ

ಬೆಂಗಳೂರು, ಶುಕ್ರವಾರ, 2 ನವೆಂಬರ್ 2018 (16:43 IST)

ವೆಜಿಟೇಬಲ್ ಕುರ್ಮಾವು ಚಪಾತಿಗೆ ಮತ್ತು ಪುರಿಗೆ ಒಳ್ಳೆಯ ಕಾಂಬಿನೇಶನ್. ಇದನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಂಡು ಸವಿಯಬಹುದು. ಹೇಗೆ ಅಂತೀರಾ.. ನೀವೂ ಒಮ್ಮೆ ಟ್ರೈ ಮಾಡಿ ನೋಡಿ..

ಬೇಕಾಗುವ ಸಾಮಗ್ರಿಗಳು :
 
 (ಮಸಾಲೆಗೆ)
* ಜೀರಿಗೆ 1 ಚಮಚ
* ಕೊತ್ತಂಬರಿ ಬೀಜ 1 ಚಮಚ
* ಚಕ್ಕೆ
* ಲವಂಗ 2
* ಏಲಕ್ಕಿ 2
* ಒಣ ಮೆಣಸಿನಕಾಯಿ 4
 
(ತರಕಾರಿ)
* ಬಟಾಣಿ
*ಬೀನ್ಸ್
* ಕ್ಯಾರೆಟ್
* ಆಲೂಗಡ್ಡೆ
* ಕ್ಯಾಪ್ಸಿಕಂ
* ಟೊಮೆಟೊ 2 (ಪೇಸ್ಟ್ ಮಾಡಲು)
* ಈರುಳ್ಳಿ 1
* ಬೆಳ್ಳುಳ್ಳಿ 4
* ಶುಂಠಿ
* ಹಸಿ ಮೆಣಸಿನಕಾಯಿ 2
* ತುಪ್ಪ 2 ಚಮಚ
* ನೀರು
* ರುಚಿಗೆ ತಕ್ಕಷ್ಟು ಉಪ್ಪು
 
ತಯಾರಿಸುವ ವಿಧಾನ :
 
ಮೊದಲು ಎಲ್ಲಾ ತರಕಾರಿಗಳನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ನಂತರ ಟೊಮೆಟೊವನ್ನು ತೊಳೆದು ಮಿಕ್ಸಿಯಲ್ಲಿ ಪೇಸ್ಟ್ ಮಾಡಬೇಕು. ನಂತರ ಒಂದು ಪ್ಯಾನ್‌ನಲ್ಲಿ ಮಸಾಲೆ ಸಾಮಾನನ್ನು ಎಲ್ಲಾ ಹುರಿದು ಆರಿದ ಮೇಲೆ ಅದನ್ನು ಮಿಕ್ಸಿ ಮಾಡಬೇಕು. ನಂತ ಮಿಕ್ಸಿ ಮಾಡಿದ ಮಸಾಲೆಗೆ ಕಟ್ ಮಾಡಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಹಾಕಿ ಇನ್ನೊಂದು ಸಾರಿ ಮಿಕ್ಸಿ ಮಾಡಿಟ್ಟುಕೊಳ್ಳಬೇಕು. ನಂತರ ಅದೇ ಪ್ಯಾನ್‌ನಲ್ಲಿ ತುಪ್ಪ ಹಾಕಿ ರುಬ್ಬಿದ ಮಸಾಲೆಯನ್ನು ಹಾಕಿ ಆಮೇಲೆ ಟೊಮೆಟೊ ಪೇಸ್ಟ್ ಹಾಕಿ ಆಮೇಲೆ ಅದಕ್ಕೆ ಈಗಾಗಲೇ ಕಟ್ ಮಾಡಿದ ತರಕಾರಿ, ಹಸಿಮೆಣಸನ್ನು ಹಾಕಿ ಸ್ವಲ್ಪ ನೀರು ಮತ್ತು ಉಪ್ಪನ್ನು ಹಾಕಿ ಕುದಿಸಿದರೆ ರುಚಿಕರವಾದ ಮಿಕ್ಸ್‌ಡ್ ವೆಜಿಟೇಬಲ್ ಕುರ್ಮಾ ಸವಿಯಲು ಸಿದ್ಧ. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಅಸಿಡಿಟಿಗೆ ಪರಿಹಾರಗಳೇನು?

ಇತ್ತೀಚಿನ ವಿದ್ಯಮಾನದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಸಮಸ್ಯೆ ಎಂದರೆ ಅಸಿಡಿಟಿ. ಈ ಅಸಿಡಿಟಿಯು ...

news

ಅವಲಕ್ಕಿ ಖಾರ ಪೋಂಗಲ್

ತಮಿಳುನಾಡಿನ ವಿಶೇಷ ತಿನಿಸುಗಳಲ್ಲಿ ಪೋಂಗಲ್ ಕೂಡಾ ಒಂದು ಎಂದು ಹೇಳಬಹುದು. ಅದರೆ ಅವಲಕ್ಕಿಯನ್ನೂ ಹಾಕಿ ಖಾರ ...

news

ಖೋವಾ ಮಿಕ್ಸ್ ಜಾಮೂನ್

ಹಬ್ಬ ಹರಿದಿನಗಳಲ್ಲಿ ಸಾಮಾನ್ಯವಾಗಿ ಮಾಡುವ ಸಿಹಿ ಪದಾರ್ಥವೆಂದರೆ ಜಾಮೂನು. ಜಾಮೂನನ್ನು ಸುಲಭವಾಗಿ ತಯಾರಿಸಿ ...

news

ಮಕ್ಕಳ ಹಸಿವನ್ನು ಹೆಚ್ಚಿಸುತ್ತೇ ಈ ಆಹಾರಗಳು

ಬೆಂಗಳೂರು : ಸಾಮಾನ್ಯವಾಗಿ ಮಕ್ಕಳು ಊಟ ಮಾಡಲು ಇಷ್ಟಪಡುವುದಿಲ್ಲ. ಊಟ ಎಂದಾಕ್ಷಣ ಅಲ್ಲಿದ್ದ ಎದ್ದುಬಿದ್ದು ...

Widgets Magazine
Widgets Magazine