ಮಟನ್ ಮಸಾಲಾ ಗ್ರೇವಿ

ಅತಿಥಾ 

ಬೆಂಗಳೂರು, ಮಂಗಳವಾರ, 9 ಜನವರಿ 2018 (18:35 IST)

Widgets Magazine

ಬೇಕಾಗುವ ಸಾಮಾಗ್ರಿಗಳು: 
 
ಕುರಿಮಾಂಸ- ಅರ್ಧ ಕೇಜಿ (ಚಿಕ್ಕ ತುಂಡುಗಳನ್ನಾಗಿಸಿ, ಚೆನ್ನಾಗಿ ತೊಳೆದು ನೀರು ಬಸಿದಿರುವುದು) 
ಬೆಣ್ಣೆ- ಅರ್ಧ ಕಪ್ (ಉಪ್ಪಿಲ್ಲದ ಬೆಣ್ಣೆ ಉತ್ತಮ) 
ಗರಂ ಮಸಾಲಾ ಪುಡಿ- ಒಂದು ಚಿಕ್ಕ ಚಮಚ 
ಧನಿಯ ಪುಡಿ - ಒಂದು ಚಿಕ್ಕ ಚಮಚ 
ಕೆಂಪು ಮೆಣಸಿನ ಪುಡಿ - ಒಂದು ಚಿಕ್ಕ ಚಮಚ 
ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ - ಒಂದು ಚಿಕ್ಕ ಚಮಚ 
ಹಸಿಮೆಣಸು - 5 ರಿಂದ 6
ಹೆಚ್ಚಿದ ಈರುಳ್ಳಿ- 1 ಕಪ್
ಲಿಂಬೆ ರಸ- ಒಂದು ಚಿಕ್ಕ ಚಮಚ 
ಎಣ್ಣೆ ಅಗತ್ಯಕ್ಕೆ ತಕ್ಕಂತೆ
ಉಪ್ಪು
ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ:
 
- ಒಂದು ಪಾತ್ರೆಯಲ್ಲಿ ಗರಂ ಮಸಾಲಾ ಪುಡಿ, ಧನಿಯ ಪುಡಿ, ಮೆಣಸಿನ ಪುಡಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 
 
- ಪ್ರೆಶರ್ ಕುಕ್ಕರ್ ಅನ್ನು ಕೊಂಚ ಬಿಸಿ ಮಾಡಿ ಇದರಲ್ಲಿ ಬೆಣ್ಣೆ ಹಾಕಿ. ಬೆಣ್ಣೆ ಕರಗಿದ ಬಳಿಕ ಈರುಳ್ಳಿ ಹಾಕಿ ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ತಿರುವಿ. ಬಳಿಕ ಹಸಿಮೆಣಸು ಹಾಕಿ ಕೊಂಚ ಹುರಿಯಿರಿ 
 
- ಈರುಳ್ಳಿ ಬೆಂದು ಎಣ್ಣೆ ಬಿಡುವ ವೇಳೆಗೆ ಕುರಿಮಾಂಸ ಹಾಕಿ ನಿಧಾನವಾಗಿ ತಿರುವುತ್ತಾ ಹುರಿಯಿರಿ. 
 
- ಮಸಾಲೆ ಕುರಿಮಾಂಸಕ್ಕೆ ಅಂಟಿದೆ ಎಂದು ಖಚಿತವಾದ ಬಳಿಕ ಪಾತ್ರೆಯಲ್ಲಿ ಮಿಶ್ರಣ ಮಾಡಿದ್ದ ಮಸಾಲೆಯನ್ನು ಹಾಕಿ ತಿರುವಿ. 
 
- ಕುರಿಮಾಂಸ ಸರಿಸುಮಾರು ಮುಕ್ಕಾಲು ಪಾಲು ಬೆಂದಿದೆ ಅನ್ನಿಸಿದ ಬಳಿಕ ಕೊಂಚ ಉಪ್ಪು, ಲಿಂಬೆರಸ ಹಾಕಿ ಅಗತ್ಯವಿರುವಷ್ಟು ನೀರು ಸೇರಿಸಿ ಕುದಿಯಲು ಪ್ರಾರಂಭಿಸಿದ ಬಳಿಕ ಕುಕ್ಕರಿನ ಮುಚ್ಚಳ ಮುಚ್ಚಿ ಐದರಿಂದ ಆರು ಸೀಟಿ ಬರುವವರೆಗೆ ಬೇಯಿಸಿ. (ಕುರಿಮಾಂಸ ಎಳೆಯದಾಗಿದ್ದರೆ ಮಾತ್ರ, ಕೊಂಚ ಬಲಿತದ್ದು ಅನ್ನಿಸಿದರೆ ಹತ್ತು ಸೀಟಿಗಳಾದರೂ ಬೇಕು)
 
-  ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಬಿಸಿಬಿಸಿಯಾಗಿದ್ದಂತೆಯೇ ಅನ್ನ ಅಥವಾ ರೊಟ್ಟಿ, ಚಪಾತಿಗಳೊಂದಿಗೆ ಸೇವಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ತಲೆನೋವು ಎನ್ನುವವರು ಈ ಸುಲಭ ಮನೆ ಮದ್ದುಗಳನ್ನು ಮಾಡಿ..!!

ಯಾವಾಗಲೂ ತಲೆನೋವು ಬರುತ್ತಿದ್ದರೆ ಅದಕ್ಕಾಗಿ ಪದೇ ಪದೇ ಮಾತ್ರೆಯನ್ನು ತೆಗೆದುಕೊಂಡು ಆರೋಗ್ಯವನ್ನು ...

news

ಅಡುಗೆ ಸೋಡಾದ 4 ಅದ್ಭುತ ಉಪಯೋಗಗಳು

ಸೋಡಿಯಂ ಬೈಕಾರ್ಬನೇಟ್ ಅಥವಾ ಅಡಿಗೆ ಸೋಡಾವು ಮಾಂತ್ರಿಕ ಪದಾರ್ಥವಾಗಿದ್ದು, ಯಾವುದೇ ಹಾನಿಕಾರಕ ...

news

ಸ್ವಾದಿಷ್ಠವಾದ ಅಂಜಲ್ ಫಿಶ್‌ ಫ್ರೈ

ಒಂದು ಬಟ್ಟಲಿಗೆ ಅರಿಶಿಣ ಪುಡಿ, ಖಾರದ ಪುಡಿ, ಉಪ್ಪು, ಹುಣ್ಣಿಸೆ ಹಣ್ಣಿನ ರಸ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ...

news

ಮಶ್ರೂಮ್ ಸೂಪ್ ಮಾಡುವುದು ಹೇಗೆ?

ಬೆಂಗಳೂರು: ಈ ಚಳಿಗಾಲಕ್ಕೆ ಬೇರೆ ಬೇರೆ ರೀತಿಯ ಸೂಪ್ ಮಾಡಿಕೊಂಡು ಕುಡಿದರೆ ದೇಹವೂ ಬೆಚ್ಚಗಿರುತ್ತದೆ, ...

Widgets Magazine