ಈರುಳ್ಳಿ ರಾಗಿ ರೊಟ್ಟಿಯನ್ನು ಮಾಡಿ ನೋಡಿ...

ಬೆಂಗಳೂರು, ಬುಧವಾರ, 10 ಅಕ್ಟೋಬರ್ 2018 (13:21 IST)

ರಾಗಿಯು ಆರೋಗ್ಯಕ್ಕೆ ತುಂಬಾ ಹಿತವಾದ ಧಾನ್ಯವಾಗಿದೆ. ಆದರೆ ಅದನ್ನು ಅಕ್ಕಿಯಂತೆ ಹೆಚ್ಚಾಗಿ ಬಳಸುವುದಿಲ್ಲ. ಆದ್ದರಿಂದ ಅಪರೂಪಕ್ಕೊಮ್ಮೆ ಈ ರೀತಿ ರೊಟ್ಟಿ, ದೋಸೆಯಂತಹದ್ದನ್ನು ಮಾಡಿ ತಿಂದರೆ ಆರೋಗ್ಯಕ್ಕೂ ಉತ್ತಮ. ನೀವು ಇದರೊಂದಿಗೆ ಪಾಲಾಕ್ ಹಾಗೂ ಮೆಂತೆಯಂತಹ ಸೊಪ್ಪುಗಳನ್ನೂ ಸಹ ಸೇರಿಸಿ ರೊಟ್ಟಿಯನ್ನು ತಯಾರಿಸಿಕೊಳ್ಳಬಹುದು. ಈರುಳ್ಳಿ ರಾಗಿ ರೊಟ್ಟಿಯನ್ನು ಮಾಡುವ ವಿಧಾನಕ್ಕಾಗಿ ಇಲ್ಲಿ ನೋಡಿ.
ಬೇಕಾಗುವ ಸಾಮಗ್ರಿಗಳು:
ರಾಗಿ ಹಿಟ್ಟು - 11/2 ಕಪ್
ಈರುಳ್ಳಿ - 2
ಕೊತ್ತಂಬರಿ ಸೊಪ್ಪು - ಸ್ವಲ್ಪ
ಶುಂಠಿ - 1 ಇಂಚು
ಹಸಿಮೆಣಸು - 1-2
ಉಪ್ಪು - ರುಚಿಗೆ
ಎಣ್ಣೆ - ಸ್ವಲ್ಪ
 
ಮಾಡುವ ವಿಧಾನ:
ರಾಗಿ ಹಿಟ್ಟಿಗೆ 2-3 ಚಮಚ ಎಣ್ಣೆ, ಹೆಚ್ಚಿದ ಈರುಳ್ಳಿ, ಕೊತ್ತಂಬರಿಸೊಪ್ಪು, ಹಸಿಮೆಣಸು ಮತ್ತು ಶುಂಠಿಯನ್ನು ಹಾಕಿ ಅಗತ್ಯಕ್ಕೆ ತಕ್ಕಷ್ಟು ಬಿಸಿ ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಹಿಟ್ಟನ್ನು ರೆಡಿ ಮಾಡಿಕೊಳ್ಳಿ. ನಂತರ ಅದನ್ನು ಉಂಡೆಗಳನ್ನಾಗಿ ಮಾಡಿಕೊಂಡು ಒದ್ದೆ ಬಟ್ಟೆ ಅಥವಾ ಎಲೆಯ ಮೇಲೆ ಎಣ್ಣೆಯನ್ನು ಸವರಿದ ಕೈಯಿಂದ ಉಂಡೆಗಳನ್ನು ರೊಟ್ಟಿಯ ಆಕಾರಕ್ಕೆ ತಟ್ಟಿ ಕಾದ ತವಾದ ಮೇಲೆ ಹಾಕಿ ಎಣ್ಣೆಯನ್ನು ಸವರಿ ಎರಡೂ ಬದಿಯನ್ನು ಬೇಯಿಸಿದರೆ ಈರುಳ್ಳಿ ರಾಗಿ ರೊಟ್ಟಿ ಸವಿಯಲು ಸಿದ್ಧವಾಗುತ್ತದೆ. ಇದು ಈರುಳ್ಳಿ ಚಟ್ನಿಯೊಂದಿಗೆ ಹೆಚ್ಚು ರುಚಿಯಾಗಿರುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ತಲೆಯೊಳಗೆ ಹೀಗೆಲ್ಲಾ ಆಗ್ತಿದ್ದರೆ ವಿಟಮಿನ್ ಡಿ ಕೊರತೆಯ ಲಕ್ಷಣ!

ಬೆಂಗಳೂರು: ಕೆಲವು ಅಧ್ಯಯನಗಳ ಪ್ರಕಾರ ನಮ್ಮ ದೇಶದಲ್ಲಿ ಶೇ. 79 ರಷ್ಟು ಮಂದಿ ವಿಟಮಿನ್ ಡಿ ಕೊರತೆಯಿಂದ ...

news

ಜಗಳವಾದ ಮೇಲೆ ಪರಸ್ಪರ ತಬ್ಬಿಕೊಳ್ಳಿ!

ಬೆಂಗಳೂರು: ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಅಂತಾರೆ. ಹಾಗಿದ್ದರೇ ಚೆನ್ನ. ಜಗಳವಾದ ಮೇಲೆ ಇಬ್ಬರೂ ...

news

ಆರೋಗ್ಯಕರ ಪೇರಳೆ ಹಣ್ಣಿನ/ಸೀಬೆ ಹಣ್ಣಿನ ಲಾಭಗಳು

ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ‘ಸಿ’ಯನ್ನು ಹೊಂದಿರುವ ಹಣ್ಣೆಂದರೆ ಅದು ಪೇರಳೆ ಹಣ್ಣಾಗಿದೆ. ಪೇರಳೆ ಹಣ್ಣು ...

news

ಮ್ಯಾಕ್ಸಿಕನ್ ಬ್ರೆಡ್ ರೋಲ್

ನಿಮಗೆ ಒಂದೇ ರೀತಿಯ ಬ್ರೆಡ್‌ಗಳಲ್ಲಿ ತಯಾರಿಸೋ ತಿನಿಸುಗಳನ್ನು ತಿಂದು ಬೇಜಾರ್ ಆಗಿದೆಯಾ, ಸ್ವಲ್ಪ ...

Widgets Magazine