ಪಾಲಾಕ್ ಪಲಾವ್

ಬೆಂಗಳೂರು, ಗುರುವಾರ, 14 ಮಾರ್ಚ್ 2019 (15:40 IST)

ಘಮಘಮಿಸುವ ಪಲಾವ್ ಅನ್ನು ಪೋಷಕಾಂಶಗಳ ಗಣಿಯಾಗಿರುವ ಪಾಲಕ್ ಸೊಪ್ಪಿನಿಂದ ಮಾಡಿದರೆ ರುಚಿಗೆ ರುಚಿ, ಆರೋಗ್ಯವು ಹೌದು. ಪುದೀನಾದಂತೆ ಪಾಲಾಕ್‌ನಿಂದಲೂ ರುಚಿಕರವಾದ ಪಲಾವ್ ಮಾಡಬಹುದು.
ಬೇಕಾಗುವ ಪದಾರ್ಥಗಳು:
ಬಾಸ್ಮತಿ ಅಕ್ಕಿ - ಎರಡು ಕಪ್ಪು
ಹಚ್ಚಿದ ಈರುಳ್ಳಿ - ಕಾಲು ಕಪ್
ಪಾಲಾಕ್ ಸೊಪ್ಪು - 1 ಕಪ್
ಹಸಿಮೆಣಸಿನಕಾಯಿ - ನಾಲ್ಕು
ಲವಂಗ - 4
ಏಲಕ್ಕಿಪುಡಿ - ಅರ್ಧ ಸ್ಪೂನ್
ಹಚ್ಚಿದ ಟೋಮೊಟೊ - ಅರ್ಧಕಪ್ಪು
ಗರಂ ಮಸಾಲಾ - ಅರ್ಧ ಟೀಸ್ಪೂನ್
ಗೊಡಂಬಿ - 5-6,
ಬೇಕಾಗುವಷ್ಟು ಎಣ್ಣೆ
ರುಚಿಗೆ ಬೇಕಾಗುವಷ್ಟು 
ಉಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ -1 ಟೀಸ್ಪೂನ್
 
ಅಕ್ಕಿಯನ್ನು ಚೆನ್ನಾಗಿ ತೊಳೆದು ಅರ್ಧಗಂಟೆ ನೆನಸಿಡಬೇಕು. ಪಾಲಾಕ್ ಸೊಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಸ್ಟವ್ ಮೇಲೆ ಪ್ಯಾನ್ ಇರಿಸಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕು. ಹಸಿಮೆಣಸಿನಕಾಯಿ, ಗರಂಮಸಾಲಾ. ಲವಂಗ, ಏಲಕ್ಕಿ ಪುಡಿ, ಗೋಡಂಬಿ ಹಾಕಿ ಫ್ರೈ ಮಾಡಬೇಕು. ಅದಕ್ಕೆ ರುಬ್ಬಿದ ಪಾಲಾಕ್ ಪೇಸ್ಟ್, ಬೇಕಾಗುವಷ್ಟು ಉಪ್ಪು ಸೇರಿಸಿ ಬೇಯಿಸಬೇಕು. ಅವು ಚೆನ್ನಾಗಿ ಬೆಂದಮೇಲೆ ನೆನಸಿಟ್ಟುಕೊಂಡ ಅಕ್ಕಿಯನ್ನು ಸೇರಿಸಿ ಅದಕ್ಕೆ ಬೇಕಾಗುವಷ್ಟು ನೀರು ಸೇರಿಸಿ 2 ಬಾರಿ ಕುಕ್ಕರ್ ವಿಷಲ್ ಹಾಕಿಸಿದರೆ ಸಾಕು. ಪಾಲಾಕ್ ಪಲಾವ್ ರೆಡಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನಿಂಬೆಹಣ್ಣಿನ ಸಿಹಿ ಉಪ್ಪಿನಕಾಯಿ...

ಸಾಮಾನ್ಯವಾಗಿ ಎಲ್ಲರೂ ಊಟದ ಜೊತೆಗೆ ಉಪ್ಪಿನಕಾಯಿಯನ್ನು ಬಳಸೇ ಬಳಸುತ್ತಾರೆ. ಉಪ್ಪಿನಕಾಯಿ ...

news

ನರಹುಲಿ (Warts) ಹೇಗೆ ಉಂಟಾಗುತ್ತದೆ? ನಿವಾರಣೆ ಹೇಗೆ?

ಚರ್ಮದ ಮೇಲೆ ನರಹುಲಿ ಅಥವಾ ಸಣ್ಣಗಂತಿಗಳು ಪ್ರತಿಯೊಬ್ಬರಲ್ಲೂ ಕಾಣಿಸಿಕೊಳ್ಳುತ್ತದೆ. ಇಂಗ್ಲೀಷ್‌ನಲ್ಲಿ ...

news

ಟೂತ್‌ಪೇಸ್ಟ್.. ಹಲ್ಲುಗಳಲ್ಲದೆ, ಮತ್ತೆಷ್ಟೋ ಕೆಲಸಗಳಿಗೆ ಬಳಸಬಹುದು!

ಟೂತ್‌ಪೇಸ್ಟ್ ಹಲ್ಲು ಸ್ವಚ್ಛಗೊಳಿಸಲು ಮಾತ್ರ ಎಂದುಕೊಂಡರೆ ಅದು ತಪ್ಪು. ಪೇಸ್ಟ್‌ನಿಂದ ಇನ್ನೂ ಹಲವಾರು ...

news

ಸಹೋದ್ಯೋಗಿಯ ಪ್ರೀತಿಯಲ್ಲಿ ಕಳೆದುಹೋದ ನನಗೆ ಹೆಂಡತಿಯ ಜೊತೆ ಬದುಕಲು ಆಗುತ್ತಿಲ್ಲ. ಯಾರನ್ನ ಆಯ್ಕೆ ಮಾಡಲಿ?

ಬೆಂಗಳೂರು : ಪ್ರಶ್ನೆ : ನನಗೆ ಮದುವೆಯಾಗಿ 9 ವರ್ಷವಾಗಿದೆ. ನನಗೆ 3 ವರ್ಷದ ಹೆಣ‍್ಣು ಮಗು ಹಾಗೂ 7 ತಿಂಗಳ ...

Widgets Magazine