ಪಾಲಕ್ ಸೂಪ್ ಮಾಡುವುದು ಹೇಗೆ?

ಬೆಂಗಳೂರು, ಗುರುವಾರ, 11 ಜನವರಿ 2018 (09:12 IST)

ಬೆಂಗಳೂರು: ಕೂದಲು ಬೆಳವಣಿಗೆಗೆ, ಕಣ್ಣಿನ ಆರೋಗ್ಯಕ್ಕೆ ಪಾಲಕ್ ಸೊಪ್ಪಿನ ಸೇವನೆ ತುಂಬಾ ಉತ್ತಮ. ಪಾಲಕ್ ಸೊಪ್ಪು ಬಳಸಿ ಸೂಪ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
 

ಬೇಕಾಗುವ ಸಾಮಗ್ರಿಗಳು
ಪಾಲಕ್ ಸೊಪ್ಪು
ಹಾಲು
ಅಕ್ಕಿ ಹಿಟ್ಟು
ಸಕ್ಕರೆ
ಕಾಳು ಮೆಣಸಿನ ಪುಡಿ
ಈರುಳ್ಳಿ
ಬೆಳ್ಳುಳ್ಳಿ
ಉಪ್ಪು
ಎಣ್ಣೆ
 
ಮಾಡುವ ವಿಧಾನ
ಒಂದು ತವಾದಲ್ಲಿ ಎಣ್ಣೆ ಕಾಯಲು ಇಡಿ. ನಂತರ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ನಂತರ ಪಾಲಕ್ ಸೊಪ್ಪು ಹಾಕಿ ತಿರುವಿ. ಇದು ಚೆನ್ನಾಗಿ ಬೆಂದ ಮೇಲೆ ಸ್ವಲ್ಪ ಅಕ್ಕಿ ಹಿಟ್ಟು, ಕಾಳು ಮೆಣಸು ಪೌಡರ್, ಸಕ್ಕರೆ, ಉಪ್ಪು ಮತ್ತು ಒಂದು ಕಪ್ ನೀರು ಹಾಕಿ. ಇದನ್ನು 10 ನಿಮಿಷ ಕುದಿಯಲು ಬಿಡಿ.
 
ನಂತರ ಈ ಮಿಶ್ರಣವನ್ನು ಸೋಸಿಕೊಳ್ಳಿ. ಸೋಸಿದ ಮೇಲೆ ಸಿಕ್ಕಿದ ರಸವನ್ನು ಹಾಲು ಸೇರಿಸಿ 2 ನಿಮಿಷ ಬಿಸಿ ಮಾಡಿ ನಂತರ ಸೇವಿಸಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪಾಲಕ್ ಸೂಪ್ ಆಹಾರ ಅಡುಗೆ Spinach Food Kitchen

ಆರೋಗ್ಯ

news

ಪುರುಷರ ಅಂದವನ್ನು ಹೆಚ್ಚಿಸಲು ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು : ಅಂದವಾಗಿ ಕಾಣಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಇದರಲ್ಲಿ ಲಿಂಗ ಭೇಧವಿಲ್ಲ. ಹುಡುಗಿಯರ ...

news

ಮಕ್ಕಳ ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು : ಮಕ್ಕಳು ಎಲ್ಲಾ ರೀತಿಯ ತಿಂಡಿ ತಿನಿಸುಗಳನ್ನು ತಿನ್ನುವುದರಿಂದ ಅವರಿಗೂ ಕೂಡ ಗ್ಯಾಸ್ಟ್ರಿಕ್ ...

news

ಅವಳಿ ಮಕ್ಕಳು ಜನಿಸಲು ಕಾರಣವಾಗುವ ಅಂಶಗಳು ಏನು ಗೊತ್ತಾ…?

ಬೆಂಗಳೂರು : ಕೆಲವು ಮಹಿಳೆಯರು ಅವಳಿ ಮಕ್ಕಳನ್ನು ಪಡೆಯಲು ಬಯಸುತ್ತಾರೆ. ಕೆಲವರಿಗೆ ಸಮಯದ ಅಭಾವ, ಕೆಲವರಿಗೆ ...

news

ಕಾರ್ನ್ ಕಬಾಬ್

ಒಂದು ಬಟ್ಟಲಲ್ಲಿ ಮೇಲಿನ ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕಲಸಿ

Widgets Magazine