ಪನೀರ್ ತವಾ ಮಸಾಲಾ ಮಾಡಿ ನೋಡಿ..!!

ಬೆಂಗಳೂರು, ಮಂಗಳವಾರ, 30 ಅಕ್ಟೋಬರ್ 2018 (18:01 IST)

ಇದೊಂದು ಸರಳವಾದ ರೆಸಿಪಿಯಾಗಿದ್ದು ಸುಲಭವಾಗಿ ನೀವೇ ಮಾಡಿಕೊಳ್ಳಬಹುದಾಗಿದೆ. ಇದೊಂದು ಶೀಘ್ರವಾಗಿ ತಯಾರಿಸಿಕೊಳ್ಳಬಹುದಾದ ರುಚಿಯಾದ ರೆಸಿಪಿ. ಇದು ಸಾಮಾನ್ಯವಾಗಿ ರೊಟ್ಟಿ ಅಥವಾ ಅನ್ನದ ಜೊತೆಗೆ ಚೆನ್ನಾಗಿರುತ್ತದೆ. ಪನೀರ್ ತವಾ ಮಸಾಲಾ ಮಾಡುವ ಸರಳ ವಿಧಾನಕ್ಕಾಗಿ ಇಲ್ಲಿ ನೋಡಿ.
ಬೇಕಾಗುವ ಸಾಮಗ್ರಿಗಳು:
 
ಪನೀರ್ - 250 ಗ್ರಾಂ
ಅಚ್ಚಖಾರದ ಪುಡಿ - 2 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಚಮಚ
ಕಸುರಿ ಮೇತಿ - 2 ಚಮಚ
ಚಾಟ್ ಮಸಾಲಾ - 1 ಚಮಚ
ಎಣ್ಣೆ - ಸ್ವಲ್ಪ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಜೀರಿಗೆ - 1 ಚಮಚ
ಓಂಕಾಳು - 1 ಚಮಚ
ಈರುಳ್ಳಿ - 1
ದನಿಯಾ ಪುಡಿ - 1 ಚಮಚ
ಗರಂ ಮಸಾಲಾ - 1 ಚಮಚ
ಹಸಿ ಮೆಣಸು - 1
ಟೊಮೆಟೋ ಪ್ಯೂರಿ - 1 ಕಪ್
ಉಪ್ಪು - ರುಚಿಗೆ
ಕ್ರೀಂ - 2 ಚಮಚ
 
ಮಾಡುವ ವಿಧಾನ:
 
ಒಂದು ಬೌಲ್‌ನಲ್ಲಿ ಕಟ್ ಮಾಡಿದ ಪನೀರ್ ಚೂರುಗಳು, 2 ಚಮಚ ಎಣ್ಣೆ, 1 ಚಮಚ ಅಚ್ಚಖಾರದ ಪುಡಿ, 1 ಚಮಚ ಚಾಟ್ ಮಸಾಲಾ, 1 ಚಮಚ ಕಸುರಿ ಮೇತಿ ಮತ್ತು ಒಂದು ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 15 ನಿಮಿಷಗಳ ನಂತರ ಇದನ್ನು ಕಾದ ತವಾ ಮೇಲೆ 2 ಚಮಚ ಎಣ್ಣೆಯನ್ನು ಹಾಕಿ ಅದರ ಮೇಲೆ ಗರಿಗರಿಯಾಗುವವರೆಗೆ ಸಣ್ಣ ಉರಿಯಲ್ಲಿ ಹುರಿದಿಟ್ಟುಕೊಳ್ಳಿ.
 
ಈಗ ಇನ್ನೊಂದು ತವಾದಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಕಾದ ನಂತರ 1 ಚಮಚ ಜೀರಿಗೆ, 1 ಚಮಚ ಓಂಕಾಳು, 1 ಹೆಚ್ಚಿದ ಈರುಳ್ಳಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಎರಡು ನಿಮಿಷದ ನಂತರ ಅದಕ್ಕೆ 1 ಚಮಚ ಅಚ್ಚಖಾರದ ಪುಡಿ, 1 ಹೆಚ್ಚಿದ ಹಸಿಮೆಣಸು ಮತ್ತು 1 ಚಮಚ ದನಿಯಾ ಪುಡಿಯನ್ನು ಹಾಕಿ ಹುರಿಯಿರಿ. ಈಗ ಇದಕ್ಕೆ 1 ಕಪ್ ಟೊಮೆಟೋ ಪ್ಯೂರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ 5 ನಿಮಿಷ ಕುದಿಸಿ. ಈಗ ಅದಕ್ಕೆ 1 ಚಮಚ ಗರಂ ಮಸಾಲಾ, 2 ಚಮಚ ಕ್ರೀಂ ಮತ್ತು ಸ್ವಲ್ಪ ನೀರನ್ನು ಹಾಕಿ 2 ನಿಮಿಷ ಬಿಟ್ಟು ಈಗಾಗಲೇ ಹುರಿದಿಟ್ಟುಕೊಂಡ ಪನೀರ್ ಚೂರುಗಳನ್ನು ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಇದಕ್ಕೆ ಸೇರಿಸಿ ಮಿಕ್ಸ್ ಮಾಡಿದರೆ ಪನೀರ್ ತವಾ ಮಸಾಲಾ ಸಿದ್ಧವಾಗುತ್ತದೆ.



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಈ ಆಹಾರ ಸೇವಿಸಿದ ಮೇಲೆ ಸೆಕ್ಸ್ ಮಾಡಿದರೆ ಆಗುವ ಮ್ಯಾಜಿಕ್ಕೇ ಬೇರೆ!

ಬೆಂಗಳೂರು: ಸೆಕ್ಸ್ ಗೂ ಆಹಾರಕ್ಕೂ ಹತ್ತಿರದ ಸಂಬಂಧವಿದೆ. ನಾವು ಸೇವಿಸುವ ಆಹಾರ ನಮ್ಮ ಲೈಂಗಿಕ ಜೀವನವನ್ನು ...

news

ಮಧುಮೇಹಿಗಳು ತಲೆಕೆಡಿಸಿಕೊಳ್ಳಲೇಬೇಕಾದ ವಿಚಾರವಿದು!

ಬೆಂಗಳೂರು: ಯಾವುದೂ ಅತಿಯಾದರೆ ವಿಷವೇ. ಹಾಗೆಯೇ ಮಧುಮೇಹವೂ ನಿಯಂತ್ರಣದಲ್ಲಿದ್ದರೆ ಸಮಸ್ಯೆಯಾಗದು. ಆದರೆ ಅದೂ ...

news

ಕೆಮ್ಮು, ಶೀತ ಸಮಸ್ಯೆಗೆ ಉತ್ತಮ ಔಷಧಿ ವೀಳ್ಯದೆಲೆ ರಸಂ

ಬೆಂಗಳೂರು : ಕೆಮ್ಮು, ಶೀತ ಸಮಸ್ಯೆಯಿರುವವರು ವೀಳ್ಯದೆಲೆಯಿಂದ ತಯಾರಿಸಿದ ರಸಂ ಸೇವಿಸಿ. ವೀಳ್ಯದೆಲೆಯಲ್ಲಿ ...

news

ಊಟ ಮಾಡಿದ ತಕ್ಷಣ ಮಾಡುವ ಈ ಅಭ್ಯಾಸಗಳನ್ನು ಬಿಟ್ಟುಬಿಡಿ

ಬೆಂಗಳೂರು :ಊಟ ಮಾಡಿದ ಮೇಲೆ ನಾವು ಮಾಡುವ ಕೆಲವು ಕೆಟ್ಟ ಅಭ್ಯಾಸಗಳು ನಮ್ಮ ಆರೋಗ್ಯವನ್ನು ಹಾಳುಮಾಡುತ್ತವೆ. ...