ಬೆಳಿಗ್ಗಿನ ತಿಂಡಿಗೆ ರುಚಿಯಾದ ಹೆಸರುಬೇಳೆ ಕಿಚಡಿ!

ಬೆಂಗಳೂರು, ಗುರುವಾರ, 31 ಮೇ 2018 (12:20 IST)

Widgets Magazine

ಬೆಂಗಳೂರು: ಹೆಸರುಬೇಳೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿರುತ್ತದೆ. ಹೆಸರುಬೇಳೆಯಿಂದ ತಯಾರಿಸುವ ಕಿಚಡಿ ಕೂಡ ಆರೋಗ್ಯಕ್ಕೆ ಅಷ್ಟೇ ಒಳ್ಳೆಯದು. ಸುಲಭವಾಗಿ ತಯಾರಾಗುವ ಹೆಸರುಬೇಳೆ ಕಿಚಡಿ ಇಲ್ಲಿದೆ ನೋಡಿ ಮಾಡಿ. ಸವಿಯಿರಿ.


ಬಾಸುಮತಿ ಅಕ್ಕಿ - 1/2 ಕಪ್ ಹೆಸರುಬೇಳೆ - 1/2 ಕಪ್ ಇಂಗು - 1/4 ಟೀಚಮಚ ರುಚಿಗೆ ತಕ್ಕಷ್ಟು ಉಪ್ಪು ಅರಿಶಿನ ಪುಡಿ - 1 ಟೀಚಮಚ ತುಪ್ಪ - 1 ಟೀಚಮಚ ಜೀರಿಗೆ - 1 ಟೀಚಮಚ ಜೀರಿಗೆ ಪುಡಿ - 1 ಟೀಚಮಚ.

ಒಂದು ಪಾತ್ರೆಗೆ ಬಾಸುಮತಿ ಅಕ್ಕಿ, ಹೆಸರುಬೇಳೆ ಹಾಕಿ. ಇವೆರಡನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಪಕ್ಕದಲ್ಲಿಡಿ. ಬಿಸಿಯಾದ ಕುಕ್ಕರ್‌ಗೆ ತುಪ್ಪವನ್ನು ಹಾಕಿರಿ. ಜೀರಿಗೆ ಹಾಗೂ ಇಂಗನ್ನು ಹಾಕಿ ಹುರಿಯಿರಿ. ನಂತರ ತೊಳೆದುಕೊಂಡ ಹೆಸರು ಬೇಳೆ ಮತ್ತು ಅಕ್ಕಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಅರಿಶಿನ ಪುಡಿ ಮತ್ತು ಜೀರಿಗೆ ಪುಡಿಯನ್ನು ಸೇರಿಸಿ. ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ. ರುಚಿಗೆ ತಕ್ಕಷ್ಟು  ಉಪ್ಪನ್ನು ಸೇರಿಸಿ, ಎರಡು ನಿಮಿಷದವರೆಗೆ  ಬೇಯಲು ಬಿಡಿ. ಕುಕ್ಕರ್ ಗೆ ಮುಚ್ಚಳ ಮುಚ್ಚಿ, ಸುಮಾರು 4 ಸೀಟಿ ಕೂಗಿಸಿ. ಹೀಗೆ ಮಾಡಿದರೆ ರುಚಿಯಾದ ಹೆಸರುಬೇಳೆ ಕಿಚಡಿ ರೆಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಸೆಕ್ಸ್ ಮೂಡ್ ಹಾಳು ಮಾಡಲು ಈ ಕಾರಣಗಳು ಸಾಕು!

ಬೆಂಗಳೂರು: ಸೆಕ್ಸ್ ಲೈಫ್ ಹಾಳು ಮಾಡಲು ಬೇರೇನೂ ಬೇಕಾಗಿಲ್ಲ. ನಿಮ್ಮ ಕೆಲವೊಂದು ಅಭ್ಯಾಸಗಳು ಸಾಕು. ಅವು ...

news

ದಾರಿಯಲ್ಲಿ ಕಾಣಸಿಗುವ ಉತ್ತರಣೆ ಗಿಡದಲ್ಲಿರುವ ಔಷಧಿಯ ಗುಣಗಳನ್ನು ತಿಳಿಬೇಕಾ…?

ಬೆಂಗಳೂರು : ಉತ್ತರಣೆ ಗಿಡವನ್ನು ನಾವು ಹಲವು ಕಡೆಗಳಲ್ಲಿ ಕಂಡಿರುತ್ತೇವೆ. ಇದು ನಾವು ದಾರಿಯಲ್ಲಿ. ...

news

ಸೆಕ್ಸ್ ಹೆಚ್ಚು ಕಡಿಮೆಯಾದರೆ ಈ ಅಪಾಯಗಳು ತಪ್ಪಿದ್ದಲ್ಲ!

ಬೆಂಗಳೂರು: ಸೆಕ್ಸ್ ಎನ್ನುವುದು ಖುಷಿಕೊಡುವ ಚಟುವಟಿಕೆಯೇನೋ ಸರಿ. ಆದರೆ ಅತಿಯಾದರೆ ಅಮೃತವೂ ವಿಷವಂತೆ. ...

news

ಉತ್ತಮ ಆರೋಗ್ಯಕ್ಕಾಗಿ ಈ 5 ಬಿಳಿ ಆಹಾರ ಪದಾರ್ಥಗಳನ್ನು ಬಳಸದೇ ಇರುವುದು ಒಳ್ಳೆಯದು

ಬೆಂಗಳೂರು : ಉತ್ತಮ ಆರೋಗ್ಯ ಯಾರಿಗೆ ಬೇಡ ಹೇಳಿ, ಅದರಲ್ಲೂ ಈ ಜೀವನ ಕ್ರಮದಲ್ಲಿ ತಮ್ಮ ತಮ್ಮ ಆರೋಗ್ಯ ...

Widgets Magazine