ಕಿಡ್ನಿಯಲ್ಲಿ ಕಲ್ಲು ಕರಗಿಸಬೇಕಾ… ಹಾಗಿದ್ರೆ ಹೀಗೆ ಮಾಡಿ…

ಬೆಂಗಳೂರು, ಶುಕ್ರವಾರ, 15 ಸೆಪ್ಟಂಬರ್ 2017 (14:19 IST)

ಕಿಡ್ನಿ ಸ್ಟೋನ್…  ಪ್ರಸ್ತುತ ಯಾಂತ್ರಿಕ ಜೀವನದಲ್ಲಿ ಕಿಡ್ನಿ ಸ್ಟೋನ್ ಸಾಮಾನ್ಯ ಸಮಸ್ಯೆಯಾಗಿದೆ. ಶೇ. 10-15ರಷ್ಟು ಜನ ಪ್ರಪಂಚದಲ್ಲಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾದಲ್ಲಿ ಕಿಡ್ನಿ ಸ್ಟೋನ್ ಗೆ ಮೊದಲ ಹಂತದಲ್ಲೇ ಚಿಕಿತ್ಸೆ ಪಡೆದು ಮನೆಯಲ್ಲೇ ತಯಾರಿಸಿದ ಬಾಳೆ ದಿಂಡಿನ ಅಡುಗೆಯಿಂದ ಇದನ್ನ ಕರಗಿಸಬಹುದು. ಬಾಳೆದಿಂಡಿನಲ್ಲಿ ಅನೇಕ ಖಾದ್ಯಗಳನ್ನ ಮಾಡಬಹುದು. ಹೆಚ್ಚು ರುಚಿ ನೀಡುತ್ತೆ.
ಬಾಳೆದಿಂಡಿನ ಪಲ್ಯ
 
ಬೇಕಾಗುವ ಪದಾರ್ಥಗಳು:
ಬಾಳೆದಿಂಡು – 1(1 ಮೊಳ ಉದ್ದ),
ಕಡಲೇಬೇಳೆ- 2 ಚಮಚ
ತುರಿದ ತೆಂಗಿನಕಾಯಿ - 1 ಬಟ್ಟಲು
ಹಸಿಮೆಣಸಿನ ಕಾಯಿ – 2
ಒಣಮೆಣಸಿನ ಕಾಯಿ – 2
ಬೆಲ್ಲ – ಸ್ವಲ್ಪ
ಹುಣಸೆಹಣ್ಣಿನ ರಸ
ಉಪ್ಪು - ರುಚಿಗೆ
ಒಗ್ಗರಣೆಗೆ: ಎಣ್ಣೆ, ಸಾಸಿವೆ, ಅರಿಶಿನ, ಕೊತ್ತಂಬರಿ ಸೊಪ್ಪು
 
ಮಾಡುವ ವಿಧಾನ: ಕುಕ್ಕರ್ ಗೆ ಎಣ್ಣೆ, ಒಣಮೆಣಸಿನ ಕಾಯಿ, ಕಡಲೇಬೇಳೆ ಹಾಕಿ ನಂತರ ಹೆಚ್ಚಿಟ್ಟ ಬಾಳೆದಿಂಡು ಹಾಕಿ 2 ಕೂಗು ಕೂಗಿಸಿಕೊಳ್ಳಬೇಕು. ಇದನ್ನು ಇಳಿಸಿಕೊಂಡು ಆರಿಸಿಟ್ಟುಕೊಳ್ಳಬೇಕು. ಸಾಸಿವೆ, ತೆಂಗಿನಕಾಯಿ ತುರಿ, ಹಸಿಮೆಣಸಿನಕಾಯಿ, ಹಾಕಿ ರುಬ್ಬಿಕೊಳ್ಳಬೇಕು.

ಒಂದು ಪ್ಯಾನ್ ಗೆ ಎಣ್ಣೆ, ಸಾಸಿವೆ, ಕರಿಬೇವು, ಅರಿಶಿನ ಹಾಕಿ ಒಗ್ಗರಣೆ ಹಾಕಿಕೊಳ್ಳಬೇಕು. ಇದಕ್ಕೆ ಬೇಯಿಸಿಟ್ಟುಕೊಂಡ ಬಾಳೆದಿಂಡನ್ನು ಹಾಕಿ, ಉಪ್ಪು, ಸ್ವಲ್ಪ ಬೆಲ್ಲ, ಹುಣಸೆಹಣ್ಣಿನ ರಸ ಹಾಕಿ. ಬಳಿಕ ರುಬ್ಬಿಟ್ಟುಕೊಂಡ ಮಸಾಲಾ ಹಾಕಿ ಪ್ಯಾನ್ ನಲ್ಲಿ ಹುರಿಯಬೇಕು. ಕೊತ್ತಂಬರಿ ಸೊಪ್ಪು ಹಾಕಿ ಗಾರ್ನಿಶ್ ಮಾಡಿದರೆ ರುಚಿಯಾದ ಹೆಲ್ದಿಯಾದ ಬಾಳೆದಿಂಡಿನ ಪಲ್ಯ ರೆಡಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ತೂಕ ಇಳಿಸಬೇಕಾ? ಈ ಉಪಾಹಾರ ಸೇವಿಸಿ!

ಬೆಂಗಳೂರು: ತೂಕವೂ ಇಳಿಸಬೇಕು, ಬೆಳಗಿನ ಉಪಾಹಾರವೂ ಲೈಟಾಗಿರಬೇಕು ಎಂದು ಯೋಚಿಸುತ್ತಿರುವವರಿಗೆ ಇಲ್ಲಿದೆ ...

news

ಒಣ ಹಣ್ಣುಗಳನ್ನು ಸೇವಿಸಲು ಬೆಸ್ಟ್ ಟೈಮ್ ಯಾವುದು?

ಬೆಂಗಳೂರು: ಡ್ರೈ ಫ್ರೂಟ್ಸ್ ನಮ್ಮ ದೇಹಕ್ಕೆ ಹಲವು ರೀತಿಯಿಂದ ಒಳ್ಳೆಯದನ್ನು ಮಾಡುತ್ತದೆ. ಸಾಕಷ್ಟು ...

news

ಬಾರ್ಲಿ ನೀರು ಸೇವಿಸಿದರೆ ಏನು ಲಾಭ ತಿಳಿಯಿರಿ

ಬೆಂಗಳೂರು: ದೇಹದಲ್ಲಿ ನಿರ್ಜಲೀಕರಣ ಉಂಟಾದಾಗ ವೈದ್ಯರು ನಮ್ಮ ಬಳಿ ಬಾರ್ಲಿ ನೀರು ಸೇವನೆ ಮಾಡಲು ...

news

ಅಲ್ಯುವಿರಾ ಜ್ಯೂಸ್ ಕುಡಿದರೆ ಸಿಗುವ ಲಾಭವೇನು?

ಬೆಂಗಳೂರು: ಅಲ್ಯುವೀರಾ ನಮ್ಮ ಮನೆಯಂಗಳದಲ್ಲೇ ಸಿಗುವ ಮದ್ದು. ಸೌಂದರ್ಯ ರಕ್ಷಣೆಯಿಂದ ಹಿಡಿದು ನಮ್ಮ ...

Widgets Magazine
Widgets Magazine