ಅಸಿಡಿಟಿಗೆ ಪರಿಹಾರಗಳೇನು?

ಬೆಂಗಳೂರು, ಶುಕ್ರವಾರ, 2 ನವೆಂಬರ್ 2018 (16:40 IST)

ಇತ್ತೀಚಿನ ವಿದ್ಯಮಾನದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಸಮಸ್ಯೆ ಎಂದರೆ ಅಸಿಡಿಟಿ. ಈ ಅಸಿಡಿಟಿಯು ಮನುಷ್ಯನ ಜೀವನದಲ್ಲಿ ಒಂದಲ್ಲಾ ಒಂದು ಬಾರಿ ಅನುಭವವಾಗಿರುತ್ತದೆ. ಇದು ಒಂದು ರೀತಿಯ ಖಾಯಿಲೆಯೂ ಅಲ್ಲ, ಒಳ್ಳೆಯ ಆರೋಗ್ಯದ ಸಂಕೇತವೂ ಅಲ್ಲ. ಅಸಿಡಿಟಿಯನ್ನು ನಿರ್ಲಕ್ಷಿಸಲೂಬಾರದು. ಅಸಿಡಿಟಿಗೆ ಕೆಲವು ಮನೆಮದ್ದುಗಳಿವೆ. ಅಂತಹ ಪರಿಹಾರೋಪಾಯಗಳು ಯಾವುವು ಎಂಬುದನ್ನು ನೋಡೋಣ..
* ಜಾಸ್ತಿ ಮತ್ತು ಕೆಫಿನ್‌ಯುಕ್ತ ಪಾನೀಯಗಳನ್ನು ಸೇವಿಸಬಾರದು.
 
* ಅಧಿಕವಾಗಿ ಅಸಿಡಿಟಿಯ ತೊಂದರೆ ಇದ್ದರೆ ಮುಂಜಾನೆಯ ವೇಳೆ ಖಾಲಿ ಹೊಟ್ಟೆಯಲ್ಲಿ 2 ಗ್ಲಾಸ್ ನಿಂಬೆ ಹಣ್ಣಿನ ರಸ ಬೆರೆಸಿದ ನೀರನ್ನು ಕುಡಿದರೆ ಹೊಟ್ಟೆ ಶುಚಿಯಾಗುವುದಲ್ಲದೇ ಅಧಿಕ ತೂಕವು ನಿಯಂತ್ರಣವಾಗುವುದು.
 
* ಸಮಯಕ್ಕೆ ಸರಿಯಾಗಿ ಸಮ ಪ್ರಮಾಣದಲ್ಲಿ ಊಟ ಮಾಡುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
 
* 1 ಚಮಚ ಪುದೀನಾ ರಸಕ್ಕೆ 1/2 ನಿಂಬೆ ರಸ ಮತ್ತು 1 ಚಮಚ ಜೇನುತುಪ್ಪ ಸೇರಿಸಿ ಕುಡಿದರೆ ಎದೆ ಉರಿ ನಿವಾರಣೆಯಾಗುತ್ತದೆ.
 
* 1 ಚಮಚ ಕೊತ್ತಂಬರಿ ಬೀಜವನ್ನು 2 ಲೋಟ ತಣ್ಣೀರಿನಲ್ಲಿ ಹಾಕಿ ನೆನೆಸಿ ನಂತರ ಸೋಸಿದ ನೀರನ್ನು ಕುಡಿದರೆ ಅಸಿಡಿಟಿ ಗುಣವಾಗುತ್ತದೆ.
 
* ಪ್ರತಿದಿನ 1 ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
 
* ಮುಂಜಾನೆಯ ಉಪಾಹಾರವನ್ನು ಕಡ್ಡಾಯವಾಗಿ ಸೇವಿಸುವುದರಿಂದ ಅಸಿಡಿಟಿಯು ನಿವಾರಣೆಯಾಗುತ್ತದೆ.
 
* ಮದ್ಯಪಾನ, ಧೂಮಪಾನ, ಗುಟಕಾ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
 
* ನಿಯಮಿತ ಪ್ರಮಾಣದಲ್ಲಿ ಗುಲ್ಕಂದ್ ಸೇವಿಸುವುದರಿಂದ ಅಸಿಡಿಟಿಯು ನಿವಾರಣೆಯಾಗುತ್ತದೆ.
 
* ಕ್ಷಾರೀಯ ಗುಣವನ್ನು ಹೊಂದಿರುವ ಆಹಾರ ಪದಾರ್ಥಗಳ ಬಳಕೆ ಹೆಚ್ಚು ಮಾಡುವುದು ಅಥವಾ ಆಹಾರದಲ್ಲಿ ಶುಂಠಿಯ ಬಳಕೆಯನ್ನು ಮಾಡುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
 
* ಬೂದುಗುಂಬಳ ರಸಕ್ಕೆ ಕಲ್ಲುಸಕ್ಕರೆ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಅಸಿಡಿಟಿಯು ಗುಣವಾಗುತ್ತದೆ.
 
* ತಣ್ಣಗಿನ ಹಾಲು, ಕೆನೆ ತೆಗೆದ ಹಾಲನ್ನು ಕುಡಿಯುವುದರಿಂದ ಅಸಿಡಿಟಿಯ ಮೇಲೆ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
 
* ಎಳನೀರನ್ನು ಕುಡಿಯುವುದರಿಂದ ಅಸಿಡಿಟಿಯು ಶಮನವಾಗಿ ಜೀರ್ಣಾಂಗವ್ಯೂಹವು ಶಾಂತವಾಗುತ್ತದೆ.
 
* ಬಾದಾಮಿ, ಒಣ ಅಂಜೂರ ಮತ್ತು ಒಣದ್ರಾಕ್ಷಿಯು ಹೊಟ್ಟೆ ಉರಿಯ ಸಂವೇದನೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.
 
* ನಿಯಮಿತವಾದ ವಾಯುವಿಹಾರ, ಹಾಲಾಸನ, ಉಷ್ಟ್ರಾಸನ, ವಜ್ರಾಸನ, ಪವನ ಮುಕ್ತಾಸನ ಕಪಾಲಭಾತಿ ಪ್ರಾಣಾಯಾಮ ಇನ್ನೂ ಅನೆಕ ಆಸನಗಳನ್ನು ಮಾಡುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
 
* ಸ್ವಲ್ಪ ಉಪ್ಪು ಹಾಕಿದ ಉಗುರು ಬೆಚ್ಚಗಿನ ನೀರನ್ನು 7-8 ಗ್ಲಾಸ್ ಕುಡಿದು ತುದಿಗಾಲಿನಲ್ಲಿ ಕುಳಿತು ವಾಂತಿ ಮಾಡುವುದರಿಂದ ಅಸಿಡಿಟಿ ಕಡಿಮೆಯಾಗುತ್ತದೆ.
 
* ಪ್ರತಿದಿನ 2 ಚಮಚ ನೆಲ್ಲಿಕಾಯಿ ಪುಡಿಯನ್ನು ಸೇವಿಸುವುದರಿಂದ ಅಸಿಡಿಟಿಯು ನಿವಾರಣೆಯಾಗುತ್ತದೆ.
 
* ಪುದೀನಾ ಎಲೆಯನ್ನು ಬಿಸಿ ನೀರಿನಲ್ಲಿ ಹಾಕಿ ಕುದಿಸಿ ಅದು ಆರಿದ ನಂತರ ಕುಡಿಯುವುದರಿಂದ ಅಸಿಡಿಟಿಯಿಂದ ಮುಕ್ತರಾಗಬಹುದು.
 
* ಬಾಳೆಹಣ್ಣಿನಲ್ಲಿ ನಾರಿನ ಅಂಶವು ಅಧಿಕ ಪ್ರಮಾಣದಲ್ಲಿರುವುದರಿಂದ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುವುದಲ್ಲದೇ ಅಸಿಡಿಟಿಯು ಮರುಕಳಿಸದಂತೆ ತಡೆದು ಸಹಾಯ ಮಾಡುತ್ತದೆ.
 
* 10 ಗ್ರಾಂ ಒಣದ್ರಾಕ್ಷಿ ಹಾಗೂ 5 ಗ್ರಾಂ ಸೋಂಪನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಅದನ್ನು ಕಲೆಸಿ ಸೇವಿಸುವುದರಿಂದ ಅಸಿಡಿಟಿಯು ನಿವಾರಣೆಯಾಗುತ್ತದೆ.
 
* ಮೊಟ್ಟೆ ಸೇವಿಸುವಾಗ ಅದರ ಹಳದಿ ಭಾಗವನ್ನು ಸೇವಿಸಿದರೆ ಇದು ಅಸಿಡಿಟಿ ರೋಗ ಲಕ್ಷಣವನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅದನ್ನು ಸೇವಿಸದೇ ಇರುವುದು ಉತ್ತಮ.
 
* ಲವಂಗವು ಲಾಲಾರಸವನ್ನು ಉತ್ಪತ್ತಿ ಮಾಡುವ ಗುಣವನ್ನು ಹೊಂದಿರುವುದರಿಂದ ಲವಂಗವನ್ನು ಸೇವಿಸುವುದರಿಂದ ಅಸಿಡಿಟಿಯು ಶಮನವಾಗುತ್ತದೆ.
 
* ಬೆಲ್ಲವನ್ನು ನಿಧಾನವಾಗಿ ಚೀಪುತ್ತಾ ಇದ್ದರೆ ಅಸಿಡಿಟಿಯು ಸಂಪೂರ್ಣವಾಗಿ ಶಮನವಾಗುತ್ತದೆ.
 
* ಟೊಮೆಟೊ, ಚಾಕೊಲೇಟ್ ಸೇವನೆಯನ್ನು ಕಡಿಮೆ ಮಾಡುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
 
* ಊಟವಾದ ನಂತರ 5 ರಿಂದ 6 ತುಳಸಿ ಎಲೆಗಳನ್ನು ಸೇವಿಸುವುದರಿಂದ ಅಸಿಡಿಟಿ ಸಮಸ್ಯೆಯಿಂದ ದೂರವಿರಬಹುದು.
 
* ಮಾಂಸಾಹಾರವನ್ನು ಸೇವಿಸಿದಾಗ ತಪ್ಪದೇ ಬಿಸಿನೀರನ್ನು ಕುಡಿಯುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
 
* ನೆಲ್ಲಿಕಾಯಿಯು ಹಾನಿಗೊಳಗಾದ ಹೊಟ್ಟೆಯ ಪದರ ಮತ್ತು ಅನ್ನನಾಳಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ. 
 
* ಏಲಕ್ಕಿಯ ಸೇವನೆಯಿಂದಲೂ ಜೀರ್ಣಕ್ರಿಯೆಯು ಉತ್ತಮಗೊಂಡು ಹೊಟ್ಟೆಯ ಒಳಪದರವನ್ನು ಶಮನಗೊಳಿಸಿ ಅಧಿಕ ಆಮ್ಲವು ಉತ್ಪತ್ತಿಯಾದ ಪರಿಣಾಮವನ್ನು ಶಾಂತಗೊಳಿಸಲು ನೆರವಾಗುತ್ತದೆ. 
 
* ಶುಂಠಿಯನ್ನು ಜಗಿಯುವುದು ಅಥವಾ ಆಹಾರದಲ್ಲಿ ಶುಂಠಿಯನ್ನು ಬಳಸುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
 
* ಸೀಬೆಹಣ್ಣಿನ ಸೇವನೆಯಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
 
* ಅಸಿಡಿಟಿ ಸಮಸ್ಯೆಯುಂಟಾದಾಗ ಕೆಲವು ಕಾಳು ಸೋಂಪನ್ನು ತೆಗೆದುಕೊಂಡು ಅವುಗಳನ್ನು ನೀರಿನಲ್ಲಿ ನೆನೆಸಿ ಅದರ ನೀರನ್ನು ಸೇವಿಸುವುದರಿಂದ ಅಸಿಡಿಟಿಯು ನಿಯಂತ್ರಣಕ್ಕೆ ಬರುತ್ತದೆ.
 
* ಮನಸ್ಸನ್ನು ಉಲ್ಲಾಸಭರಿತವಾಗಿ ಇರಿಸಿಕೊಳ್ಳುವುದರಿಂದಲೂ ಅಸಿಡಿಟಿಯು ಶಮನವಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಅವಲಕ್ಕಿ ಖಾರ ಪೋಂಗಲ್

ತಮಿಳುನಾಡಿನ ವಿಶೇಷ ತಿನಿಸುಗಳಲ್ಲಿ ಪೋಂಗಲ್ ಕೂಡಾ ಒಂದು ಎಂದು ಹೇಳಬಹುದು. ಅದರೆ ಅವಲಕ್ಕಿಯನ್ನೂ ಹಾಕಿ ಖಾರ ...

news

ಖೋವಾ ಮಿಕ್ಸ್ ಜಾಮೂನ್

ಹಬ್ಬ ಹರಿದಿನಗಳಲ್ಲಿ ಸಾಮಾನ್ಯವಾಗಿ ಮಾಡುವ ಸಿಹಿ ಪದಾರ್ಥವೆಂದರೆ ಜಾಮೂನು. ಜಾಮೂನನ್ನು ಸುಲಭವಾಗಿ ತಯಾರಿಸಿ ...

news

ಮಕ್ಕಳ ಹಸಿವನ್ನು ಹೆಚ್ಚಿಸುತ್ತೇ ಈ ಆಹಾರಗಳು

ಬೆಂಗಳೂರು : ಸಾಮಾನ್ಯವಾಗಿ ಮಕ್ಕಳು ಊಟ ಮಾಡಲು ಇಷ್ಟಪಡುವುದಿಲ್ಲ. ಊಟ ಎಂದಾಕ್ಷಣ ಅಲ್ಲಿದ್ದ ಎದ್ದುಬಿದ್ದು ...

news

ವಾಯು ಮಾಲಿನ್ಯದಿಂದ ಕಾಪಾಡಿಕೊಳ್ಳಲು ಈ ಆಹಾರಗಳನ್ನು ಸೇವಿಸಿ

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ನಗರವಾಸಿಗಳಿಗೆ ವಾಯು ಮಾಲಿನ್ಯದ್ದೇ ಸಮಸ್ಯೆ. ಇದರಿಂದಾಗಿ ಆರೋಗ್ಯ ...

Widgets Magazine