ಹಲ್ಲಿ ನಿಯಂತ್ರಣಕ್ಕೆ ಕೆಲವು ಸುಲಭ ಉಪಾಯಗಳು

Bangalore, ಶನಿವಾರ, 3 ಜೂನ್ 2017 (08:15 IST)

Widgets Magazine

ಬೆಂಗಳೂರು: ಅಡುಗೆ ಮನೆಯಲ್ಲಿ ಹಲ್ಲಿಯ ಕಾಟ ಜಾಸ್ತಿ ಎಂದು ತಲೆಬಿಸಿ ಮಾಡಿಕೊಂಡಿದ್ದೀರಾ? ಈ ಅನಪೇಕ್ಷಿತ ಅತಿಥಿಯನ್ನು ಮನೆಯಿಂದ ಹೊರಗೆ ಹಾಕಲು ಇಲ್ಲಿದೆ ಕೆಲವು ಸರಳ ಉಪಾಯಗಳು.


 
ಐಸ್ ವಾಟರ್
ಹಲ್ಲಿ ಕಂಡೊಡನೆ ಅದರ ಮೇಲೆ ಐಸ್ ವಾಟರ್ ಹಾಕಿ. ಐಸ್ ನೀರು ಬಿದ್ದರೆ ಅದಕ್ಕೆ ಬೇಗನೇ ಓಡಾಡಲು ಆಗುವುದಿಲ್ಲ. ಆಗ ಅದನ್ನು ಎತ್ತಿ ಹೊರಹಾಕಬಹುದು.
ಈರುಳ್ಳಿ
ಈರುಳ್ಳಿಯನ್ನು ಕತ್ತರಿಸಿ ಅಡುಗೆ ಮನೆಯ ಮೂಲೆ ಮೂಲೆಯಲ್ಲಿ ಇಡಿ. ಈರುಳ್ಳಿಯ ವಾಸನೆ ಹಲ್ಲಿಗೆ ಆಗಿ ಬರೋದಿಲ್ಲ. ಅದು ಆ ಜಾಗಕ್ಕೆ ಸುಳಿಯುವುದೇ ಇಲ್ಲ.
 
ನವಿಲುಗರಿ
ಮನೆಯ ಗೋಡೆಯ ಮೂಲೆ ಮೂಲೆಯಲ್ಲಿ ನವಿಲು ಗರಿಯನ್ನು ನೇತಾಡಿಸಿ. ಅದನ್ನು ನೋಡಿದ ತಕ್ಷಣ ಹಲ್ಲಿ ಬೇರೇನೋ ಪ್ರಾಣಿ ಅಂದುಕೊಂಡು ಆ ಕಡೆಗೆ ಸುಳಿಯುವುದೇ ಇಲ್ಲ.
 
ಕಾಫಿ ಹುಡಿ ಮತ್ತು ತಂಬಾಕು ಉಂಡೆ
ಕಾಫಿ ಹುಡಿ ಮತ್ತು ತಂಬಾಕನ್ನು ಉಂಡೆ ಮಾಡಿ ಅಡುಗೆ ಮನೆಯ ಮೂಲೆ ಮೂಲೆಯಲ್ಲಿಟ್ಟು ನೋಡಿ. ಕಾಫಿ ಹುಡಿಯ ವಾಸನೆಗೆ ಹಲ್ಲಿ ಬಲೆಗೆ ಬೀಳುತ್ತದೆ.
 
ಇದೆಲ್ಲಾ ಆಗದಿದ್ದರೆ, ಮನೆಯಲ್ಲೊಂದು ಬೆಕ್ಕು ಸಾಕಿ ನೋಡಿ. ತಕ್ಷಣ ಹಲ್ಲಿಗಳು ಮಂಗಮಾಯವಾದಿದ್ದರೆ ಹೇಳಿ!

 http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಗರಂ ಗರಂ ಅವಲಕ್ಕಿ ಚಕ್ಕುಲಿ

ಸಾಯಂಕಾಲದ ಟೀ ಅಥವಾ ಕಾಫಿ ಜತೆ ಸವಿಯಲು ಈ ಅವಲಕ್ಕಿ ಚಕ್ಕುಲಿ ಮಾಡುವುದು ತುಂಬಾ ಸುಲಭ ಹಾಗೂ ತುಂಬಾ ರುಚಿ. ...

news

ಹೊಟ್ಟೆ ಹುಣ್ಣಿನ ಸಮಸ್ಯೆಗೆ ಮನೆ ಮದ್ದು

ಬೆಂಗಳೂರು: ಹೊಟ್ಟೆ ಹುಣ್ಣಿನ ಆಧುನಿಕ ಆಹಾರ ಪದ್ಧತಿಯಲ್ಲಿ ಸಾಮಾನ್ಯ ಸಮಸ್ಯೆಯಾಗಿ ಕಾಡುತ್ತಿದೆ. ಅದಕ್ಕೆ ...

news

ಮಳೆಗಾಲದ ಅಲರ್ಜಿಗಳಿಗೆ ಮನೆಯಲ್ಲೇ ಮಾಡಬಹುದಾದ ಮದ್ದು

ಬೆಂಗಳೂರು: ಮಳೆಗಾಲ ಬಂತು. ಜತೆಗೆ, ಶೀತ, ಕೆಮ್ಮೂ ನಾನೂ ಜತೆಗಿದ್ದೇನೆ ಎನ್ನುತ್ತಿದೆ. ಈ ಋತುವಿನ ಸಾಮಾನ್ಯ ...

news

ಯೋಗಾದಲ್ಲಿ ಶುರುವಾಗಿದೆ ಹೊಸ ಟ್ರೆಂಡ್: ನೀವೂ ಮಾಡಿ ನೋಡಿ ’ಮೇಕೆ ಯೋಗಾ’

ಇತ್ತೀಚಿನ ದಿನಗಳಲ್ಲಿ ಯೋಗಾದಲ್ಲಿ ಒಂದು ಹೊಸ ಟ್ರೆಂಡ್ ಶುರುವಾಗಿದೆ. ಅದೇನೆಂದರೆ ’ಗೋಟ್ ಯೋಗ’(Goat Yoga) ...

Widgets Magazine Widgets Magazine