ಟೊಮೆಟೊ ತೊಕ್ಕು ಮಾಡಿ ವಿಟಮಿನ್ ಹೊಟ್ಟೆಗಿಳಿಸಿ

Bangalore, ಗುರುವಾರ, 2 ಫೆಬ್ರವರಿ 2017 (10:41 IST)

Widgets Magazine

ಬೆಂಗಳೂರು: ಟೊಮೆಟೊ ಉಪ್ಪಿನಕಾಯಿ ರೀತಿಯಲ್ಲೇ ತೊಕ್ಕು ಮಾಡಬಹುದು. ಸಿ ವಿಟಮಿನ್ ಹೇರಳವಾಗಿರುವ ಟೊಮೆಟೋ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಹದ ಖಾರ, ಉಪ್ಪು ಹಾಕಿಕೊಂಡು ಮಾಡುವುದರಿಂದ ಹೊಟ್ಟೆಯುರಿ ಬಾರದ ಹಾಗೆ ಊಟ ರುಚಿಯಾಗುವಂತೆ ಮಾಡುವ ರೆಸಿಪಿ ಇದು. ಮಾಡುವುದು ಹೇಗೆಂದು ನೋಡಿಕೊಳ್ಳಿ.
 
ಬೇಕಾಗುವ ಸಾಮಗ್ರಿಗಳು


ಟೊಮೆಟೊ
ಸಾಸಿವೆ
ಇಂಗು
ಎಣ್ಣೆ
ಉಪ್ಪು
ಅರಸಿನ ಪುಡಿ
ಖಾರದ ಪುಡಿ
 
ಮಾಡುವ ವಿಧಾನ
 
ಟೊಮೆಟೋವನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಬಾಣಲೆಯಲ್ಲಿ ಸಾಸಿವೆ, ಇಂಗು, ಎಣ್ಣೆ ಹಾಕಿಕೊಂಡು ಒಗ್ಗರಣೆ ಮಾಡಿದ ಮೇಲೆ ಕತ್ತರಿಸಿದ ಟೊಮೆಟೋವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಇದಕ್ಕೆ ಸ್ವಲ್ಪ ಅರಸಿನ ಪುಡಿ, ಖಾರದ ಪುಡಿ, ಉಪ್ಪು ಹಾಕಿಕೊಂಡು ಚೆನ್ನಾಗಿ ತಿರುವಿ. ನೀರು ಹಾಕುವುದು ಬೇಡ. ಟೊಮೆಟೊ ಚೆನ್ನಾಗಿ ಬೆಂದು ಮುದ್ದೆಯಾಗಿ ಉರಿ ಆರಿಸಿ. ಇದನ್ನು ಎರಡು ಮೂರು ದಿನದವರೆಗೆ ಹಾಳಾಗದಂತೆ ಇಡಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಟೊಮೆಟೊ ಆಹಾರ ಅಡುಗೆ ಆರೋಗ್ಯ Tometo Food Health Cooking

Widgets Magazine

ಆರೋಗ್ಯ

news

ಕೂದಲು ಉದುರುವಿಕೆಗೆ ಈರುಳ್ಳಿಯೇ ರಾಮಬಾಣ

ಹಲವರಿಗೆ ಇದೊಂದು ಸಮಸ್ಯೆ. ತಲೆ ಬಾಚಿಕೊಂಡರೆ ಸಾಕು ಬಾಚಣಿಗೆ ತುಂಬಾ ಕೂದಲು. ಇನ್ನೂ ನಲ್ವತ್ತರ ಹರೆಯ ...

news

ಮೂಗಿನಲ್ಲಿ ಸದಾ ವರ್ಷಕಾಲವೇ? ಈ ಕಾರಣಗಳಿರಬಹುದು!

ಕೆಲವರಿಗೆ ವರ್ಷ ಪೂರ್ತಿ ಶೀತದ ಸಮಸ್ಯೆ. ಸದಾ ಪಕ್ಕದಲ್ಲಿ ನ್ಯಾಪ್ ಕಿನ್ ಇಟ್ಟುಕೊಳ್ಳಲೇಬೇಕು. ಹೀಗೆ ಪದೇ ...

news

ಮಕ್ಕಳ ಜತೆ ತೊದಲು ಮಾತನಾಡುವುದೂ ಅಪಾಯವೇ

ಚಿಕ್ಕ ಮಕ್ಕಳು ಮನೆಯಲ್ಲಿದ್ದರೆ, ನಾವೂ ಮಕ್ಕಳಾಗಿ ಬಿಡುತ್ತೇವೆ. ಅವರು ತೊದಲು ಮಾತನಾಡುತ್ತಿದ್ದರೆ, ನಾವೂ ...

news

ರುಚಿ ರುಚಿ ನೆಲ್ಲಿಕಾಯಿ ಉಪ್ಪಿನಕಾಯಿ ಹಾಕಿ

ನೆಲ್ಲಿಕಾಯಿ ಇಷ್ಟವಿಲ್ಲದವರು ಯಾರು? ಅದರಲ್ಲೂ ಉಪ್ಪಿನಕಾಯಿ ಇಷ್ಟಪಡದವರು ಇಲ್ಲವೇ ಇಲ್ಲ. ನೆಲ್ಲಿಕಾಯಿ ಬಳಸಿ ...

Widgets Magazine