ಟೇಸ್ಟಿಯಾದ ಹಲಸಿನ ಹಣ್ಣಿನ ಪಾಯಸ

ಬೆಂಗಳೂರು, ಭಾನುವಾರ, 14 ಜನವರಿ 2018 (09:54 IST)

ಬೆಂಗಳೂರು : ಹಲಸಿನ ಹಣ್ಣು ಎಲ್ಲರಿಗೂ ಪ್ರಿಯವಾದ ಒಂದು ಹಣ್ಣು. ಇದರಿಂದ ಹಲವು ವಿಧದ ತಿಂಡಿ ತಿನಿಸುಗಳನ್ನು ಮಾಡಬಹುದು. ಅದರಲ್ಲಿ ಒಂದಾದ ಹಲಸಿನ ಹಣ್ಣಿನ ಪಾಯಸ ಮಾಡುವುದನ್ನು ಈಗ ತಿಳಿಯೋಣ.

 
ಬೇಕಾಗುವ ಸಾಮಾಗ್ರಿಗಳು : ಸಣ್ಣಗೆ ಕಟ್ ಮಾಡಿಕೊಂಡ ಹಲಸಿನ ತೊಳೆ 6, ಹುರಿದ ಚಿರೋಟಿ ರವಾ ½ ಟೇಬಲ್ ಸ್ಪೂನ್, 1 ಕಪ್ ಹಾಲು, ½ ಕಪ್ ನೀರು, 2 ಚಿಟಿಕೆ ಏಲಕ್ಕಿ ಪುಡಿ,  ½ ಕಪ್ ತೆಂಗಿನಕಾಯಿ ತುರಿ, ½ ಕಪ್ ಬೆಲ್ಲದ ಪುಡಿ, ಸ್ವಲ್ಪ ದ್ರಾಕ್ಷಿ-ಪೀಸ್ ಮಾಡಿದ  ಬಾದಾಮಿ-ಗೋಡಂಬಿ (ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ), 2 ಟೇಬಲ್ ಸ್ಪೂನ್.

 
ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಹಲಸಿನ ಹಣ್ಣಿನ ಪೀಸ್ ಹಾಕಿ ಅದನ್ನು 4-5 ಚೆನ್ನಾಗಿ ಫ್ರೈ ಮಾಡಿ ನಂತರ ಅದಕ್ಕೆ ಹಾಲು ಹಾಕಿ ಕುದಿಸಿ ನಂತರ ಅದಕ್ಕೆ ಚಿರೋಟಿ ರವೆಯನ್ನು ಹಾಕಿ ಮಿಕ್ಸ್ ಮಾಡಿ. 2 ನಿಮಿಷ ಬಿಟ್ಟು ರುಬ್ಬಿದ ತೆಂಗಿನಕಾಯಿ ತುರಿಯನ್ನುಹಾಗು ಸ್ವಲ್ಪ ನೀರು (ಬೇಕಾದಲ್ಲಿ ಮಾತ್ರ) ಅದಕ್ಕೆ ಹಾಕಿ, ಬೆಲ್ಲವನ್ನು ಹಾಕಿ ಚೆನ್ನಾಗಿ ಕೈಆಡಿಸಿ. 5 ನಿಮಿಷ ಕುದಿಸಿ. ನಂತರ ಕೆಳಗಿಳಿಸಿ ಏಲಕ್ಕಿ ಪುಡಿ, ಹುರಿದ ದ್ರಾಕ್ಷಿ,ಗೋಡಂಬಿ,ಬಾದಾಮಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಹಲಸಿನ ಹಣ್ಣಿನ ಪಾಯಸ ರೆಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  
ಹಲಸಿನ ಹಣ್ಣು ಹಾಲು ತುಪ್ಪ ನಿಮಿಷ ನೀರು ಸಾಮಾಗ್ರಿ Milk Ghee Minute Water Item Jack Fruits

ಆರೋಗ್ಯ

news

ಪ್ರಗ್ನೆನ್ಸಿ ಬಗ್ಗೆ ಬೇಡದ ಈ ಆತಂಕಗಳಿಗೆ ಗುಡ್ ಬೈ ಹೇಳಿ!

ಬೆಂಗಳೂರು: ನವದಂಪತಿಗಳಿಗೆ ಸೆಕ್ಸ್ ವಿಚಾರದಲ್ಲಿ ಹಲವು ಆತಂಕಗಳಿರುತ್ತವೆ. ಅದರಲ್ಲೂ ವಿಶೇಷವಾಗಿ ...

news

ಡಸ್ಟ್ ಅಲರ್ಜಿಗೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು : ಹಲವರಲ್ಲಿ ಕಾಡುವ ಒಂದು ಸಮಸ್ಯೆ ಎಂದರೆ ಅದು ಡಸ್ಟ್ ಅಲರ್ಜಿ. ಕೆಲವರಿಗೆ ಹೊರಗಡೆ ಹೋದಾಗ ಡಸ್ಟ್ ...

news

ಪಾದಗಳನ್ನು ಬಿಳಿಯಾಗಿಸಬೇಕೇ…? ಮನೆಯಲ್ಲಿಯೇ ಈ ಪೆಡಿಕ್ಯೂರ್ ಮಾಡಿಕೊಳ್ಳಿ

ಬೆಂಗಳೂರು : ಕೆಲವರ ಪಾದಗಳು ನೋಡಲು ತುಂಬಾ ಕಪ್ಪಾಗಿಯೂ, ಅಸಹ್ಯವಾಗಿಯೂ ಇರುತ್ತದೆ. ಅಷ್ಟೇ ಅಲ್ಲದೆ ...

news

ಮಹಿಳೆಯರೇ ಪೀರಿಯಡ್ಸ್ ಸಮಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ!

ಬೆಂಗಳೂರು : ಎಲ್ಲರೂ ಹೆಣ್ಣಿನ ಸೌಂದರ್ಯ ಕಂಡು ಸಂತೋಷ ಪಡುತ್ತಾರೆ. ಆದರೆ ಹೆಣ್ಣು ತನ್ನ ಮೇಲೆ ತಾನು ...

Widgets Magazine