ರುಚಿ ರುಚಿಯಾದ ಮಾವಿನಕಾಯಿಯ ಚಿತ್ರಾನ್ನ

ಬೆಂಗಳೂರು, ಗುರುವಾರ, 11 ಜನವರಿ 2018 (11:26 IST)

Widgets Magazine

ಬೆಂಗಳೂರು : ಬೆಳಿಗ್ಗೆ ಟಿಪನ್ ಗೆ ಯಾವ ತಿಂಡಿ ಮಾಡುವುದು ಎಂಬ ಚಿಂತೆ ಎಲ್ಲಾ ಗೃಹಿಣಿಯವರಿಗೂ ಇದ್ದೆಇರುತ್ತೆ. ಅದಕ್ಕಾಗಿ ಸುಲಭವಾಗಿ ಬೇಗ ತಯಾರಾಗುವಂತ ಮಾವಿನಕಾಯಿ ಚಿತ್ರಾನ್ನವನ್ನು ಮಾಡಿ. ತಿನ್ನಲು ಬಹಳ  ರುಚಿಯಾಗಿರುತ್ತದೆ.


ಬೇಕಾಗಿರುವ ಸಾಮಾಗ್ರಿಗಳು :
1 ಕಪ್ ಅನ್ನ, 1 ಮಾವಿನ ಕಾಯಿ, ಸ್ವಲ್ಪ ಕರಿಬೇವು, ಸ್ವಲ್ಪ ಕೊತ್ತಂಬ್ಬರಿ ಸೋಪ್ಪು, ½ ಕಪ್ ಶೇಂಗಾ ಕಾಳು, 1 ಸಣ್ಣಗೆ ಹೆಚ್ಚಿದ ಈರುಳ್ಳಿ, ಹೆಚ್ಚಿದ ಹಸಿಮೆಣಸಿನಕಾಯಿ(ಖಾರಕ್ಕೆ ಬೇಕಾಗುವಷ್ಟು), ಉಪ್ಪು, 1 ಚಮಚ ಸಾಸಿವೆ, 1 ಚಮಚ ಜೀರಿಗೆ, 1ಚಮಚ ಅರಶಿನ, 2 ಚಮಚ ಎಣ್ಣೆ.


ಮಾಡುವ ವಿಧಾನ :
ಮೊದಲಿಗೆ ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಸಾಸಿವೆ ಹಾಗು ಜೀರಿಗೆಯನ್ನು ಹಾಕಿ. ನಂತರ ಅದಕ್ಕೆ ಶೇಂಗಾ ಕಾಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ಅದಕ್ಕೆ ಸ್ವಲ್ಪ ಕರಿಬೇವು, ಈರುಳ್ಳಿ ಹಾಕಿ ಫ್ರೈ ಮಾಡಿ. ಈರುಳ್ಳಿ ಕೆಂಪಾದ ಮೇಲೆ ಹಸಿಮೆಣನಸಿನ ಕಾಯಿ, ಅರಶಿನ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ನಂತರ ಸ್ವಲ್ಪ ಉಪ್ಪನ್ನು ಹಾಕಿ ಮಿಕ್ಸ್ ಮಾಡಿ ಅದಕ್ಕೆ ಹಾಗು ತುರಿದ ಮಾವಿನಕಾಯಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬಿಸಿ ಮಾಡಿ ನಂತರ ಕೊತ್ತಂಬ್ಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿದರೆ ಮಾವಿನಕಾಯಿ ಚಿತ್ರಾನ್ನ ರೆಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಡೆಲಿವರಿ ನಂತರ ಮಹಿಳೆ ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ಳುವುದು ನಿಜವೇ?

ಬೆಂಗಳೂರು: ಡೆಲಿವರಿಯಾದ ಮೇಲೆ ಮಹಿಳೆಯರ ಗಮನ ಕೇವಲ ಗಂಡನ ಕಡೆಗೆ ಮಾತ್ರವಲ್ಲ, ಅದಕ್ಕಿಂತ ಹೆಚ್ಚು ಮಗುವಿನ ...

news

ಮಕ್ಕಳಿಗೆ ಎಣ್ಣೆ ಮಸಾಜ್ ಮಾಡುವುದರ ಲಾಭವೇನು?

ಬೆಂಗಳೂರು: ಚಿಕ್ಕ ಮಕ್ಕಳಿಗೆ ಮೈಯೆಲ್ಲಾ ಎಣ್ಣೆ ಹಚ್ಚಿಕೊಂಡು ಮಸಾಜ್ ಮಾಡಿ ನಂತರ ಕಾಲ ಮೇಲೆ ಹಾಕಿ ಬಿಸಿ ...

news

ಪಾಲಕ್ ಸೂಪ್ ಮಾಡುವುದು ಹೇಗೆ?

ಬೆಂಗಳೂರು: ಕೂದಲು ಬೆಳವಣಿಗೆಗೆ, ಕಣ್ಣಿನ ಆರೋಗ್ಯಕ್ಕೆ ಪಾಲಕ್ ಸೊಪ್ಪಿನ ಸೇವನೆ ತುಂಬಾ ಉತ್ತಮ. ಪಾಲಕ್ ...

news

ಪುರುಷರ ಅಂದವನ್ನು ಹೆಚ್ಚಿಸಲು ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು : ಅಂದವಾಗಿ ಕಾಣಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಇದರಲ್ಲಿ ಲಿಂಗ ಭೇಧವಿಲ್ಲ. ಹುಡುಗಿಯರ ...

Widgets Magazine