ಮನೆಯಲ್ಲಿ ಅನ್ನ ಉಳಿದಿದೆಯೇ...? ಹಾಗಾದ್ರೆ ಸುಲಭವಾಗಿ ಈ ರುಚಿಕರ ವಡೆ ತಯಾರಿಸಿ

ಬೆಂಗಳೂರು, ಶುಕ್ರವಾರ, 12 ಜನವರಿ 2018 (15:33 IST)

ಬೆಂಗಳೂರು : ಮನೆಯಲ್ಲಿ ಮಾಡಿದ ಅನ್ನದಲ್ಲಿ ಕೆಲವೊಮ್ಮೆ ಸ್ವಲ್ಪ ಉಳಿದಿರುತ್ತದೆ. ಆಗ ಅದನ್ನು ಎಸೆಯಲು ಮನಸ್ಸಾಗದೆ ಏನು ಮಾಡುವುದು ಎಂದು ಯೋಚಿಸುತ್ತಾರೆ. ಅಂತವರಿಗೆ ಇಲ್ಲಿದೆ ಒಂದು ಪರಿಹಾರ. ಉಳಿದಿರುವ ಅನ್ನದಿಂದ ರುಚಿಕರವಾದ ವಡೆ ತಯಾರಿಸಬಹುದು.

 
ಬೇಕಾಗಿರುವ ಸಾಮಾಗ್ರಿಗಳು : ಉಳಿದಿರುವ 1 ಕಪ್, ಕಡಲೆಹಿಟ್ಟು 3-5 ಟೇಬಲ್ ಸ್ಪೂನ್, ಜೀರಿಗೆ ಪುಡಿ 2 ಚಿಟಿಕೆ, ಇಂಗು 1 ಚಿಟಿಕೆ, ಸಣ್ಣಗೆ ಹೆಚ್ಚಿದ ಸಬ್ಸಿಗೆ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ(ಬೇಕಾದಲ್ಲಿ ಮಾತ್ರ), ಶುಂಠಿಬೆಳ್ಳುಳ್ಳಿ ಪೇಸ್ಟ್ ¼ ಚಮಚ, ಸಣ್ಣಗೆ ಹೆಚ್ಚಿದ 1 ಈರುಳ್ಳಿ, ಕರಿಬೇವು, ಎಣ್ಣೆ, ಉಪ್ಪು.

 
ಮಾಡುವ ವಿಧಾನ : ಮೇಲೆ ಹೇಳಿರುವ ಎಲ್ಲಾ ಸಾಮಾಗ್ರಿಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ರುಚಿಗೆ ತಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ ನಂತರ ಸ್ವಲ್ಪ ನೀರನ್ನು ಹಾಕಿ ವಡೆಹಿಟ್ಟಿನ  ಹದಕ್ಕೆ ಕಲಸಿ. ನಂತರ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದಕ್ಕೆ ಸ್ವಲ್ಪ ಹಿಟ್ಟನ್ನುತೆಗೆದುಕೊಂಡು ವಡೆ ಆಕಾರದಲ್ಲಿ ತಟ್ಟಿ ಎಣ್ಣೆಗೆ ಬಿಟ್ಟು  ಚೆನ್ನಾಗಿ ಬೇಯುವ ತನಕ ಕರಿಯಿರಿ. ಅದು ಕೆಂಪಗಾದ ಮೇಲೆ ತೆಗೆಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಅನ್ನ ಪೇಸ್ಟ್ ಎಣ್ಣೆ ಉಪ್ಪು ಪುಡಿ ನೀರು Rice Paste Oil Salt Powder Water

ಆರೋಗ್ಯ

news

ಗುಪ್ತಾಂಗವನ್ನು ಶುಚಿಯಾಗಿಟ್ಟುಕೊಳ್ಳುವುದು ಹೇಗೆ?

ಬೆಂಗಳೂರು: ಗುಪ್ತಾಂಗದ ಶುಚಿತ್ವ ಎನ್ನುವುದು ತುಂಬಾ ಮುಖ್ಯವಾದ ಅಂಶ. ಇದನ್ನು ಶುಚಿಯಾಗಿಟ್ಟುಕೊಳ್ಳದಿದ್ದರೆ ...

news

ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಆಯಸ್ಸು! ಕಾರಣವೇನು ಗೊತ್ತಾ?

ನವದೆಹಲಿ: ನಮ್ಮಲ್ಲಿ ತಮಾಷೆಗೆ ಪತಿಗಿಂತ ಪತಿಯೇ ಹೆಚ್ಚು ಆಯಸ್ಸು ಹೊಂದಿರುತ್ತಾಳೆ ಎನ್ನುತ್ತಾರೆ. ಆದರೆ ಇದು ...

news

ಮುಖದ ಚರ್ಮ ಸುಕ್ಕುಗಟ್ಟದಂತೆ ತಡೆಯಬೇಕಾ...? ಹಾಗಾದರೆ ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಎಲ್ಲರಿಗೂ ತಾವು ಆಕರ್ಷಕವಾಗಿ ಕಾಣಬೇಕು ಎಂಬ ಆಸೆ ಇದ್ದೆಇರುತ್ತದೆ. ಅದಕ್ಕಾಗಿ ತಮ್ಮ ...

news

ಕೈಕಾಲು ಊತದಿಂದ ಬಳಲುತ್ತಿದ್ದವರಿಗೆ ಇಲ್ಲಿದೆ ಮನೆಮದ್ದು

ಬೆಂಗಳೂರು : ಕೆಲವೊಮ್ಮೆ ವಿವಿಧ ಕಾರಣಗಳಿಂದ ಅಂಗಾಂಶಗಳಲ್ಲಿ ದ್ರವಪದಾರ್ಥಗಳ ಪ್ರಮಾಣ ಜಾಸ್ತಿಯಾಗಿ ದೇಹದ ...

Widgets Magazine