ಟೊಮೆಟೊ, ಬೆಳ್ಳುಳ್ಳಿಯ ರಸಂ ಮಾಡುವುದು ಹೇಗೆ ಗೊತ್ತಾ…?

ಬೆಂಗಳೂರು, ಬುಧವಾರ, 28 ಫೆಬ್ರವರಿ 2018 (06:59 IST)

Widgets Magazine

ಬೆಂಗಳೂರು: ಬಿಸಿಬಿಸಿ ಅನ್ನಕ್ಕೆ ರುಚಿಯಾದ  ಟೊಮೆಟೊ ಬೆಳ್ಳುಳ್ಳಿ ರಸಂ ಇದ್ದರೆ, ಊಟ ಹೊಟ್ಟೆಗೆ ಸೇರಿದ್ದೆ ತಿಳಿಯುವುದಿಲ್ಲ. ರುಚಿಯಾದ ಟೊಮೆಟೊ, ಬೆಳ್ಳುಳ್ಳಿ ರಸಂ ಮಾಡುವುದು ಹೇಗೆ ಗೊತ್ತಾ…? ಇಲ್ಲಿದೆ ನೋಡಿ ವಿಧಾನ.


ಬೇಕಾಗುವ ಸಾಮಾಗ್ರಿ
500 ಗ್ರಾಂ  ಟೋಮೆಟೊ ಹಣ್ಣು
5-6 ಬೆಳ್ಳುಳ್ಳಿ ಎಸಳು ಹದವಾಗಿ ಕುಟ್ಟಿದ್ದು
ರುಚಿಗೆ ತಕ್ಕಷ್ಟು ಉಪ್ಪು
1 ಚಮಚ ಕಾಳು ಮೆಣಸು
ಸಣ್ಣ ತುಂಡು ಶುಂಠಿ ತುರಿ
1 ಚಮಚ ರಸಂ ಪುಡಿ
2 ಟೀ ಚಮಚ-ಅರಿಶಿನ ಪುಡಿ
1 ಟೀ ಚಮಚ ಕೆಂಪು ಮೆಣಸಿನ ಪುಡಿ
 
ವಿಧಾನ: ಕುಕ್ಕರ್ ಗೆ ಕತ್ತರಿಸಿದ ಟೊಮೆಟೊ, ಬೆಳ್ಳುಳ್ಳಿ, ಕಾಳುಮೆಣಸು, ಶುಂಠಿ, ಉಪ್ಪು 4 ಕಪ್ ನೀರು ಸೇರಿಸಿ 2 ವಿಷಲ್ ಬರಿಸಿ.ಇದು ತಣ್ಣಗಾದ ನಂತರ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ.
ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ರುಬ್ಬಿಕೊಂಡ ಟೊಮೆಟೊ ಮಿಶ್ರಣ, ಅರಿಶಿನ ಪುಡಿ, ರಸಂ ಪುಡಿ, ಕೆಂಪು ಮೆಣಸಿನ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ.
ನಂತರ ಒಂದು ಸಣ್ಣ ಪಾತ್ರೆಗೆ 2 ಚಮಚ ಹಾಕಿ ಸಾಸಿವೆ, ಇಂಗು ಕರಿಬೇವು, ಬೆಳ್ಳುಳ್ಳಿ ಹಾಕಿ ಒಗ್ಗರಣೆ ಸಿದ್ದಪಡಿಸಿಕೊಳ್ಳಿ. ಇದನ್ನು ಟೊಮೆಟೋ ಮಿಶ್ರಣಕ್ಕೆ ಸೇರಿಸಿದರೆ ಟೊಮೆಟೊ, ಬೆಳ್ಳುಳ್ಳಿ ರಸಂ ಸಿದ್ಧ.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಟೊಮೆಟೊ ಬೆಳ್ಳುಳ್ಳಿ ರಸಂ ತುಪ್ಪ ಕುಕ್ಕರ್ ಉಪ್ಪು ಅಡುಗೆ Tomato Garlic Rasam Ghee Cocoker Salt Cooking

Widgets Magazine

ಆರೋಗ್ಯ

news

ಪುದೀನಾ, ದಾಳಿಂಬೆ ಹಣ್ಣಿನ ರಾಯಿತ

ಬೆಂಗಳೂರು: ದೇಹಕ್ಕೂ ತಂಪು ಅನಿಸುವ ಹಾಗೂ ಆರೋಗ್ಯಕ್ಕೂ ಹಿತಕರ ಅನಿಸುವ ರಾಯಿತಗಳು ರುಚಿಕರವಾಗಿರುತ್ತದೆ. ...

news

ಲೈಂಗಿಕಾಸಕ್ತಿ ಕಡಿಮೆಯಾಗಲು ಇದೂ ಕಾರಣವೇ?!

ಬೆಂಗಳೂರು: ಮಹಿಳೆಯರಲ್ಲಿ ಹಾರ್ಮೋನ್ ಗಳ ಬದಲಾವಣೆ ಸಾಕಷ್ಟು ಮಾನಸಿಕ, ದೈಹಿಕ ಮಾರ್ಪಾಡಿಗೆ ಕಾರಣವಾಗುತ್ತದೆ. ...

news

ಹಿಮೋಗ್ಲೋಬಿನ್ ಅಂಶ ಹೆಚ್ಚಿಸಲು ಏನು ಮಾಡಬೇಕು?

ಬೆಂಗಳೂರು: ದೇಹಕ್ಕೆ ಹಿಮೋಗ್ಲೋಬಿನ್ ಅಂಶ ತುಂಬಾ ಪ್ರಾಮುಖ್ಯವಾಗಿದೆ. ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ...

news

ಖರ್ಜೂರ ಹಾಗೂ ಬನಾನ ಮಿಲ್ಕ್ ಶೇಕ್‌

ಬೆಂಗಳೂರು: ಖರ್ಜೂರ, ಬಾಳೆಹಣ್ಣನ್ನು ಸೇರಿಸಿ ಮಾಡಿದ ಜ್ಯೂಸ್ ದೇಹಕ್ಕೂ ತಂಪು, ಕುಡಿಯುವುದಕ್ಕೂ ಹಿತಕರ. ...

Widgets Magazine