ವೆಜಿಟೇಬಲ್ ಸೂಪ್

ಬೆಂಗಳೂರು, ಬುಧವಾರ, 10 ಅಕ್ಟೋಬರ್ 2018 (13:28 IST)

ನಮ್ಮ ದೇಹ ಆರೋಗ್ಯವಾಗಿರಬೇಕು ಎಂದರೆ ಸಾಕಷ್ಟು ಪೋಷಕಾಂಶಗಳು ನಮಗೆ ಸಿಗಬೇಕು ಇದು ನಾವು ತಿನ್ನುವ ಆಹಾರದಿಂದ ನಮ್ಮ ದೇಹಕ್ಕೆ ಲಭ್ಯವಾಗುತ್ತದೆ ಆದರೆ ಕೆಲವೊಮ್ಮೆ ಎಲ್ಲಾ ರೀತಿಯ ಪೋಶಕಾಂಶಗಳು ನಮ್ಮ ದೇಹಕ್ಕೆ ಲಭ್ಯವಾಗದೇ ಇರಬಹುದು ಹಾಗಾಗೀ ನಾವು ದಿನನಿತ್ಯದ ಆಹಾರಗಳಲ್ಲಿ ಸೂಪ್ ಅನ್ನು ಸೇವಿಸುವ ಮೂಲಕ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೋಶಕಾಂಶಗಳನ್ನು ನಮ್ಮದಾಗಿಸಿಕೊಳ್ಳಬಹುದು ಹಾಗಾದರೆ ಸೂಪ್ ಅನ್ನು ಹೇಗೆ ತಯಾರಿಸುತ್ತಾರೆ ಎನ್ನುವುದನ್ನು ತಿಳಿಯಬೇಕೆ ಇಲ್ಲಿದೆ ವಿವರ
 
ಕ್ಯಾರೆಟ್ 1/2 ಕಪ್ ( ಕತ್ತರಿಸಿದ್ದು)
ಕಿಡ್ನಿ ಬೀನ್ಸ್ 1/4 ಕಪ್ 
ಬಟಾಣಿ 1/2 ಕಪ್ 
ಟೊಮೆಟೊ 2 
ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಶುಂಠಿ ಪೇಸ್ಟ್ 1 ಚಮಚ 
ಸ್ವಲ್ಪ ಕೊತ್ತಂಬರಿ ಸೊಪ್ಪು
ಬೆಣ್ಣೆ 3 ಚಮಚ 
ನೀರು 3 ಲೋಟ 
ಉಪ್ಪು ರುಚಿಗೆ ತಕ್ಕಷ್ಟು
ತುಪ್ಪ 
ತಯಾರಿಸುವ ವಿಧಾನ:
 
ಪ್ರೆಶರ್ ಕುಕ್ಕರ್ ನಲ್ಲಿ ಬೆಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ಶುಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ನಂತರ ಉಳಿದ ತರಕಾರಿಗಳನ್ನು ಹಾಕಿ ಸ್ವಲ್ಪ ಹೊತ್ತು ಬಿಸಿ ಮಾಡಿ ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ತದನಂತರ ನೀರು ಸೇರಿಸಿರಿ ನಂತರ ಅನ್ನು ಪ್ರೆಶರ್ ಕುಕ್ಕರ್‌ನಲ್ಲಿ ಮುಚ್ಚಳ ಹಾಕಿ 5 ರಿಂದ 6 ನಿಮಿಷಗಳ ಕಾಲ ಬೇಯಿಸಬೇಕು ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತೆ 2 ರಿಂದ 3 ನಿಮಿಷ ಬೇಯಿಸಬೇಕು. ಅದಾದ ಮೇಲೆ ಅದಕ್ಕೆ ಸ್ವಲ್ಪ ತುಪ್ಪ ಹಾಕಿದರೆ ರುಚಿಕರವಾದ ಮಿಶ್ರ ವೆಜಿಟೇಬಲ್ ಸೂಪ್ ರೆಡಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪಾಲಾಕ್ ಪನೀರ್ ರೋಲ್

ಪನೀರ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ!!! ಅದರಲ್ಲಿಯೂ ಪಾಲಾಕ್ ಪನೀರ್ ರೋಲ್ ಒಂದು ಒಳ್ಳೆಯ ಕಾಂಬಿನೇಷನ್. ...

news

ಈರುಳ್ಳಿ ರಾಗಿ ರೊಟ್ಟಿಯನ್ನು ಮಾಡಿ ನೋಡಿ...

ರಾಗಿಯು ಆರೋಗ್ಯಕ್ಕೆ ತುಂಬಾ ಹಿತವಾದ ಧಾನ್ಯವಾಗಿದೆ. ಆದರೆ ಅದನ್ನು ಅಕ್ಕಿಯಂತೆ ಹೆಚ್ಚಾಗಿ ಬಳಸುವುದಿಲ್ಲ. ...

news

ತಲೆಯೊಳಗೆ ಹೀಗೆಲ್ಲಾ ಆಗ್ತಿದ್ದರೆ ವಿಟಮಿನ್ ಡಿ ಕೊರತೆಯ ಲಕ್ಷಣ!

ಬೆಂಗಳೂರು: ಕೆಲವು ಅಧ್ಯಯನಗಳ ಪ್ರಕಾರ ನಮ್ಮ ದೇಶದಲ್ಲಿ ಶೇ. 79 ರಷ್ಟು ಮಂದಿ ವಿಟಮಿನ್ ಡಿ ಕೊರತೆಯಿಂದ ...

news

ಜಗಳವಾದ ಮೇಲೆ ಪರಸ್ಪರ ತಬ್ಬಿಕೊಳ್ಳಿ!

ಬೆಂಗಳೂರು: ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಅಂತಾರೆ. ಹಾಗಿದ್ದರೇ ಚೆನ್ನ. ಜಗಳವಾದ ಮೇಲೆ ಇಬ್ಬರೂ ...

Widgets Magazine