ಸೆನ್ಸೆಕ್ಸ್: 31 ಪಾಯಿಂಟ್‌ಗಳ ಕುಸಿತ ಕಂಡ ಶೇರುಪೇಟೆ ಸೂಚ್ಯಂಕ

ಮುಂಬೈ, ಮಂಗಳವಾರ, 26 ಜುಲೈ 2016 (11:41 IST)

ಏಷ್ಯಾ ಮಾರುಕಟ್ಟೆಗಳ ಮಿಶ್ರ ವಹಿವಾಟಿನಿಂದಾಗಿ ಶೇರುಪೇಟೆಯ ಇಂದಿನ ಆರಂಭಿಕ ವಹಿವಾಟಿನಲ್ಲಿ 31 ಪಾಯಿಂಟ್‌ಗಳ ಕುಸಿತ ಕಂಡಿದೆ.  
 
ಮಾಸಾಂತ್ಯದ ಹಿನ್ನೆಲೆಯಲ್ಲಿ ಹೂಡಿಕೆದಾರರು ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಶೇರುಗಳ ಮಾರಾಟಕ್ಕೆ ಹೆಚ್ಚಿನ ಆಸಕ್ತಿ ತೋರಿದ್ದರಿಂದ ಶೇರುಪೇಟೆ ಸೂಚ್ಯಂಕ ಕುಸಿತ ಕಂಡಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ. 
 
ಕಳೆದ ಎರಡು ದಿನಗಳ ವಹಿವಾಟಿನ ಮುಕ್ತಾಯಕ್ಕೆ 384.82 ಪಾಯಿಂಟ್‌ಗಳ ಚೇತರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 31.38 ಪಾಯಿಂಟ್‌ಗಳ ಕುಸಿತ ಕಂಡು 28,063.95 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 15.20 ಪಾಯಿಂಟ್‌ಗಳ ಕುಸಿತ ಕಂಡು 8,620.45 ಅಂಕಗಳಿಗೆ ತಲುಪಿದೆ.
 
ಲುಪಿನ್, ಎಚ್‌ಡಿಎಫ್‌ಸಿ ಲಿಮಿಟೆಡ್, ಎಕ್ಸಿಸ್ ಬ್ಯಾಂಕ್, ಡಾ.ರೆಡ್ಡಿ ಲ್ಯಾಬ್, ಹೀರೋ ಮೋಟಾರ್ ಕಾರ್ಪೋರೇಶನ್, ಇನ್ಫೋಸಿಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಶೇರುಗಳು ಇಂದಿನ ವಹಿವಾಟಿನಲ್ಲಿ ಶೇ.0.78 ರಷ್ಟು ಕುಸಿತ ಕಂಡಿವೆ.
 
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.0.81 ರಷ್ಟು ಏರಿಕೆ ಕಂಡಿದ್ದರೆ, ಜಪಾನ್‌ನ ನಿಕೈ ಸೂಚ್ಯಂಕ ಶೇ.1.55 ರಷ್ಟು ಇಳಿಕೆ ಕಂಡಿದೆ. ಶಾಂಘೈ ಶೇರುಪೇಟೆ ಸೂಚ್ಯಂಕ ಶೇ.0.40 ರಷ್ಟು ಏರಿಕೆಯಾಗಿದೆ.
 
ಡೊ ಜೊನ್ಸ್ ಶೇರುಪೇಟೆ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.0.42 ರಷ್ಟು ಇಳಿಕೆ ಕಂಡಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಸೆನ್ಸೆಕ್ಸ್: 31 ಪಾಯಿಂಟ್‌ಗಳ ಕುಸಿತ ಕಂಡ ಶೇರುಪೇಟೆ ಸೂಚ್ಯಂಕ

ಮುಂಬೈ: ಏಷ್ಯಾ ಮಾರುಕಟ್ಟೆಗಳ ಮಿಶ್ರ ವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ...

news

ಸೆನ್ಸೆಕ್ಸ್: 66 ಪಾಯಿಂಟ್‌ಗಳ ಅಲ್ಪ ಚೇತರಿಕೆ ಕಂಡ ಶೇರುಸೂಚ್ಯಂಕ

ಮುಂಬೈ: ಶೇರುಪೇಟೆಯ ಇಂದಿನ ಆರಂಭಿಕ ವಹಿವಾಟಿನಲ್ಲಿ ತೀವ್ರ ತೆರನಾದ ತೊಳಲಾಟ ಕಂಡುಬಂದಿದ್ದು, 66 ...

news

ಸೆನ್ಸೆಕ್ಸ್: 33 ಪಾಯಿಂಟ್‌ಗಳ ಕುಸಿತ ಕಂಡ ಶೇರುಪೇಟೆ ಸೂಚ್ಯಂಕ

ಮುಂಬೈ: ವಾರಂತ್ಯದ ವಹಿವಾಟಿನಲ್ಲಿ ಶೇರುಪೇಟೆಯ ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ 33.26 ಪಾಯಿಂಟ್‌ಗಳ ...

news

ಎಸಿ ರೈಲ್ವೆ ಟಿಕೆಟ್‌ನಲ್ಲಿ ಶೇ.75 ರಷ್ಟು ರಿಯಾಯಿತಿ ಪಡೆಯಬಹುದು ನಿಮಗೆ ಗೊತ್ತೆ?

ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ವಿವಿಧ ರೀತಿಯ ರಿಯಾಯಿತಿಗಳನ್ನು ಪ್ರಯಾಣಿಕರಿಗೆ ನೀಡುತ್ತದೆ ಎನ್ನುವುದು ...

Widgets Magazine
Widgets Magazine