Widgets Magazine
Widgets Magazine

ಮುಕೇಶ್ ಅಂಬಾನಿಯಿಂದ ಜಿಯೋ ನೆಟ್‌ವರ್ಕ್ ಅನಾವರಣ: ವೈಸ್ ಕಾಲ್ಸ್ ಉಚಿತ ಘೋಷಣೆ

ನವದೆಹಲಿ, ಗುರುವಾರ, 1 ಸೆಪ್ಟಂಬರ್ 2016 (13:18 IST)

Widgets Magazine

ಜಿಯೋ ನೆಟ್‌ವರ್ಕ್‌ನಲ್ಲಿ ಯಾವುದೇ ನೆಟ್‌ವರ್ಕ್ ವೈಸ್ ಕಾಲ್‌ಗಳು ಉಚಿತವಾಗಿ ಲಭ್ಯವಾಗಲಿವೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ.
ಜಿಯೋ ನೆಟ್‌ವರ್ಕ್‌ನಲ್ಲಿ ದೇಶಾದ್ಯಂತ ರೋಮಿಂಗ್ ಶುಲ್ಕವಿಲ್ಲ. ದೀಪಾವಳಿ ಸೇರಿದಂತೆ ಯಾವುದೇ ಹಬ್ಬಗಳ ಸಂದರ್ಭಗಳಲ್ಲಿ ಶುಲ್ಕದಲ್ಲಿ ಹೆಚ್ಚಳವಿಲ್ಲ ಎಂದು ಅಂಬಾನಿ ಘೋಷಿಸಿದ್ದಾರೆ.
 
ಜಿಯೋ ನೆಟ್‌ವರ್ಕ್ ಪ್ರತಿ ಎಂಬಿಗೆ 5 ಪೈಸೆ ದರ ವಿಧಿಸಲಿದ್ದು ಅಂದರೆ ಪ್ರತಿ ಜಿಬಿಗೆ 50 ರೂಪಾಯಿಗಳಿಗೆ ದೊರೆಯಲಿದೆ. ಜಿಯೋ ನೆಟ್‌ವರ್ಕ್‌ನಲ್ಲಿರುವ ಗ್ರಾಹಕರಿಗೆ ಸಂಸ್ಥೆ ವಿಶೇಷ ಕೊಡುಗೆಯನ್ನು ನೀಡಲು ನಿರ್ಧರಿಸಿದ್ದು ಸೆಪ್ಟೆಂಬರ್ 5 ರಿಂದ ಡಿಸೆಂಬರ್ 31ರವರೆಗೆ ವೈಸ್, ಆ್ಯಪ್ಸ್, 4ಜಿ ಸೇವೆ ಉಚಿತವಾಗಿ ಲಭ್ಯವಾಗಲಿದೆ.    
 
ಭಾರತೀಯರು ಹಿಂದೆ ಗಾಂಧಿಗಿರಿಗೆ ಹೆಸರುವಾಸಿಯಾದಂತೆ ಇದೀಗ ಡೇಟಾಗಿರಿಗೆ ಹೆಸರುವಾಸಿಯಾಗಲಿದ್ದಾರೆ.  ಕಡಿಮೆ ದರ ಪಾವತಿಸಿ ಹೆಚ್ಚು ಡೇಟಾ ಬಳಸಿ. ವಿಶ್ವದಲ್ಲಿಯೇ ಅತಿ ಕಡಿಮೆ ದರ ನಿಗದಿಪಡಿಸಲಾಗಿದೆ. ಪ್ರತಿ ಹಣಕಾಸಿನ ವಹಿವಾಟಿನ ಬಿಲ್ ಸಕಾಲದಲ್ಲಿ ದೊರಯಲಿದೆ ಎಂದು ತಿಳಿಸಿದ್ದಾರೆ. 
 
ಮುಂಬೈನಲ್ಲಿ ಆಯೋಜಿಸಲಾದ 42 ನೇ ಶೇರುದಾರರ ಸಭೆಯಲ್ಲಿ ಮಾತನಾಡಿದ ಅಂಬಾನಿ, ರಿಲಯನ್ಸ್‌ನ ಜಿಯೋ ಸಂಸ್ಥೆ ಎಲ್‌ಫೈ ಬ್ರಾಂಡ್‌ನ 2999 ರೂಪಾಯಿಗಳೊಳಗೆ 4ಜಿ ಸ್ಮಾರ್ಟ್‌ಫೋನ್ ಕೂಡಾ ಮಾರಾಟ ಮಾಡಲಿದೆ ಎಂದು ಹೇಳಿದ್ದಾರೆ. 
 
ಡೇಟಾ ಕೊರತೆಯನ್ನು ನೀಗಿಸಿ ಡೇಟಾವನ್ನು ಕಡಿಮೆ ದರದಲ್ಲಿ ಹೆಚ್ಚು ಹೆಚ್ಚು ದೊರೆಯುವಂತೆ ಮಾಡುವುದೇ ರಿಲಯನ್ಸ್ ಜಿಯೋ ಸಂಸ್ಥೆಯ ಉದ್ದೇಶವಾಗಿದೆ. ಅತ್ಯುನ್ನತ ಗುಣಮಟ್ಟ ಮತ್ತು ವಿಶ್ವದಲ್ಲಿಯೇ ಕಡಿಮೆ ದರ ಪಾವತಿ ನಮ್ಮ ಗುರಿಯಾಗಿದೆ ಎಂದಿದ್ದಾರೆ.  
 
ಪ್ರಧಾನಮಂತ್ರಿ ನರೇಂದ್ರ ಮೋದಿಯವರ 1.2 ಬಿಲಿಯನ್ ಜನತೆಯನ್ನು ಗುರಿಯಾಗಿಸಿಕೊಂಡು ಚಾಲನೆ ನೀಡಿರುವ ಡಿಜಿಟಲ್‌ ಚಳುವಳಿಗೆ ಜಿಯೋ ಪೂರಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 
 
ವಿಶ್ವವೇ ಸಂಪೂರ್ಣವಾಗಿ ಹೊಸ ಯುಗದತ್ತ ಸಾಗುತ್ತಿರುವಾಗ ಭಾರತ ಹಿಂದೆ ಬೀಳುವುದು ಸಾಧ್ಯವಿಲ್ಲ. ದೇಶದ ಯುವಕರಿಗೆ ಉತ್ತಮ ಪರಿಸರ ನೀಡಿದಲ್ಲಿ ವಿಶ್ವವೇ ಆಶ್ಚರ್ಯಚಕಿತರಾಗುವಂತೆ ಕಾರ್ಯ ಮಾಡಿ ತೋರಿಸುತ್ತಾರೆ ಎಂದು ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ತಿಳಿಸಿದ್ದಾರೆ. 
 
ಜಿಯೋ ನೆಟ್‌ವರ್ಕ್‌ನ ಹೈಲೈಟ್ಸ್ .....
 
*  ವಾಯ್ಸ್ ಕರೆಗಳಿಗಾಗಿ ಜಿಯೋ ಬಳಕೆದಾರರು ಯಾವುದೇ ಹಣ ಸಂದಾಯ ಮಾಡಬೇಕಿಲ್ಲ 
 
* ಭಾರತದಾತ್ಯಂತ ರಿಲಯನ್ಸ್ ಜಿಯೋ ರೋಮಿಂಗ್ ಚಾರ್ಚ್‌ ಉಚಿತ
 
* ಕೇವಲ 50 ರೂಪಾಯಿ ದರದಲ್ಲಿ 1ಜಿಬಿ. ಇತರೆ ಟಿಲಿಕಾಂ ಸಂಸ್ಥೆಗೆ ಹೋಲಿಸಿದರೆ ಈ ದರ ಕೇವಲ 1/10th ಅಷ್ಟೇ
 
* ಜಿಯೋ ಡೇಟಾ ಸೇವೆ ಕೇವಲ 10 ಪ್ಲ್ಯಾನ್‌ಗಳನ್ನು ಒಳಕೊಂಡಿದೆ. 
 
* ವಿದ್ಯಾರ್ಥಿಗಳಿಗಾಗಿ ವಿಶೇಷ ರಿಯಾಯಿತಿ ಘೋಷಣೆ. ಇದೀಗ ವಿದ್ಯಾರ್ಥಿಗಳು 25 ಪ್ರತಿಶತ ಹೆಚ್ಚು ಡೇಟಾ ಸೇವೆಯನ್ನು ಪಡೆಯಬಹುದು. 
 
* 135 ಎಮ್‌ಬಿಪಿಎಸ್ ಡೌನ್‌ಲೋಡಿಂಗ್ ಸ್ಪೀಡ್ ಭರವಸೆ ನೀಡಿರುವ ರಿಲಯನ್ಸ್ ಜಿಯೋ ನೆಟ್‌ವರ್ಕ್
 
*15 ಸಾವಿರ ರೂಪಾಯಿ ವಾರ್ಷಿಕ ಚಂದಾ ಮೌಲ್ಯದಲ್ಲಿ ಜಿಯೋ ಅಪ್ಲಿಕೇಶನ್ ಬುಕಿಂಗ್, 2017, ಡಿಸೆಂಬರ್ 31ರವರೆಗೂ ಉಚಿತ 
 
* ಅತೀ ದೊಡ್ಡ 4ಜಿ ಎಲ್‌ಟಿಇ ನೆಟ್‌ವರ್ಕ್ ನೀಡಿದ ಜಿಯೋ
 
* 2016 ಡಿಸೆಂಬರ್‌ವರೆಗೆ ಉಚಿತ ಆಫರ್ಸ್ ನೀಡುತ್ತಿರುವ ಜಿಯೋ
 
* ಎಲ್‌ವೈಎಫ್ ಅಡಿಯಲ್ಲಿ ಕೇವಲ 2999 ರೂಪಾಯಿಗಳಲ್ಲಿ 4ಜಿ ಸ್ಮಾರ್ಟ್‌ಪೋನ್ ಘೋಷಣೆ
 
* ಜಿಯೋ ಕೇವಲ 4ಜಿ ಸೇವೆ ಮಾತ್ರವಲ್ಲದೆ, 5ಜಿ ಹಾಗೂ 6ಜಿ ಸೇವೆ ನೀಡಲು ಸಜ್ಜಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ಚೀನಾದಿಂದ ಎಂಟು ಸಬ್‌ಮರೀನ್‌ ಖರೀದಿಸಲಿರುವ ಪಾಕಿಸ್ತಾನ

ಪಾಕಿಸ್ತಾನ 2028ರೊಳಗೆ 5 ಬಿಲಿಯನ್ ಡಾಲರ್ ವೆಚ್ಚದಲ್ಲಿ ಚೀನಾ ರಾಷ್ಟ್ರದಿಂದ ಎಂಟು ಪರಿವರ್ತಿತ ...

news

ವಾಟ್ಸಪ್‌ ಹಂಚಿಕೆ ನೀತಿ: ಕೇಂದ್ರ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಇತ್ತೀಚಿಗಷ್ಟೇ ತ್ವರಿತ ಸಂದೇಶ ಸೇವೆ ವಾಟ್ಸಪ್, ಬಳಕೆದಾರರ ಡೇಟಾ ಮಾಹಿತಿಯನ್ನು ಮಾತೃ ಸಂಸ್ಥೆ ...

news

ಎಚ್‌ಟಿಸಿಯಿಂದ ನೂತನ ಆವೃತ್ತಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ

ಥೈವಾನ್ ಮೂಲದ ಗ್ರಾಹಕ ಎಲೆಕ್ಟ್ರಾನಿಕ್ ಕಂಪೆನಿ ಎಚ್‌ಟಿಸಿ ಒನ್ ಎ-9 ಸ್ಮಾರ್ಟ್‌ಫೋನ್‌ನ ನೂತನ ...

news

ಸೆನ್ಸೆಕ್ಸ್: 66 ಪಾಯಿಂಟ್‌ಗಳ ಚೇತರಿಕೆ ಕಂಡ ಶೇರು ಸೂಚ್ಯಂಕ

ಮುಂಬೈ: ದೇಶದ ಆರ್ಥಿಕ ಚೇತರಿಕೆ ಶೇ.7.1 ಕ್ಕೆ ಕುಸಿತ ಕಂಡಿದ್ದರೂ ಹೂಡಿಕೆದಾರರು ಶೇರುಗಳ ಖರೀದಿಗೆ ...

Widgets Magazine Widgets Magazine Widgets Magazine