ಸೆನ್ಸೆಕ್ಸ್: ಕೊನೆಗೂ 28 ಸಾವಿರ ಗಡಿ ದಾಟಿದ ಶೇರು ಸಂವೇದಿ ಸೂಚ್ಯಂಕ

ಮುಂಬೈ, ಬುಧವಾರ, 24 ಆಗಸ್ಟ್ 2016 (18:03 IST)

ಅಮೆರಿಕದ ರಿಸರ್ವ್ ಬ್ಯಾಂಕ್ ಬಡ್ಡಿ ದರಗಳ ಏರಿಕೆ ಘೋಷಿಸಿದ ಹಿನ್ನೆಲೆಯಲ್ಲಿ ಶೇರುಪೇಟೆಯ ಇಂದಿನ ವಹಿವಾಟಿನ ಮುಕ್ತಾಯಕ್ಕೆ 70 ಪಾಯಿಂಟ್‌ಗಳ ಚೇತರಿಕೆಯೊಂದಿಗೆ ಮುಕ್ತಾಯಗೊಂಡಿದೆ.
 
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 4.67 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 69.73 ಪಾಯಿಂಟ್‌ಗಳ ಏರಿಕೆ ಕಂಡು 28,059.94 ಅಂಕಗಳಿಗೆ ತಲುಪಿದೆ. 
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 17.70 ಪಾಯಿಂಟ್‌ಗಳ ಏರಿಕೆ ಕಂಡು  8,650.30 ಅಂಕಗಳಿಗೆ ತಲುಪಿದೆ.  
 
ಇನ್ಫೋಸಿಸ್, ಎನ್‌ಟಿಪಿಸಿ, ಸನ್‌ ಫಾರ್ಮಾ, ಪಿಐಎಲ್, ಒಎನ್‌ಜಿಸಿ, ಡಾ,ರೆಡ್ಡಿ, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ ಲಿಮಿಟೆಡ್, ಎಕ್ಸಿಸ್ ಬ್ಯಾಂಕ್, ವಿಪ್ರೋ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ. 
 
ಜಪಾನ್‌ನ ನಿಕೈ ಸೂಚ್ಯಂಕ ಶೇ.0.61 ರಷ್ಟು ಏರಿಕೆ ಕಂಡಿದ್ದರೆ, ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.77 ರಷ್ಟು ಕುಸಿತ ಕಂಡಿದೆ. ಶಾಂಘೈ ಶೇರುಪೇಟೆ ಕೂಡಾ ಶೇ.0.12 ರಷ್ಟು ಇಳಿಕೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಒಂದು ಕೆಜಿ ಈರುಳ್ಳಿಗೆ 5 ಪೈಸೆ?

ಮಹಾರಾಷ್ಟ್ರದಲ್ಲಿ ಈರುಳ್ಳಿ ಸಗಟು ಮಾರಾಟ ಬೆಲೆ ನೆಲಕಚ್ಚಿದ್ದು, ಹರಾಜೊಂದರಲ್ಲಿ ರೈತನಿಗೆ ಒಂದು ಕೆ.ಜಿ ...

news

ಸೆನ್ಸೆಕ್ಸ್: ತೊಳಲಾಟದ ವಹಿವಾಟಿನಲ್ಲಿ ಅಲ್ಪ ಚೇತರಿಕೆ ಕಂಡ ಶೇರುಸೂಚ್ಯಂಕ

ಮುಂಬೈ: ಶೇರುಪೇಟೆಯ ಸೂಚ್ಯಂಕ ಇಂದಿನ ತೊಳಲಾಟದ ವಹಿವಾಟಿನಲ್ಲಿ ಕೊನೆಗೂ 5 ಪಾಯಿಂಟ್‌ಗಳ ಅಲ್ಪ ...

news

ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟು: ಕುಸಿದ ಶೇರುಪೇಟೆ ಸೂಚ್ಯಂಕ

ಮುಂಬೈ: ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನ ಪ್ರಭಾವ ದೇಶಿಯ ಶೇರುಪೇಟೆ ಮೇಲೆ ಬೀರಿದ್ದರಿಂದ ಶೇರುಪೇಟೆ ...

news

ಆರ್‌ಬಿಐಗೆ ಉರ್ಜಿತ್ ಪಟೇಲ್ ನೇಮಕ: ಚೇತರಿಕೆ ಕಂಡ ಶೇರುಸೂಚ್ಯಂಕ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಉರ್ಜಿತ್ ಪಟೇಲ್ ಅವರನ್ನು ಗವರ್ನರ್ ಆಗಿ ನೇಮಕಗೊಂಡಿದ್ದರಿಂದ ...

Widgets Magazine
Widgets Magazine