Widgets Magazine

ಇತರ ಕ್ರೀಡೆಗಳಿಗೂ ಮಾಧ್ಯಮಗಳಲ್ಲಿ ಪ್ರಚಾರ ಅಗತ್ಯ: ಆಡ್ವಾಣಿ

ಕೊಲ್ಕತ್ತಾ| ವೆಬ್‌ದುನಿಯಾ| Last Modified ಮಂಗಳವಾರ, 17 ಡಿಸೆಂಬರ್ 2013 (18:05 IST)
PR
ಐಪಿಎಲ್‌‌ ಶೈಲಿಯ ಪ್ರಾಂಚೈಸಿಗಳು ಸ್ನೂಕರ್‌ ಟೂರ್ನಮೆಂಟ್‌ ನಡೆಸಿದರೆ ಒಳ್ಳೆಯದು ಅದರ ಜೊತೆಗೆ ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗುವುದು ಕೂಡ ಅವಶ್ಯಕವಾಗಿದೆ ಎಂದು 8 ಬಾರಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌‌‌ ಪಂಕಜ್‌ ಅಡ್ವಾಣಿ ತಿಳಿಸಿದ್ದಾರೆ.

ಭಾರತೀಯ ಬಿಲಿಯರ್ಡ್ಸ್( ಸ್ನೂಕರ್ ಮಹಾಸಂಘ )ನಲ್ಲಿ ಆರಂಭಗೊಂಡ ಇಂಡಿಯನ್‌ ಓಪನ್‌‌ನಂತೆ‌ ಹೆಚ್ಚಿನ ಶ್ರೇಯಾಂಕಿತ ಟೂರ್ನಮೆಂಟ್‌‌ಗಳನ್ನು ಆಯೋಜಿಸಿದಲ್ಲಿ ಕ್ರೀಡೆಗೆ ಉತ್ತೇಜನ ದೊರೆಯಲಿದೆ ಎಂದು ಅಡ್ವಾಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ನೂಕರ್‌ ಕ್ರೀಡೆ ಟಿವಿ ಮಾಧ್ಯಮಗಳಲ್ಲಿ ಪ್ರಸಾರಣವಾಗುವುದು ಅವಶ್ಯಕತೆ ಇದೆ . ಇದರಿಂದ ಭಾರತದಲ್ಲಿ ಈ ಕ್ರೀಡೆ ಜನಪ್ರೀಯ ಆಗುತ್ತದೆ. ಇದರಿಂದ ದೇಶದಲ್ಲಿ ಕ್ರೀಡೆಗಳ ಸ್ಥಿತಿ ಸುಧಾರಿಸಲಿದೆ ಎಂದು ಸ್ನೂಕರ್ ಆಟಗಾರ ಪಂಕಜ್‌ ಅಡ್ವಾಣಿ ತಿಳಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :