Widgets Magazine

ನನಗೆ ಮತ್ತೆ ವಿವಾಹವಾಗಲು ಇಷ್ಟ: ಯುವಕರಲ್ಲಿ ಕಿಚ್ಚು ಹಚ್ಚಿದ ಜ್ವಾಲಾ ಗುಟ್ಟಾ

ನವದೆಹಲಿ| ರಾಜೇಶ್ ಪಾಟೀಲ್|
PTI
ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಜ್ವಾಲಾ ಗುಟ್ಟಾ, ಕ್ರೀಡೆಯನ್ನು ಹೊರತುಪಡಿಸಿ ವೈಯಕ್ತಿಕ ವಿಷಯಗಳತ್ತ ಕೂಡಾ ಹೆಡ್‌ಲೈನ್‌ಗಳಲ್ಲಿ ಮಿಂಚಿದ್ದಾರೆ. ಇದೀಗ ನನಗೆ ಮತ್ತೆ ಮದುವೆಯಾಗಲು ಇಷ್ಟ ಎಂದು ನುಲಿದಿದ್ದಾಳೆ.

ಹಲವಾರು ವಿವಾದಗಳ ಮಧ್ಯೆಯೂ ಕಾಮನ್‌ವೆಲ್ತ್ ಗೇಮ್ಸ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ, ವಿಶ್ವ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಕಂಚಿನ ಪದಕ ಪಡೆದು ಅಗ್ರ ಆಟಗಾರ್ತಿಯಾಗಿಯಾಗಿದ್ದಾರೆ. ತೆಲಗು ಚಿತ್ರವೊಂದರಲ್ಲಿ ಐಟಂ ಸಾಂಗ್‌ನಲ್ಲಿ ನಟಿಸಿ ತಮ್ಮ ಮಾದಕ ಸೌಂದರ್ಯವನ್ನು ತೆರೆದಿಟ್ಟಿದ್ದಾರೆ.

ನಾನು ಕೇವಲ ಕ್ರೀಡೆಯತ್ತ ಗಮನಹರಿಸುತ್ತೇನೆ. ನನಗೆ ಯಾವುದು ಸೂಕ್ತವೆನಿಸುತ್ತದೆಯೋ ಆ ಕೆಲಸ ಮಾಡಲು ಬಯಸುತ್ತೇನೆ. ಚಿತ್ರದ ಕಥೆ ಉತ್ತಮವಾಗಿದ್ದಲ್ಲಿ ಚಿತ್ರದಲ್ಲಿ ನಟಿಸಲು ಸಿದ್ಧ ಎಂದು ಘೋಷಿಸಿದ್ದಾರೆ. ಆದರೆ, ಇಲ್ಲಿಯವರೆಗೆ ನಿರ್ಮಾಪಕರು ಚಿತ್ರದಲ್ಲಿ ನಟಿಸುವಂತೆ ಆಹ್ವಾನ ನೀಡಿಲ್ಲ ಎಂದರು.

ನನಗೆ ದೇವರು ಮೋಹಕ ಸೌಂದರ್ಯ ನೀಡಿರುವುದಕ್ಕೆ ನಾನು ತುಂಬಾ ಅದೃಷ್ಠಶಾಲಿಯಾಗಿದ್ದೇನೆ. ನಾನು ಸೌಂದರ್ಯವನ್ನು ಕಾಪಾಡಲು ಅಗತ್ಯವಾದ ಸೌಂದರ್ಯವರ್ಧಕಗಳನ್ನು ಬಳಸುತ್ತೇನೆ ಎಂದು ತಿಳಿಸಿದ್ದಾರೆ.

29 ವರ್ಷ ವಯಸ್ಸಿನ ಜ್ವಾಲಾ ಗುಟ್ಟಾ ವಿವಾಹವಾದ ಆರು ವರ್ಷಗಳ ನಂತರ ತಮ್ಮ ಪತಿ ಬ್ಯಾಡ್ಮಿಂಟನ್ ಕ್ರೀಡಾಪಟು ಚೇತನ್ ಆನಂದ್‌ಗೆ ನೀಡಿದ್ದಾರೆ. ಮರುವಿವಾಹವಾಗಲು ತುಂಬಾ ಇಷ್ಟ. ಆದರೆ, ಸದ್ಯಕ್ಕೆ ಕ್ರೀಡೆಯ ಬಗ್ಗೆ ಮಾತ್ರ ಗಮನಹರಿಸುತ್ತೇನೆ ಎಂದು ಜ್ವಾಲಾ ಗುಟ್ಟಾ ತಮ್ಮ ಮನದಾಳವನ್ನು ಬಹಿರಂಗಗೊಳಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :