Widgets Magazine

ಫೀಫಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಲಿದ್ದಾರೆ ಷಾಂಪೇನ್

ವೆಬ್‌ದುನಿಯಾ| Last Modified ಬುಧವಾರ, 29 ಜನವರಿ 2014 (16:36 IST)
PR
ಲಂಡನ್‌‌ : ಫುಟ್ಬಾಲ್‌‌ನ ವಿಶ್ವ ಮಟ್ಟದ ದೊಡ್ಡ ಸಂಸ್ಥೆಯಾದ ಫಿಫಾದ ಮಾಜಿ ಉಪ ಮಹಾ ಸಚಿವ ಫ್ರಾನ್ಸ್‌‌ನ ಜೆರೋಮ್ ಷಾಂಪೇನ್‌‌ ಮುಂದಿನ ದಿನಗಳಲ್ಲಿ ಫಿಫಾದ ಅಧ್ಯಕ್ಷ ಸ್ಥಾನದಲ್ಲಿ ಸ್ಪರ್ದಿಸಲು ಇಚ್ಛೆಯನ್ನು ವ್ಯಕ್ತ ಪಡಿಸಿದ್ದಾರೆ.

ಲಂಡನನ್‌‌ನಲ್ಲಿ ಒಂದು ಸಮ್ಮೇಳನದಲ್ಲಿ ಫಿಫಾದ ಅಧ್ಯಕ್ಷ ಸ್ಥಾನ ಪಡೆದುಕೊಳ್ಳುವ ವಿಚಾರ ವ್ಯಕ್ತ ಪಡಿಸಿದ್ದಾರೆ ಮತ್ತು ಈ ಸಮ್ಮೆಳನದ ಮೂಲಕ ತಮ್ಮ ಪ್ರಚಾರ ಪ್ರಾರಂಭಿಸಿದ್ದಾರೆ. " ನಾನು 2015ರಲ್ಲಿ ನಡೆಯಲಿರುವ ಫೀಫಾ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕನಾಗಿದ್ದೆನೆ " ಎಂದು ಸಮ್ಮೇಳನದಲ್ಲಿ ಷಾಂಪೇನ್‌ ತಿಳಿಸಿದ್ದಾರೆ .

55 ವರ್ಷದ ಷಾಂಪೇನ್ 1998ರಲ್ಲಿ ಫ್ರಾನ್ಸ್‌‌‌ನಲ್ಲಿ ನಡೆದ ಓಲಂಪಿಕ್‌ನಲ್ಲಿ ಪ್ರೋಟೋಕಾಲ್‌‌ ಪ್ರಮುಖ ರೋಪದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಸಧ್ಯಕ್ಕೆ ಫೀಫಾ ಅದ್ಯಕ್ಷ ಸೆಪ್‌ ಬ್ಲಾಟರ್‌‌ಗೆ ಗೆಲ್ಲಿಸಲು ಫೀಫಾಜೊತೆಗೆ ಕೈಜೋಡಿಸಿದ್ದಾರೆ. 2015ರಲ್ಲಿ ಬ್ಲಾಟರ್‌‌ ತಮ್ಮ ಅಧ್ಯಕ್ಷ ಸ್ಥಾನದಿಂದ ನಿವೃತ್ತಿ ಹೊಂದಲಿದ್ದಾರೆ ಮತ್ತು ಇಲ್ಲಿಯವರೆಗೂ ಕೂಡ ಮುಂದಿನ ಅಧ್ಯಕ್ಷ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸುವ ಯಾವುದೇ ಸೂಚನೆ ನೀಡಿಲ್ಲ. ಈ ಕಾರಣದಿಂದ ಷಾಂಪೇನ್‌ ಮುಂದಿನ ಚುನಾವಣೆಯಲ್ಲಿ ಸ್ಪರ್ದಿಸಲು ಉತ್ಸುಕರಾಗಿದ್ದಾರೆ .


ಇದರಲ್ಲಿ ಇನ್ನಷ್ಟು ಓದಿ :