Widgets Magazine

ಲಂಡನ್ ಚೆಸ್ ಕ್ಲಾಸಿಕ್; ಆನಂದ್‌ಗೆ ಸೋಲಿನ ಆಘಾತ

Viswanathan Anand
ಲಂಡನ್‌‌| ಗಿರಿಧರ್|
WD
ಲಂಡನ್‌ನಲ್ಲಿ ನಡೆಯುತ್ತಿರುವ ಚೆಸ್‌ ಕ್ಲಾಸಿಕ್‌ ಪಂದ್ಯಾವಳಿಯ ನಾಲ್ಕನೇ ಸುತ್ತಿನಲ್ಲಿ ಭಾರತದ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಅಮೆರಿಕದ ಅವರೆದುರು ಸೋಲು ಅನುಭವಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಮೆರಿಕದ ನಕಾಮುರ ಅವರ ಎದುರು ಸೋತಿರುವ ವಿಶ್ವನಾಥನ್‌ ಆನಂದ್‌ ಅವರು ಎರಡು ಅಂಕಗಳೊಂದಿಗೆ ಕಡೇ ಸ್ಥಾನದಲ್ಲಿದ್ದಾರೆ.

ಲಂಡನ್‌ ಕ್ಲಾಸಿಕ್‌ನ 11 ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿದ್ದ ಆನಂದ್‌ ಅವರು ತೀವ್ರ ಒತ್ತಡಕ್ಕೊಳಗಾಗಿದ್ದರಿಂದ ಅಪಾಯ ಆಹ್ವಾನಿಸಲು ಆರಂಭಿಸಿದ್ದರು.

ನಕಾಮುರಾ ಅವರೊಂದಿಗೆ ಆಡುತ್ತಿದ್ದ ವಿಶ್ವನಾಥನ್‌ ಆನಂದ್‌ ಅವರು 29 ನೇ ನಡೆಯಲ್ಲಿ ಎಡವಿದ್ದರಿಂದಾಗಿ ಮುಂದಿನ 20 ನಡೆಗಳಲ್ಲಿ ಸಂಕಷ್ಟ ಅನುಭವಿಸುವ ಮೂಲಕ ಸೋಲೊಪ್ಪಿಕೊಂಡರು.

ಲಂಡನ್‌ ಕ್ಲಾಸಿಕ್‌ ಪಂದ್ಯಾವಳಿಯ ನಾಲ್ಕನೇ ಸುತ್ತಿನಲ್ಲಿ ತಲಾ ಎಂಟು ಅಂಕಗಳಿಸಿದ ಇಂಗ್ಲೆಂಡ್‌ನ ಮ್ಯಾಕ್‌ ಶೇನ್‌ ಅವರು ನಾರ್ವೆಯ ಕಾರ್ಲ್‌‌ಸನ್‌ ಅವರ ಜೊತೆಗೂಡಿದ್ದಾರೆ. ಲ್ಯೂಕ್‌ ಶೇನ್‌ ಅವರು ಡೇವಿಡ್‌ ಹಾವೆಲ್‌ ಅವರನ್ನು ಸೋಲಿಸಿದರು. ಕಾರ್ಲ್‌‌ಸನ್‌ ಅವರು ರಷ್ಯಾದ ವ್ಲಾದಿಮಿರ್‌ ಕಾಮ್ನಿಕ್‌ ಅವರ ವಿರುದ್ದ ನಡೆದ ಪಂದ್ಯದಲ್ಲಿ ಡ್ರಾ ಮಾಡಿಕೊಂಡರು.


ಇದರಲ್ಲಿ ಇನ್ನಷ್ಟು ಓದಿ :