Widgets Magazine

ವಿಶ್ವಕಪ್‌‌‌ ಫುಟ್ಬಾಲ್‌ನಲ್ಲಿ ಭಾರತ ಅರ್ಹತೆ ಪಡೆಯಬಹುದು : ಸಚಿನ್ ತೆಂಡೂಲ್ಕರ್

ಕೊಲ್ಕತ್ತಾ| ವೆಬ್‌ದುನಿಯಾ| Last Modified ಸೋಮವಾರ, 23 ಡಿಸೆಂಬರ್ 2013 (17:29 IST)
PR
ಅಂಡರ್‌-17 ವಿಶ್ವಕಪ್‌ನ ಆತಿಥ್ಯವಹಿಸಿಕೊಂಡಿದೆ ಮತ್ತು 2022ರಲ್ಲಿ ಸೀನಿಯರ್‌‌ ವಿಶ್ವಕಪ್‌ ಸಲುವಾಗಿ ಅರ್ಹತೆ ಪಡೆಯಲು ಗಮನ ಹರಿಸಬೇಕು ಎಂದು ಸಚಿನ್‌ ತೆಂಡೂಲ್ಕರ್‌ ತಿಳಿಸಿದ್ದಾರೆ.

2017ರ ಜ್ಯೂನಿಯರ್‌ ವಿಶ್ವಕಪ್‌ ಆತಿಥ್ಯವಹಿಸಿಕೊಂಡು ಪಂದ್ಯಾವಳಿ ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಮತ್ತು ಭಾರತ ಉತ್ತಮ ರೀತಿಯಲ್ಲಿ ಆಯೋಜಿಸುವ ವಿಶ್ವಾಸ ನನಗಿದೆ ಎಂದು ಫಿಫಾ ವಿಶ್ವ ಕಪ್‌ ಟ್ರೋಪಿಗಾಗಿ ಭಾರತದಲ್ಲಿ ಆಯೋಜಿಸಿದ ಒಂದು ಸಮಾರಂಭದಲ್ಲಿ ಮಾತನಾಡುತ್ತಾ ಸಚಿನ್‌ ಈ ಮಾತನ್ನು ಹೇಳಿದ್ದಾರೆ.

ಪ್ರಕ್ರಿಯೆಯಲ್ಲಿ ನಾವು ಲಕ್ಷವಹಿಸಬೇಕಾಗಿದೆ. ನಾವು ಒಮ್ಮೆಲೆ ಶೇ.100ರಷ್ಟು ಸಫಲರಾಗುವುದಿಲ್ಲ, ಆದರೆ ಹಂತ ಹಂತವಾಗಿ ನಾವು ಸಫಲರಾಗುತ್ತೇವೆ ಎಂದು ಸಚಿನ್‌ ತೆಂಡೂಲ್ಕರ್‌‌ ತಿಳಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :