Widgets Magazine

ಹಾಕಿ ಇಂಡಿಯಾದ ಪ್ರತಿ ಆಟಗಾರರಿಗೆ ತಲಾ 1 ಲಕ್ಷ ಬಹುಮಾನ

ನವದೆಹಲಿ| ವೆಬ್‌ದುನಿಯಾ|
PR
ಮಲೇಷಿಯಾದ ಜೊಹೊರ್ ಬಾರುನಲ್ಲಿ ನಡೆದ ಸುಲ್ತಾನ ಆಫ್ ಜೊಹೊರ್ ಕಪ್ ನಲ್ಲಿ ಭಾರತದ ಅಂಡರ್-21 ಟೀಮ್ ಉತ್ತಮ ಪ್ರದರ್ಶನ ನೀಡಿ ಸರಣಿಯನ್ನು ತಮ್ಮದಾಗಿಸಿಕೋಂಡಿದ್ದಾರೆ. ಈ ಸಾಧನೆಗೆ ಪ್ರತಿ ಆಟಗಾರರಿಗೆ ತಲಾ 1 ರೂಪಾಯಿ ನಿಡುವುದಾಗಿ ಹಾಕಿ ಇಂಡಿಯಾ ಘೋಷಿಸಿದೆ. ಭಾರತ ಫೈನಲ್‌ನಲ್ಲಿ ಮಲೇಷಿಯಾದ ವಿರುದ್ದ 3-0 ಅಂತರದಿಂದ ಗೆದ್ದಿತ್ತು.

ಸಹಾಯಕ ಸಿಬ್ಬಂದಿಗೆ ತಲಾ 50 ಸಾವಿರ ರೂಪಾಯಿ ನೀಡುವುದಾಗಿ ಹಾಕಿ ಇಂಡಿಯಾ ಘೋಷಿಸಿದೆ. ಹರಿಜಿತ್ ಸಿಂಗ್ ಟೂರ್ನಮೆಂಟ್‌ನ ಸರ್ವಶ್ರೇಷ್ಠ ಆಟಗಾರರಾದ ಕಾರಣ ಇವರಿಗೆ ಒಂದು ಲಕ್ಷ ರೂಪಾಯಿ ಹೆಚ್ಚಿಗೆ ಸಿಗಲಿದೆ.

ಭಾರತೀಯ ಮಹಿಳಾ ಟೀಮ್‌‍ನ ಗೋಲ್‌ಕೀಪರ್ ಸವಿತಾ ಅವರಿಗೂ ಕೂಡ ಒಂದು ಲಕ್ಷ ರೂಪಾಯಿ ನೀಡುವುದಾಗಿ ಹಾಕಿ ಇಂಡಿಯಾ ಘೋಷಿಸಿದೆ. ಮಲೇಷಿಯಾದ ಕೌಲಾಲಂಪುರದಲ್ಲಿ ನಡೆದ 8ನೇ ಮಹಿಳಾ ಏಷ್ಯಾ ಹಾಕಿ ಕಪ್‌ನಲ್ಲಿ ಸವಿತಾ ಸರ್ವಶ್ರೇಷ್ಠ ಗೋಲ್‌ಕೀಪರ್‌ ಆಗಿದ್ದರು.


ಇದರಲ್ಲಿ ಇನ್ನಷ್ಟು ಓದಿ :