Widgets Magazine

ಐಪಿಎಲ್ 11ನೇ ಆವೃತ್ತಿ: ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಜಸ್ಥಾನ ರಾಯಲ್ಸ್‌ ತಂಡಗಳು ಆಡಲು ಅರ್ಹ

ನವದೆಹಲಿ, ಶನಿವಾರ, 15 ಜುಲೈ 2017 (10:54 IST)

Widgets Magazine

ನವದೆಹಲಿ:ಮ್ಯಾಚ್‌ ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ಎರಡು ವರ್ಷ ನಿಷೇಧಕ್ಕೊಳಗಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಜಸ್ಥಾನ ರಾಯಲ್ಸ್‌ ತಂಡಗಳು ಐಪಿಎಲ್‌ 11ನೇ ಆವೃತ್ತಿಯ ಟೂರ್ನಿಯಲ್ಲಿ ಆಡಲು ಅರ್ಹತೆ ಪಡೆದುಕೊಂಡಿವೆ. ಈ ಕುರಿತು ಬಿಸಿಸಿಐ ಸ್ಪಷ್ಟಪಡಿಸಿದೆ.
 
ಸುಪ್ರೀಂ ಕೋರ್ಟ್‌ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಲೋಧಾ ಸಮಿತಿ ಎರಡೂ ತಂಡಗಳಿಗೆ ಎರಡು ವರ್ಷಗಳ ಕಾಲ ಐಪಿಎಲ್‌ ಟೂರ್ನಿಯಲ್ಲಿ ಆಡದಂತೆ ನಿಷೇಧ ಹೇರಿತ್ತು. ಇದೀಗ ಈ ನಿಷೇಧ ಅಂತ್ಯವಾಗಿದ್ದು, ಮುಂದಿನ ಐಪಿಎಲ್‌ನಲ್ಲಿ ಚೆನ್ನೈ ಹಾಗೂ ರಾಜಸ್ಥಾನ ತಂಡಗಳು ಆಡಲು ಅರ್ಹವಾಗಿವೆ.
 
ಉಭಯ ತಂಡಗಳ ವೈಭವವನ್ನು ಅಭಿಮಾನಿಗಳು ಮತ್ತೆ ನೋಡಬಹುದು ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ತಿಳಿಸಿದ್ದಾರೆ. ಐಪಿಎಲ್‌ನ ಪ್ರಾಂಚೈಸಿಗಳಾದ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಯಸ್ಥಾನ ರಾಯಲ್ಸ್‌ ತಂಡಗಳನ್ನು 11ನೇ ಆವೃತ್ತಿಯ ಟೂರ್ನಿಗೆ ಆಹ್ವಾನಿಸುತ್ತಿರುವುದು ಖುಷಿಯಾಗುತ್ತಿದೆ. ಉಭಯ ತಂಡಗಳ ಜೊತೆ ನಾವು ಬಲವಾದ ಸಂಬಂಧ ಹೊಂದಿದ್ದೇವೆ. ಅದೇ ರೀತಿ ಮುಂದೆಯೂ ಮುಂದುವರೆಸಿಕೊಂಡು ಹೋಗುವ ವಿಶ್ವಾಸ ತಮಗಿದೆ ಎಂದು ಐಪಿಎಲ್‌ ಅಧ್ಯಕ್ಷ ರಾಜೀವ್‌ ಶುಕ್ಲಾ ಹೇಳಿದ್ದಾರೆ. 
 



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಅರ್ಜುನ್ ರಣತುಂಗಾ ಹೇಳಿಕೆಗೆ ರೊಚ್ಚಿಗೆದ್ದ ಟೀಂ ಇಂಡಿಯಾ ಆಟಗಾರರು

ನವದೆಹಲಿ: 2011 ರ ವಿಶ್ವಕಪ್ ರ ಭಾರತ-ಶ್ರೀಲಂಕಾ ಫೈನಲ್ ಪಂದ್ಯ ಫಿಕ್ಸ್ ಆಗಿತ್ತೆಂದು ಹೇಳಿಕೆ ನೀಡಿದ್ದ ...

news

2011 ರ ವಿಶ್ವಕಪ್ ಕ್ರಿಕೆಟ್ ಫೈನಲ್ ಮೊದಲೇ ಫಿಕ್ಸ್?

ಕೊಲಂಬೋ: 2011 ರಲ್ಲಿ ಭಾರತ ಮತ್ತು ನೆರೆಯ ರಾಷ್ಟ್ರಗಳಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ...

news

ಐಪಿಎಲ್ ಗೆದ್ದ ಮುಂಬೈ ಇಂಡಿಯನ್ಸ್ ಗೆ ಸಿಕ್ಕ ಈ ದುಬಾರಿ ಗಿಫ್ಟ್ ಏನುಗೊತ್ತಾ..?

ಇಂಡಿಯನ್‌ ಪ್ರಿಮಿಯರ್‌ ಲೀಗ್‌ನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್ ಟ್ರೋಫಿಯನ್ನು ಮೂರುಬಾರಿ ...

news

ಎಕ್ಸ್ ಕ್ಯೂಸ್ ಮಿ… ಜಹೀರ್ ಖಾನ್ ಪದವಿಗೆ ಕೊಂಚ ಟ್ವಿಸ್ಟ್ ಕೊಟ್ಟ ಬಿಸಿಸಿಐ

ಮುಂಬೈ: ಟೀಂ ಇಂಡಿಯಾ ಕೋಚ್ ಘೋಷಣೆಯಲ್ಲಿ ನಡೆದಷ್ಟು ಹೈಡ್ರಾಮಾ ಬಹುಶಃ ಯಾರ ರಾಜಕೀಯ ನಾಟಕಗಳಿಗೂ ...

Widgets Magazine Widgets Magazine