ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರಿಸುವ ವಿಚಾರಕ್ಕೆ ಬಿಸಿಸಿಐ ವಿರೋಧ

ಚೆನ್ನೈ, ಸೋಮವಾರ, 31 ಜುಲೈ 2017 (15:45 IST)

ಚೆನ್ನೈ:ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಅನ್ನು ಸೇರಿಸಬೇಕು ಎಂಬ ಐಸಿಸಿ ಕನಸಿಗೆ ವ್ಯಕ್ತಪಡಿಸಿದೆ. 2024ರ ಒಲಿಂಪಿಕ್ಸ್ ಕ್ರೀಡೆ ಪ್ಯಾರಿಸ್ ನಲ್ಲಿ ನಡೆಯಲಿದ್ದು, ಈ ವೇಳೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಆಡಿಸಬೇಕು ಎನ್ನುವುದು ಐಸಿಸಿಯ ಮಹತ್ವಾಕಾಂಕ್ಷೆಯಾಗಿತ್ತು. 
 
ಆದರೆ  ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಸೇರಿಸಲು ವಿಶ್ವದ ಕ್ರಿಕೆಟ್ ಆಡುವ ಎಲ್ಲ ದೇಶಗಳ ಬೆಂಬಲ ಅತ್ಯಗತ್ಯವಾಗಿದ್ದು, ಈಗಾಗಲೇ ಬಹುತೇಕ ಪ್ರಮುಖ ಕ್ರಿಕೆಟ್ ದೇಶಗಳು ಒಪ್ಪಿಗೆ ನೀಡಿವೆ. ಆದರೆ ವಿಶ್ವ ಕ್ರಿಕೆಟ್ ನಲ್ಲಿ ತನ್ನ ಪ್ರಭಾವ  ಬೀರಿರುವ ಬಿಸಿಸಿಐ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.
 
ವಿಶ್ವ ಕ್ರಿಕೆಟ್ ನಲ್ಲಿ ಯಾವುದೇ ಪ್ರಮುಖ ನಿರ್ಣಯ ಕೈಗೊಳ್ಳಲು ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐನ  ಪಾತ್ರ  ಪ್ರಮುಖವಾಗಿರುತ್ತದೆ. ಬಿಸಿಸಿಐ ಒಪ್ಪಿದೆ ಎಂದರೆ ಬಹುತೇಕ ಎಲ್ಲ ಕ್ರಿಕೆಟ್ ರಾಷ್ಟ್ರಗಳೂ ಕೂಡ ಒಪ್ಪಿಗೆ ನೀಡುತ್ತವೆ ಎಂಬುದು ಕ್ರಿಕೆಟ್ ತಜ್ಞರ ಅಭಿಪ್ರಾಯ. ಆದರೆ ಈ ವಿಚಾರಕ್ಕೆ ಬಿಸಿಸಿಐ ಮಾತ್ರ ತನ್ನ ವಿರೋಧ ವ್ಯಕ್ತಪಡಿಸುತ್ತಿರುವುದು ಐಸಿಸಿ ಆಸೆಗೆ ತಣ್ಣೀರೆರಚಿದಂತಾಗಿದೆ. 
 ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಚೀನಾ ಬೆಂಬಲಿಸುತ್ತೀರಾ ಎಂದ ವ್ಯಕ್ತಿಗೆ ಜ್ವಾಲಾ ಗುಟ್ಟಾ ಕೊಟ್ಟ ಉತ್ತರವೇನು ಗೊತ್ತಾ?

ನವದೆಹಲಿ: ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ತನಗೆ ಅನಿಸಿದ್ದನ್ನು ನೇರವಾಗಿ ಹೇಳುವ ಜಾಯಮಾನದವರು. ...

news

ಕೊಹ್ಲಿ ಜತೆ ಬರಿಮೈ ತೋರಿಸಿದ ಕೆಎಲ್ ರಾಹುಲ್ ಕಾಲೆಳೆದ ಯುವರಾಜ್ ಸಿಂಗ್

ಕೊಲೊಂಬೋ: ವಿರಾಟ್ ಕೊಹ್ಲಿ ಜತೆ ಕೊಲೊಂಬೋದಲ್ಲಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಖಾಲಿ ಎದೆ ತೋರಿಸುವ ಫೋಟೋಗೆ ...

news

ಕ್ರೀಡಾಂಗಣದಲ್ಲೇ ವಿರಾಟ್ ಕೊಹ್ಲಿ ಕಿಸ್ಸಿಂಗ್ ಪುರಾಣ!

ಗಾಲೆ: ಶ್ರೀಲಂಕಾ ವಿರುದ್ಧ ಪ್ರಥಮ ಟೆಸ್ಟ್ ಪಂದ್ಯದ ನಾಲ್ಕನೇ ದಿನ ವಿರಾಟ್ ಕೊಹ್ಲಿ ಮೈದಾನದಲ್ಲೇ ಒಬ್ಬರ ...

news

ಕೊಹ್ಲಿಗೊಂದು ಎಚ್ಚರಿಕೆ ಸಂದೇಶ ರವಾನಿಸಿದ ಸೌರವ್ ಗಂಗೂಲಿ

ಮುಂಬೈ: ಕೋಚ್ ಆಯ್ಕೆ ವಿಚಾರದಲ್ಲಿ ರವಿ ಶಾಸ್ತ್ರಿಯನ್ನು ಬೆಂಬಲಿಸಿದ ಮೇಲೆ ಯಾಕೋ ಆಗಾಗ ಅವಕಾಶ ...

Widgets Magazine