ಐಸಿಸಿ ಮಹಿಳಾ ವಿಶ್ವಕಪ್ ಮುಡಿಗೇರಿಸಿಕೊಂಡ ಇಂಗ್ಲೆಂಡ್

ಲಂಡನ್, ಸೋಮವಾರ, 24 ಜುಲೈ 2017 (06:51 IST)

Widgets Magazine

ಲಾರ್ಡ್ಸ್:ಐಸಿಸಿ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು 9 ರನ್ ಗಳ ಅಂತರದಲ್ಲಿ ಮಣಿಸಿದ ಇಂಗ್ಲೆಂಡ್ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿದೆ. ರನ್ನರ್ಸ್ ಅಪ್ ಸ್ಥಾನಕ್ಕೆ ಭಾರತ ತೃಪ್ತಿ ಪಟ್ಟುಕೊಂಡಿದೆ.
 
ಇಂಗ್ಲೆಂಡ್ ನೀಡಿದ್ದ 228 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟುವಲ್ಲಿ ಮಿಥಾಲಿ ರಾಜ್ ತಂಡ ಕೇವಲ 219 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ ಇಂಗ್ಲೆಂಡ್ ವಿರುದ್ಧ 9 ರನ್ ಗಳ ಅಂತರದಲ್ಲಿ ಸೋಲು ಅನುಭವಿಸಿತು. ಈ ಮೂಲಕ ಆತಿಥೇಯ ಇಂಗ್ಲೆಂಡ್ 4ನೇ ಬಾರಿಗೆ ವಿಶ್ವ ಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿತು.
 
ಫೈನಲ್ ಕದನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 228 ರನ್ ಗಳ ಸವಾಲನ್ನು ಒಡ್ಡಿತು. ಇಂಗ್ಲಂಡ್‌ ತಂಡ ನೀಡಿದ 228 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫ‌ಲರಾದ ಭಾರತೀಯ ಮಹಿಳಾ ಆಟಗಾರ್ತಿಯರು ಅಂತಿಮವಾಗಿ 48.4 ಓವರುಗಳಲ್ಲಿ 219 ರನ್ ಗಳಿಗೆ ಆಲೌಟ್‌ ಆಗುವ ಮೂಲಕ ಹಾಲಿ ಚಾಂಪಿಯನ್ನರಿಗೆ 9 ರನ್ ಗಳಿಂದ ಶರಣಾದರು.
 
ಭಾರತಕ್ಕೆ ಪೂನಂ ರಾವತ್‌ (86ರನ್) ಉತ್ತಮ ಆರಂಭ ಒದಗಿಸಿದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಸೆಮಿ ಫೈನಲ್‌ ಪಂದ್ಯದ ಹೀರೋಯಿನ್‌ ಹರ್ಮನ್‌ ಪ್ರೀತ್‌ ಕೌರ್‌ (51ರನ್) ಮತ್ತು ವೇದ ಕೃಷ್ಣಮೂರ್ತಿ (35ರನ್) ಚೊಚ್ಚಲ ವಿಶ್ವಕಪ್‌ ಗೆಲ್ಲುವ ಕನಸಿಗೆ ಇನ್ನಷ್ಟು ಬಲ ತುಂಬಿದರು. ಆದರೆ 19 ರನ್ ಗಳ ಅಂತರದಲ್ಲಿ ಪ್ರಮುಖ 5 ವಿಕೆಟ್‌ಗಳು ಉರುಳಿದ್ದು ಮಿಥಾಲಿ ಪಡೆಗೆ ಮಾರಕವಾಯಿತು.
 



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಸೀನಿಯರ್ಸ್ ತಂಡಕ್ಕೆ ನೋ ಎಂದ ರಾಹುಲ್ ದ್ರಾವಿಡ್

ಮುಂಬೈ: ಟೀಂ ಇಂಡಿಯಾದ ವಿದೇಶಿ ಪ್ರವಾಸಗಳಿಗೆ ರಾಹುಲ್ ದ್ರಾವಿಡ್ ಬ್ಯಾಟಿಂಗ್ ಕೋಚ್ ಆಗಿರುತ್ತಾರೋ, ಇಲ್ಲವೋ ...

news

ಶಾಕಿಂಗ್! ಫೈನಲ್ ಗೂ ಮೊದಲು ಹರ್ಮನ್ ಪ್ರೀತ್ ಗೆ ಗಾಯ!

ಲಂಡನ್: ಚೊಚ್ಚಲ ವಿಶ್ವಕಪ್ ಕಿರೀಟ ಮುಡಿಗೇರಿಸುವ ಉತ್ಸಾಹದಲ್ಲಿರುವ ಟೀಂ ಇಂಡಿಯಾ ಮಹಿಳಾ ತಂಡಕ್ಕೆ ...

news

ನನಗೆ ಇಷ್ಟವಾಗಿದ್ದನ್ನು ಟ್ವೀಟ್ ಮಾಡುತ್ತೇನೆ ಎಂದ ಸೆಹ್ವಾಗ್

ನವದೆಹಲಿ: ವಿಡಂಬನಾತ್ಮಕ ಟ್ವೀಟ್ ಗಳ ಮೂಲಕ ಸುದ್ದಿಯಾಗುವ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮ ಟ್ವೀಟ್ ...

news

ಫೈನಲ್ ಗೂ ಮೊದಲು ಇಂಗ್ಲೆಂಡ್ ಎಚ್ಚರಿಕೆ ನೀಡಿದ ಮಿಥಾಲಿ ರಾಜ್

ಲಂಡನ್: ಭಾರತದ ಮಹಿಳಾ ಕ್ರಿಕೆಟ್ ತಂಡ ಇಂದು ಲಾರ್ಡ್ಸ್ ಅಂಗಣದಲ್ಲಿ ವಿಶ್ವಕಪ್ ಫೈನಲ್ ಪಂದ್ಯವಾಡಲಿದ್ದು, ...

Widgets Magazine Widgets Magazine