ಐಸಿಸಿ ಮಹಿಳಾ ವಿಶ್ವಕಪ್: ಮಿಥಾಲಿ ರಾಜ್ ವಿಶ್ವ ದಾಖಲೆ

ನವದೆಹಲಿ, ಗುರುವಾರ, 13 ಜುಲೈ 2017 (06:46 IST)

ನವದೆಹಲಿ: ಟೀಂ ಇಂಡಿಯಾ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 6000 ರನ್‌ ಗಳಿಸುವ ಮೂಲಕ ವಿಶ್ವದಾಖಲೆ ಮೆರೆದಿದ್ದಾರೆ. ಮಹಿಳಾ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಪೇರಿಸಿದ ಅಗ್ರಮಾನ್ಯ ಆಟಗಾರ್ತಿ ಎಂಬ ಖ್ಯಾತಿಗೆ ಮಿಥಾಲಿ ರಾಜ್ ಭಾಜನರಾಗಿದ್ದಾರೆ.
 
ಮಿಥಾಲಿ ರಾಜ್ ಕೇವಲ 183 ಪಂದ್ಯದಲ್ಲಿ 5993 ರನ್ ಪೇರಿಸಿದ್ದಾರೆ. ಇದಕ್ಕೂ ಮುನ್ನ ಈ ವಿಶ್ವದಾಖಲೆ ಇಂಗ್ಲೆಂಡಿನ ಆಟಗಾರ್ತಿ ಚಾರ್ಲೊಟೆ ಎಡ್ವಾರ್ಡ್ಸ್ ಹೆಸರಿನಲ್ಲಿತ್ತು. ಎಡ್ವರ್ಡ್ಸ್ 191 ಪಂದ್ಯಗಳಲ್ಲಿ 5992 ರನ್ ಸಿಡಿಸಿದ್ದರು. ಇದೀಗ ಎಡ್ವರ್ಡ್ಸ್ ದಾಖಲೆಯನ್ನು ಮಿಥಾಲಿ ಮುರಿದಿದ್ದಾರೆ.
 
ನೂತನ ದಾಖಲೆ ನಿರ್ಮಿಸುತ್ತಿದ್ದಂತೆ ಕ್ರಿಕೆಟ್‌ ದಿಗ್ಗಜರು ಶುಭಾಶಯ ಕೋರಿ ಟ್ವೀಟ್‌ ಮಾಡಿದ್ದಾರೆ. ಮಾಸ್ಟರ್‌ ಬ್ಲಾಸ್ಟರ್‌ ಸಚಿನ್ ತೆಂಡೂಲ್ಕರ್‌, ಟೀಂ ಇಂಡಿಯಾ ಕ್ಯಾಪ್ಟನ್‌‌ ವಿರಾಟ್‌ ಕೊಹ್ಲಿ, ಅಂಜಿಕ್ಯಾ ರಹಾನೆ, ಹಿರಿಯ ಆಟಗಾರ ಗೌತಮ್‌ ಗಂಭೀರ್, ಮನೋಜ್‌ ತಿವಾರಿ ಶುಭ ಕೋರಿದ್ದಾರೆ. 
 ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಹಣವಿಲ್ಲದೇ ಬರ್ಲಿನ್ ನಲ್ಲಿ ಭಿಕ್ಷೆ ಬೇಡುತ್ತಿರುವ ಭಾರತೀಯ ಕ್ರೀಡಾಪಟು!

ನವದೆಹಲಿ: ಇದು ಭಾರತೀಯ ಕ್ರೀಡಾಳುವೊಬ್ಬರ ದುಃಸ್ಥಿತಿ. ಸರ್ಕಾರದಿಂದ ಪಡೆಯಬೇಕಾದ ಹಣ ಬಾರದೇ ಪ್ಯಾರಾ ...

news

ರವಿಶಾಸ್ತ್ರಿ ಕೋಚ್ ಆಗುವುದು ಗಂಗೂಲಿಗೆ ಇಷ್ಟವಿರಲಿಲ್ಲ, ಅದಕ್ಕೆ ಗಂಗೂಲಿ ಮಾಡಿದ್ದು ಏನು ಗೊತ್ತಾ?

ಮುಂಬೈ: ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗುವುದು ಮಾಜಿ ನಾಯಕ ಹಾಗೂ ಕ್ರಿಕೆಟ್ ಸಲಹಾ ಸಮಿತಿ ...

news

ವಿಶ್ವದಾಖಲೆಯ ಹೊಸ್ತಿಲಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್

ಲಂಡನ್: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ನೂತನ ದಾಖಲೆ ...

news

ಭಾರತ ಸರಣಿಗೂ ಮೊದಲೇ ಶ್ರೀಲಂಕಾ ತಂಡದಲ್ಲೊಂದು ಬಿಗ್ ಶಾಕ್

ಕೊಲೊಂಬೋ: ಮಹತ್ವದ ಭಾರತ ಸರಣಿಗೆ ಮೊದಲು ಶ್ರೀಲಂಕಾ ಕ್ರಿಕೆಟ್ ತಂಡದ ದೊಡ್ಡ ವಿಕೆಟ್ ಪತನವಾಗಿದೆ. ಅಂದರೆ, ...

Widgets Magazine