ನೆಹ್ರಾಗೆ ಕೊನೆಯ ಪಂದ್ಯ: ಗೆಲುವಿನ ವಿದಾಯ ನೀಡಲು ಕೊ‍ಹ್ಲಿ ಟೀಂ ಸಜ್ಜು

ನವದೆಹಲಿ, ಬುಧವಾರ, 1 ನವೆಂಬರ್ 2017 (15:37 IST)

ನವದೆಹಲಿ:  18 ವರ್ಷದ ಕ್ರಿಕೆಟ್ ಜೀವನಕ್ಕೆ ಟೀಂ ಇಂಡಿಯಾ ವೇಗಿ ಆಶಿಶ್‌ ನೆಹ್ರಾ ಇಂದು ವಿದಾಯ ಹೇಳಲಿದ್ದಾರೆ. ಕಿವೀಸ್ ವಿರುದ್ಧದ ಇಂದಿನ ಪಂದ್ಯದಲ್ಲಿ ಗೆದ್ದು ನೆಹ್ರಾ ನಿವೃತ್ತಿಯನ್ನು ಸ್ಮರಣೀಯವಾಗಿರಿಸಲು ಕೊಹ್ಲಿ ಪಡೆ ಸಜ್ಜಾಗಿದೆ.


ಫಿರೋಜ್ ಷಾ ಕೊಟ್ಲಾ ಮೈದಾನದಲ್ಲಿ ಕಿವೀಸ್ ವಿರುದ್ಧ ನಡೆಯಲಿರುವ ಟಿ-20 ಪಂದ್ಯ ನೆಹ್ರಾ ವೃತ್ತಿ ಜೀವನದ ಕೊನೆಯ ಪಂದ್ಯವಾಗಲಿದೆ. ಈ ಪಂದ್ಯದ ನಂತರ ನೆಹ್ರಾ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಗುಡ್‌ ಬೈ ಹೇಳಲಿದ್ದಾರೆ.

38 ವರ್ಷದ ನೆಹ್ರಾ ಈಗಾಗಲೇ ವಿದಾಯ ಹೇಳುವುದಾಗಿ ಘೋಷಿಸಿದ್ದಾರೆ. ಅದಕ್ಕಾಗಿ ಟೀಂ ಇಂಡಿಯಾ ಕೂಡ ಅವರನ್ನು ಅದ್ಧೂರಿಯಾಗಿ ಬೀಳ್ಕೊಡಲು ರೆಡಿಯಾಗಿದೆ. ವಿಶೇಷವೆಂದ್ರೆ ಈವರೆಗೂ ಕಿವೀಸ್ ವಿರುದ್ಧ ಭಾರತ ಟಿ-20ಯಲ್ಲಿ ಒಂದೂ ಪಂದ್ಯ ಗೆದ್ದಿಲ್ಲ. ಆದ್ದರಿಂದ ಇಂದಿನ ಪಂದ್ಯ ಗೆದ್ದು ನೆಹ್ರಾ ಅವರನ್ನು ಜಯದ ಮೂಲಕ ಕಳುಹಿಸುವ ಗುರಿ ಹೊಂದಿದೆ.

1999ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯಲ್ಲಿ ನೆಹ್ರಾ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟು 17 ಟೆಸ್ಟ್, 120 ಏಕದಿನ ಪಂದ್ಯ ಹಾಗೂ 26 ಟಿ-20 ಪಂದ್ಯಗಳಲ್ಲಿ ತಮ್ಮ ಬೌಲಿಂಗ್ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ತಂಡದ ಹುಡುಗರಿಗೆ ತಮ್ಮದೇ ರೆಸ್ಟೋರೆಂಟ್ ರುಚಿ ತೋರಿಸಿದ ವಿರಾಟ್ ಕೊಹ್ಲಿ

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗರು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯವಾಡಲು ...

news

ಗೌರವಿಸಲು ಹೋಗಿ ಸೆಹ್ವಾಗ್, ಕರುಣ್ ನಾಯರ್ ಗೆ ಅವಮಾನ ಮಾಡಿದ ದೆಹಲಿ ಕ್ರಿಕೆಟ್ ಸಂಸ್ಥೆ

ನವದೆಹಲಿ: ವೀರೇಂದ್ರ ಸೆಹ್ವಾಗ್ ರ ಗೌರವಾರ್ಥವಾಗಿ ದೆಹಲಿ ಕ್ರಿಕೆಟ್ ಸಂಸ್ಥೆ ಫಿರೋಜ್ ಶಾ ಕೋಟ್ಲಾ ಮೈದಾನದ ...

news

‘ವಾಮಾಚಾರದಿಂದ ಪಾಕ್ ವಿರುದ್ಧ ಟೆಸ್ಟ್ ಸರಣಿ ಗೆದ್ದೆವು’

ಕೊಲೊಂಬೊ: ಕ್ರಿಕೆಟಿಗರು ವಾಮಾಚಾರದ ಮೊರೆ ಹೋಗಿ ಗೆದ್ದಿರುವ ಉದಾಹರಣೆ ಎಲ್ಲಾದರೂ ಕೇಳಿದ್ದೀರಾ? ಆದರೆ ...

news

ಇಂದು ಕೀವೀಸ್ ವಿರುದ್ಧ ಟಿ20 ಪಂದ್ಯ ಗೆದ್ದರೆ ಟೀಂ ಇಂಡಿಯಾ ದಾಖಲೆ

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟ್ ನ ಹಲವು ದಾಖಲೆಗಳನ್ನು ಮಾಡಿದೆ. ಆದರೆ ಈ ಒಂದು ದಾಖಲೆ ಮಾತ್ರ ಇದುವರೆಗೆ ...

Widgets Magazine
Widgets Magazine