ಚೀನಾ ಓಪನ್: ಪಿ.ವಿ.ಸಿಂಧುಗೆ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು

ಫುಝೌ, ಶುಕ್ರವಾರ, 17 ನವೆಂಬರ್ 2017 (18:05 IST)

ಚೀನಾ ಓಪನ್​ ಬ್ಯಾಡ್ಮಿಂಟನ್​ ಟೂರ್ನಿಯ ಕ್ವಾರ್ಟರ್​ಫೈನಲ್​ನಲ್ಲಿ ಭಾರತದ ಹೆಮ್ಮೆಯ ಕುವರಿ ಪಿ.ವಿ.ಸಿಂಧು ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.
ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸಿಂಧು, ತಮ್ಮ ಚೀನಾ ಎದುರಾಳಿ ಗಾವೋ ಪಾಗ್ಜಿ ವಿರುದ್ಧ  11-21, 10-21 ಸೆಟ್‌ಗಳ ಅಂತರದಿಂದ ಸೋಲನುಭವಿಸಿದರು. ಕ್ವಾರ್ಟರ್‌ಫೈನಲ್‌ನಲ್ಲಿ ಗೆದ್ದ ಗಾವೋ ಸೆಮಿಫೈನಲ್ ತಲುಪಿದ್ದಾರೆ.
 
ಸಿಂಧು 2ನೇ ಸುತ್ತಿನ ಪಂದ್ಯದಲ್ಲಿ ಚೀನಾದ ಹನ್​ ಯೂ ಅವರನ್ನು 21-15, 21-13 ಅಂತರದಿಂದ ಸೋಲಿಸುವ ಮೂಲಕ ಕ್ವಾರ್ಟರ್​ಫೈನಲ್​ಗೆ ತಲುಪಿದ್ದರು. ಭಾರತದ ಸೈನಾ ನೆಹ್ವಾಲ್​ ಮತ್ತು ಎಚ್​.ಎಸ್​. ಪ್ರಣಯ್​ 2ನೇ ಸುತ್ತಿನ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ಟೂರ್ನಿಯಿಂದ ನಿರ್ಗಮಿಸಿದ್ದರು. (ಏಜೆನ್ಸೀಸ್​) 
 
ಭಾರತದ ಕ್ರೀಡಾಪಟು ಸೈನಾ ನೆಹ್ವಾಲ್ ಮತ್ತು ಎಚ್.ಎಸ್.ಪ್ರಣಯ್ ಈಗಾಗಲೇ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ. ಸಿಂಧು ಸೋಲಿನಿಂದಾಗಿ ಪಂದ್ಯಾವಳಿಯಲ್ಲಿ ಭಾರತ ಸವಾಲ್ ಅಂತ್ಯಗೊಂಡಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರಣಜಿ ಟ್ರೋಫಿ ಕ್ರಿಕೆಟ್: ಮತ್ತೆ ಕರ್ನಾಟಕದ ಬೊಂಬಾಟ್ ಆಟ

ಕಾನ್ಪುರ: ಉತ್ತರ ಪ್ರದೇಶ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ...

news

ಮಳೆಯ ಕಾಟಕ್ಕೆ ಬೇಸತ್ತ ಭಾರತ-ಲಂಕಾ ಆಟಗಾರರು

ಕೋಲ್ಕೊತ್ತಾ: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕ್ರಿಕೆಟ್ ಗಿಂತ ...

news

ಲಂಕಾ ಹಿಡಿತದಿಂದ ಟೀಂ ಇಂಡಿಯಾವನ್ನು ‘ಪೂಜಾರ’ ನೇ ಕಾಪಾಡಬೇಕು!

ಕೋಲ್ಕೊತ್ತಾ: ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯವೆಂದರೆ ಅದರಲ್ಲಿ ಟೀಂ ಇಂಡಿಯಾದ್ದೇ ಮೇಲುಗೈ ಎಂದು ಎಲ್ಲರೂ ...

news

ರಾಷ್ಟ್ರಗೀತೆ ವೇಳೆ ಚ್ಯುಯಿಂಗ್ ಗಮ್ ಜಗಿದ ಕೊಹ್ಲಿ!

ಕೋಲ್ಕೊತ್ತಾ: ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ಮೊದಲು ರಾಷ್ಟ್ರಗೀತೆ ಹಾಡಲು ಸಾಲಾಗಿ ...

Widgets Magazine
Widgets Magazine