ಕೊರಿಯಾ ಓಪನ್: ಸೆಮಿಫೈನಲ್ ತಲುಪಿದ ಪಿ.ವಿ.ಸಿಂಧು

ಸಿಯೋಲ್, ಶುಕ್ರವಾರ, 15 ಸೆಪ್ಟಂಬರ್ 2017 (17:21 IST)

ಕೊರಿಯಾ ಓಪನ್ ಸೂಪರ್ ಸಿರೀಸ್‌ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ, ಪಿ.ವಿ.ಸಿಂಧು ಸೆಮಿಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ.  
ಕಳೆದ ತಿಂಗಳು ನಡೆದ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸಿಂಧು, ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ತಮ್ಮ ಜಪಾನ್ ಎದುರಾಳಿ ಮಿನತ್ಸು ಮಿತಾನಿ ವಿರುದ್ಧ 21-19 16- 21 21-10 ಸೆಟ್‌ಗಳ ಅಂತರದಿಂದ ಜಯಗಳಿಸಿ ಸೆಮಿಫೈನಲ್ ತಲುಪಿದ್ದಾರೆ.
 
ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಐದನೇ ಸ್ಥಾನ ಪಡೆದಿರುವ ಪಿ.ವಿ.ಸಿಂಧು, ಸೆಮಿಫೈನಲ್‌ನಲ್ಲಿ ಮೂರನೇ ಶ್ರೇಯಾಂಕಿತೆ ಸುಂಗ್ ಜಿ ಹುಯಾನ್ ಅಥವಾ ಆರನೇ ಶ್ರೇಯಾಂಕಿತೆ ಚೀನಾದ ಹೆ ಬಿಂಗ್‌ಜಿಯಾವ್ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.  
 
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಮೀರ್ ವರ್ಮಾ, ತಮ್ಮ ಕೊರಿಯಾ ಎದುರಾಳಿ ಸನ್ ವಾನ್ ವಿರುದ್ಧ 20-22 21-10 21-13 ಸೆಟ್‌ಗಳ ಅಂತರದಿಂದ ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕೋಟಿ ಕೋಟಿ ಜಾಹೀರಾತು ತಿರಸ್ಕರಿಸಿದ ಕೊಹ್ಲಿ.. ಕಾರಣ ಕೇಳಿದರೆ ಸಲ್ಯೂಟ್ ಮಾಡ್ತೀರಿ

ಟೀಮ್ ಇಂಡಿಯಾದ ಯಶಸ್ವಿ ಕ್ಯಾಪ್ಟನ್ ಆಟದಲ್ಲಷ್ಟೇ ಕಿಂಗ್ ಅಲ್ಲ, ಮಾನವೀಯ ಮೌಲ್ಯಗಳಲ್ಲೂ ಕಿಂಗ್ ಎಂಬುವುದನ್ನ ...

news

ಬಹುಕೋಟಿ ಕೊಟ್ಟರೂ ಈ ಜಾಹೀರಾತಿಗೆ ಒಲ್ಲೆ ಎಂದರಂತೆ ವಿರಾಟ್ ಕೊಹ್ಲಿ!

ಮುಂಬೈ: ಟೀಂ ಇಂಡಿಯಾ ವಿರಾಟ್ ಕೊಹ್ಲಿ ಜಾಹೀರಾತು ಮಾರುಕಟ್ಟೆಯಲ್ಲಿ ಎಷ್ಟು ದುಬಾರಿ ಎನ್ನುವುದು ಎಲ್ಲರಿಗೂ ...

news

ರವಿಶಾಸ್ತ್ರಿ ಹೇಳಿಕೆಗೆ ತಲೆಬಾಗಿದ ಬಿಸಿಸಿಐ

ಮುಂಬೈ: ಟೀಂ ಇಂಡಿಯಾ ಆಟಗಾರರಿಗೆ ಎರಡು ಕ್ರಿಕೆಟ್ ಸರಣಿ ನಡುವೆ ಸ್ವಲ್ಪ ಬಿಡುವು ಕೊಡಿ ಎಂಬ ರವಿಶಾಸ್ತ್ರಿ ...

news

ಧೋನಿ ಇಲ್ಲದ ಮೇಲೆ ಟೀಂ ಇಂಡಿಯಾ ಇದ್ದೀತೇ?

ಮುಂಬೈ: ಮುಂದಿನ ವಿಶ್ವಕಪ್ ನಲ್ಲಿ ಧೋನಿ ಆಡುತ್ತಾರೋ ಇಲ್ಲವೋ ಎಂಬ ಪ್ರಶ್ನೆಗಳಿಗೆ ಟೀಂ ಇಂಡಿಯಾ ಕೋಚ್ ರವಿ ...

Widgets Magazine
Widgets Magazine