ಕೊರಿಯಾ ಓಪನ್ ಸೂಪರ್ ಸಿರೀಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ಪಿ.ವಿ.ಸಿಂಧು

ಸಿಯೋಲ್, ಭಾನುವಾರ, 17 ಸೆಪ್ಟಂಬರ್ 2017 (13:11 IST)

ಕೊರಿಯಾ ಓಪನ್ ಸೂಪರ್ ಸಿರೀಸ್‌ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ದೇಶದ ಹೆಮ್ಮೆಯ ಕುವರಿ ಪಿ.ವಿ.ಸಿಂಧು ಜಯಭೇರಿ ಬಾರಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಪಿ.ವಿ.ಸಿಂಧು ತಮ್ಮ ಜಪಾನ್ ಎದುರಾಳಿ ನೊಝೋಮಿ ಓಕುಹರಾ ವಿರುದ್ಧ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ 22-20, 11-21, 21-18 ಸೆಟ್‌ಗಳ ಅಂತರದಿಂದ ಜಯಗಳಿಸಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
 
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಿಂಧು,ಇದೀಗ ಮತ್ತೆ ಕೊರಿಯಾ ಬ್ಯಾಡ್ಮಿಂಟನ್ ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ.
 
ಕೊರಿಯಾ ಓಪನ್ ಸೂಪರ್ ಸಿರೀಸ್ ಗೆದ್ದ ಏಕೈಕ ಮಹಿಳಾ ಕ್ರೀಡಾಪಟು ಎನ್ನುವ ಗೌರವಕ್ಕೆ ಪಿ.ವಿ.ಸಿಂಧು ಪಾತ್ರರಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಪಿ.ವಿ.ಸಿಂಧು ನಝೋಮಿ ಓಕುಹರಾ ಕೊರಿಯಾ ಬ್ಯಾಡ್ಮಿಂಟನ್ ಓಪನ್ ಭಾರತ India Nozomi Okuhara Pv Sindhu Korea Open Super Series Title

ಕ್ರಿಕೆಟ್‌

news

ಕೋಚ್ ಆಯ್ಕೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸೆಹ್ವಾಗ್ ವಿರುದ್ಧ ಗಂಗೂಲಿ ಕಿಡಿ

ಮುಂಬೈ: ಬಿಸಿಸಿಐ ಜತೆ ತನಗೆ ‘ಸೆಟ್ಟಿಂಗ್’ ಸರಿ ಬರಲಿಲ್ಲ. ಅದಕ್ಕೇ ಕೋಚ್ ಆಗಿ ಆಯ್ಕೆಯಾಗಲಿಲ್ಲ ಎಂದು ಕೋಚ್ ...

news

ಆಸೀಸ್ ಹಣಿಯಲು ಹೊರಟ ಕೊಹ್ಲಿಗೆ ಆಟಗಾರರದ್ದೇ ಚಿಂತೆ!

ಚೆನ್ನೈ: ಭಾರತ ಮತ್ತೊಂದು ಸರಣಿಗೆ ಸಜ್ಜಾಗಿದೆ. ಈ ಬಾರಿ ಪ್ರಬಲ ಆಸ್ಟ್ರೇಲಿಯಾ ಜತೆಗೆ. ಆದರೆ ವಿರಾಟ್ ...

news

ಸೆಹ್ವಾಗ್ ಗೆ ಹೆಸರು ಬದಲಾಯಿಸಿಕೊಳ್ಳುವ ಆಸೆಯಂತೆ

ನವದೆಹಲಿ: ಹೊಡೆಬಡಿಯ ಆಟಗಾರ ವೀರೇಂದ್ರ ಸೆಹ್ವಾಗ್ ಗೆ ತಮ್ಮ ಹೆಸರು ಬದಲಾಯಿಸಿಕೊಳ್ಳುವ ಆಸೆಯಂತೆ! ಅದೂ ...

news

ರವಿಚಂದ್ರನ್ ಅಶ್ವಿನ್ ಮೇಲೆ ಅಭಿಮಾನಿಗಳು ಈ ಪರಿ ಸಿಟ್ಟಾಗಿದ್ದು ಏಕೆ?

ಚೆನ್ನೈ: ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೌಂಟಿ ಕ್ರಿಕೆಟ್ ಆಡಲೆಂದು ಟೀಂ ಇಂಡಿಯಾದ ...

Widgets Magazine
Widgets Magazine